LIVE TV LocalCrimeNationalInternationalPoliticsEducationTechnologyEntertainmentSportsFeature
State News

ನ್ಯಾಯಾಲಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಶಿಕ್ಷಕ.....ರಾಜ್ಯದ ಸಮಸ್ತ ಶಿಕ್ಷಕರಿಗೆ ಸಂದ ಗೆಲುವು ಇಲಾಖೆಗೆ ಮುಖ ಭಂಗ.....ರಾಜ್ಯದ ಸಮಸ್ತ BLO ಶಿಕ್ಷಕರಿಗೆ ಶುಭ ಸುದ್ದಿ.....

.ಬೆಂಗಳೂರು -

ಇಲಾಖೆಯ ವಿರುದ್ಧ ಪ್ರಕರಣ ವೊಂದರಲ್ಲಿ ಶಿಕ್ಷಕ ರೊಬ್ಬರು ಗೆಲುವು ಸಾಧಿಸಿದ್ದಾರೆ ಹೌದು ರವಿ ಜಿ, ಶಿಕ್ಷಕರು, ಹಗರಿಬೊಮ್ಮನಹಳ್ಳಿ  ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಖ್ಯೆ 10350ಕ್ಕೆ ಸಂಬಂಧಿಸಿದಂತೆ ರಾಜ್ಯದ ಇತಿಹಾಸದಲ್ಲಿ ಮಹತ್ವದ ತೀರ್ಪೊಂದನ್ನು KAT (ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ) ಬೆಳಗಾವಿ ಪ್ರಕಟಿ ಸುವ ಮೂಲಕ ರಾಜ್ಯದ ಸಮಸ್ತ BLO ಶಿಕ್ಷಕರಿಗೆ ಶುಭ ಸುದ್ದಿಯನ್ನು ನೀಡಿದೆ.

2022ರ ನಂತರ ಬೇಸಿಗೆ ರಜಾ ಅವಧಿಯಲ್ಲಿ ವಿಧಾನ ಸಭೆ (MLA) ಹಾಗೂ ಲೋಕಸಭೆ (MP) ಚುನಾವಣೆ ಗಳ ಕರ್ತವ್ಯವನ್ನು ನಿರ್ವಹಿಸಿ, ಚುನಾವಣಾ ಅಧಿಕಾರಿ ಗಳಿಂದ ಹಾಜರಾತಿ ಪ್ರಮಾಣಪತ್ರವನ್ನು ಪಡೆದು, KCSCR ನಿಯಮ 113(B)*ರಲ್ಲಿ ಸ್ಪಷ್ಟವಾಗಿ ತಿಳಿಸಿ ರುವಂತೆ ಆ ಕರ್ತವ್ಯದ ಅವಧಿಯನ್ನು ನಮ್ಮ ಸೇವಾ ಪುಸ್ತಕದಲ್ಲಿ EL (Earned Leave) ಆಗಿ ನಮೂದಿಸು ವಂತೆ ಮನವಿ ಸಲ್ಲಿಸಲಾಗಿತ್ತು.

ಆದರೆ 2022ರಲ್ಲಿ ಆರ್ಥಿಕ ಇಲಾಖೆ ನೀಡಿದ ಅಭಿಪ್ರಾಯವನ್ನು ಆಧರಿಸಿ ಗೌರವಧನವನ್ನು ಪಡೆದಿದ್ದಲ್ಲಿ ELಗೆ ಅರ್ಹತೆ ಇರುವುದಿಲ್ಲ ಎಂಬ ಹಿಂಬರಹವನ್ನು ನೀಡುವ ಮೂಲಕ, ಅದನ್ನು ಸೇವಾ ಪುಸ್ತಕದಲ್ಲಿ ನಮೂದಿಸಲು ಕಚೇರಿಯವರು ನಿರಾಕರಿಸಿದ್ದರು.

ಅಂತಿಮವಾಗಿ, ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂಬ ಉದ್ದೇಶದಿಂದ ಕಾನೂನು ಸಲಹೆ ಯನ್ನು ಪಡೆದು ರಾಜ್ಯದ ಪ್ರಸಿದ್ಧ ವಕೀಲರಾದ ಭಜಂತ್ರಿ & ಅಸೋಸಿಯೇಟ್ಸ್, ಬೆಂಗಳೂರು ಅವರಿಗೆ ಪ್ರಕರಣದ ಪರವಾಗಿ ವಾದಿಸಲು ಜವಾಬ್ದಾರಿ ನೀಡ ಲಾಯಿತು.ಈ ಪ್ರಕರಣದಲ್ಲಿ  ಶಿಕ್ಷಕರ ಪರವಾಗಿ ಕಾಳಜಿ ಮತ್ತು ಜವಾಬ್ದಾರಿಯಿಂದ ಕಾನೂನು ಹೋರಾಟ ನಡೆಸಿದ: ನಾಗರಾಜ್ — ವಕೀಲರು, ಹಗರಿಬೊಮ್ಮನಹಳ್ಳಿ  ಸಂಪತ್ ಕುಮಾರ್ ಬೆಳಗಾವಿ ಅವರ ವಿಶೇಷ ಪ್ರಯತ್ನದ ಫಲವಾಗಿ, ಈ ಪ್ರಕರಣದ ತೀರ್ಪು 03-09-2026ರಂದು ಪ್ರಕಟವಾಗಿದೆ.

ತೀರ್ಪಿನನ್ವಯ, 30 ದಿನಗಳೊಳಗಾಗಿ ರವಿ ಜಿ ಅವರ ಸೇವಾ ಪುಸ್ತಕದಲ್ಲಿ EL ಅನ್ನು ನಮೂದಿಸುವಂತೆ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.ಈ ಐತಿಹಾ ಸಿಕ ಕಾನೂನು ಹೋರಾಟಕ್ಕೆ ಸಹಕಾರ ನೀಡಿದ BLO ಮಿತ್ರರು:  ಆಂಜನೇಯ,ಆನಂದ ಹಂಪಾಸಾಗರ, ಯಂಕಾರೆಡ್ಡಿ, ಧನಂಜಯ ಎಂ.ಟಿ. ಶಿವಮೂರ್ತಿ ಸ್ವಾಮಿ,ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಸಮಸ್ತ BLO ಮಿತ್ರರಿಗೆ ಹೃತ್ಪೂರ್ವಕ ಅನಂತ ಧನ್ಯವಾದಗಳು ಶಿಕ್ಷಕ ವಿ ಜಿ ರವಿ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....