LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಕೋವಿಡ್ ಗೆದ್ದ ಒಂದೇ ಕುಟುಂಬ ದ 16 ಜನರು - ಭಯ ಬೇಡ ಕಾಳಜಿ ವಹಿಸಿ ಹುಷಾರಾಗಿರಿ ಎನ್ನುತ್ತಿದೆ ಸುಳ್ಳದ ಈ ಶಿವಳ್ಳಿಮಠ ಫ್ಯಾಮಿಲಿ.....

ಹುಬ್ಬಳ್ಳಿ -

ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ ನ ಆರ್ಭಟ ಹೆಚ್ಚಾಗುತ್ತಿದೆ ಇದನ್ನು ಕಟ್ಟಿ ಹಾಕಲು ರಾಜ್ಯದಲ್ಲಿ ಈಗಾಗಲೇ ಲಾಕ್ ಡೌನ್ ಜಾರಿ ಮಾಡ ಲಾಗಿದ್ದು ಒಂದನೆಯ ಅಲೆಗಿಂತ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇದರೊಂದಿಗೆ ಸಾವು ನೋವಿನ ಪ್ರಮಾಣವು ಹೆಚ್ಚಾಗಿದ್ದು ಇವೆಲ್ಲ ದರ ನಡುವೆ ಇಲ್ಲೊಂದು ಕುಟುಂಬದ 16 ಜನರು ಪಾಸಿಟಿವ್ ಬಂದು ಚಿಕಿತ್ಸೆ ಯನ್ನು ಪಡೆದುಕೊಂಡು ಯಶಸ್ವಿಯಾಗಿ ಗೆದ್ದಿದ್ದಾರೆ. ಹೌದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶಿವಳ್ಳಿಮಠ ಕುಟುಂಬದವರೇ ಇದಕ್ಕೆ ಉದಾಹರಣೆ

ಗ್ರಾಮದ ಶಿವಳ್ಳಿಮಠ ಕುಟುಂಬದ 16 ಜನರಿಗೆ ಇದೇ ತಿಂಗಳು 3ನೇ ತಾರೀಖಿನಂದು ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು ಮನೆಯಲ್ಲಿ ಐಸೋ ಲೇಷನ್ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇದರಲ್ಲಿ ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ. ಈ ಪೈಕಿ 45 ವರ್ಷ ಮೇಲ್ಪಟ್ಟ ನಾಲ್ವರು ಈ ಮೊದಲೇ ಎರಡನೆ ಡೊಸ್ಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡಿ ದ್ದರು ಹಾಗೂ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದರು ಇತರ ಮೂರು ಮಂದಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ.

ಒಂದೇ ಕುಟುಂಬದ 16 ಮಂದಿ ಕೋವಿಡ್  ಕಾಣಿಸಿ ಕೊಂಡು ನಂತರ ಸರಿಯಾಗಿ ಚಿಕಿತ್ಸೆ ಯನ್ನು ಪಡೆದು ಕೊಂಡು ಈಗ ಸಂಪೂರ್ಣವಾಗಿ ಗುಣಮುಖರಾಗಿ ಇನ್ನೂಳಿದವರಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ. ಇನ್ನೂ ಕುಟುಂಬದ ಮುಖ್ಯಸ್ಥ ಮಲ್ಲಯ್ಯ ಶಿವಳ್ಳಿ ಮಠ ಕಳೆದ ತಿಂಗಳು 29 ರಂದು ಸೋಂಕಿನ ಲಕ್ಷಣ ಗಳು ಕಾಣಿಸಿಕೊಂಡಾಗ ಕೋವಿಡ್ ಟೆಸ್ಟ್ ಮಾಡಿಸಿ ಕೊಂಡು ಮನೆಯಲ್ಲಿಯೇ ಹೋಮ್ ಐಸೋಲೇ ಷನ್ ಆಗಿದ್ದು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೆ ಆತ್ಮಸ್ಥೈರ್ಯದಿಂದ ಹಾಗೂ ಮನೆಯಲ್ಲಿನ ಸದಸ್ಯ ರಿಗೂ ಧೈರ್ಯ ತುಂಬಿ ವೈದ್ಯರ ಸಲಹೇ ಸೂಚನೆ ಗಳನ್ನು ತಪ್ಪದೆ ಪಾಲಿಸಿದೆವು ಎಂದು ಹೇಳುತ್ತಾ ಭಯದಲ್ಲಿರುವ ಸಾರ್ವಜನಿಕರಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....