LIVE TV LocalCrimeNationalInternationalPoliticsEducationTechnologyEntertainmentSportsFeature
State News

ಆ ಯುವತಿಯ ಜೊತೆಯಲ್ಲಿ ಮತ್ತೊಬ್ಬ ಉತ್ತರ ಕರ್ನಾಟಕದ ಶಾಸಕರ ಸಂಪರ್ಕ.....?

ಬೆಂಗಳೂರು -

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ವಿಚಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೂಂದು ಸುದ್ದಿ ಬಹಿ ರಂಗವಾಗಿದೆ. ಆ ಸಿಡಿ ಯಲ್ಲಿರುವ ಯುವತಿಯ ಜೊತೆಯಲ್ಲಿ ಉತ್ತರ ಕರ್ನಾಟಕ ಮೂಲದ ಶಾಸಕ ರೊಬ್ಬರ ಜೊತೆ ಸುಮಾರು 4 ತಿಂಗಳು ಗಳಿಂದ ಗಳಿಂದ ಶಾಸಕರೊಬ್ಬರೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.ಈ ಒಂದು ಸ್ಪೋಟಕ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.

ಆ ಶಾಸಕರು ಯುವತಿಯ ಪ್ರತಿ ನಡೆಯನ್ನು ಮತ್ತೂಂದು ಪಕ್ಷದ ಶಾಸಕರೊಬ್ಬರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ. ಆದರೆ, ಬಿಜೆಪಿಯ ಆ ಶಾಸಕ ಜಾರಕಿಹೊಳಿ ಸಹೋ ದರರ ಜೊತೆ ಗುರುತಿಸಿಕೊಂಡಿಲ್ಲ.ಅವರ ರಾಜ ಕೀಯ ವಿರೋಧಿ ಬಣದಲ್ಲಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಆ ಶಾಸಕರೊಬ್ಬರಿಗೆ ಸಿ.ಡಿ. ಹಿಂದಿನ ರಹಸ್ಯ ನಾಲ್ಕೈದು ತಿಂಗಳ ಹಿಂದೆಯೇ ಗೊತ್ತಿತ್ತು ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಯುವತಿಯ ಸಿಡಿಆರ್‌ ಶೋಧಿಸಿದಾಗ ಆ ಶಾಸಕರ ಮೊಬೈಲ್‌ಗೆ ನಿರಂತರವಾಗಿ ಕರೆಗಳು ಹೋಗಿರುವು ದು ಪತ್ತೆಯಾಗಿದೆ. ಶಾಸಕನು ಯುವತಿಗೆ ವಾಟ್ಸ್‌ ಆಪ್‌ ಕಾಲ್‌ಗಳನ್ನು ಹೆಚ್ಚು ಮಾಡಿರುವುದು ತಿಳಿದು ಬಂದಿದೆ. ಯುವತಿಯಿಂದ ನರೇಶ್‌ ಗೌಡ ಹಾಗೂ ಶ್ರವಣ್‌ಗೂ ಕರೆಗಳು ಹೋಗಿರುವುದು ಗೊತ್ತಾಗಿದೆ.

ಸಿ.ಡಿ. ಪ್ರಕರಣದ ಶಂಕಿತ ಆರೋಪಿಗಳು ಆಗಾಗ ಸ್ಥಳ ಬದಲಾಯಿಸುತ್ತಿದ್ದಾರೆ ಎಂಬುದು ತನಿಖಾ ಧಿಕಾರಿಗಳಿಗೆ ತಿಳಿದು ಬಂದಿದೆ.ಪ್ರಕರಣದ ಕಿಂಗ್‌ ಪಿನ್‌ಗಳು ಎನ್ನಲಾದ ಇಬ್ಬರು ಪತ್ರಕರ್ತರು ಹಾಗೂ ಯುವತಿ ಗಂಟೆಗೊಮ್ಮೆ ಸ್ಥಳವನ್ನು ಬದಲಾಯಿ ಸುತ್ತಿದ್ದು, ಹೀಗಾಗಿ ಆರೋಪಿತರ ಪತ್ತೆ ಸಾಧ್ಯವಾಗು ತ್ತಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ತನ್ನ ಹೇಳಿಕೆಯ ವೀಡಿಯೋ ಬಿಡುಗಡೆ ಮಾಡಿದ್ದ ನರೇಶ್‌ ಗೌಡನ ಜಾಡು ಹಿಡಿದಾಗ ಆತ ದಿಲ್ಲಿಯಿಂದ ಸುಮಾರು 200ಕಿ.ಮೀ ದೂರದಲ್ಲಿರುವುದು ತಿಳಿದುಬಂದಿತ್ತು. ಆತನನ್ನು ವಶಕ್ಕೆ ಪಡೆಯಲು ಎರಡು ತಂಡಗಳು ದಿಲ್ಲಿಗೆ ತೆರಳಿದ್ದವು. ಆದರೆ ಪ್ರಯೋಜನವಾಗಲಿಲ್ಲ. ನರೇಶ್‌ ಗೌಡ ಜತೆ ಶ್ರವಣ್‌ ಹಾಗೂ ಯುವತಿಯೂ ಇದ್ದಾಳೆ. ಶ್ರವಣ್‌ ಹ್ಯಾಂಕರ್‌ ಆಗಿದ್ದು, ಸಾಫ್ಟ್ವೇರ್‌, ಮೊಬೈಲ್‌, ಲೊಕೇಷನ್‌ ಸೇರಿ ಎಲ್ಲವನ್ನು ಹ್ಯಾಕ್‌ ಮಾಡುವ ನೈಪುಣ್ಯ ಹೊಂದಿದ್ದು ಏನೇ ಆಗಲಿ ಇಷ್ಟೊಂದು ತನಿಖೆಯಿಂದ ಹೊರಬಂದಿದ್ದು ಪೊಲೀಸರು ಬಿಡುವಿಲ್ಲದೇ ತನಿಖೆಯನ್ನು ಮಾಡತಾ ಇದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....