LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಗರ ಸುತ್ತಾಟ ಆರಂಭ ಮಾಡಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ - ಮೇಯರ್ ರಾಮಣ್ಣ ಜೊತೆ ಹುಬ್ಬಳ್ಳಿಯಲ್ಲಿ ಸಿಡಿ ರೌಂಡ್ ಮಾಡಿದ ಆಯುಕ್ತರು ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ವಚ್ಚತೆ ಪರಿಶೀಲನೆ.....

ಹುಬ್ಬಳ್ಳಿ -

ನಗರ ಸುತ್ತಾಟ ಆರಂಭ ಮಾಡಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ - ಮೇಯರ್ ರಾಮಣ್ಣ ಜೊತೆ ಹುಬ್ಬಳ್ಳಿಯಲ್ಲಿ ಸಿಡಿ ರೌಂಡ್ ಮಾಡಿದ ಆಯುಕ್ತರು ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ವಚ್ಚತೆ ಪರಿಶೀಲನೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹೊಸ ದಾಗಿ ಆಯುಕ್ತರಾಗಿ ಬಂದಿರುವ ಡಾ ರುದ್ರೇಶ ಘಾಳಿಯವರು ಸಿಟಿ ರೌಂಡ್ಸ್ ಆರಂಭ ಮಾಡಿದ್ದಾರೆ.ಮೈ ನಡಗುವ ಚಳಿಯ ನಡುವೆ ಬೆಳ್ಳಂ ಬೆಳಿಗ್ಗೆ ಹುಬ್ಬಳ್ಳಿಯ ಹಲವೆಡೆ ಆಯುಕ್ತರು ಸುತ್ತಾಡಿ ಪೌರ ಕಾರ್ಮಿಕರ ಸ್ವಚ್ಚತಾ ಕಾರ್ಯ ಕಸ ಸಂಗ್ರಹಣೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು.

ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ ಅವರೊಂದಿಗೆ ನಗರದ ಹಳೇ ಹುಬ್ಬಳ್ಳಿ ವ್ಯಾಪ್ತಿಯ ವಲಯ 10 ಹಾಗೂ 11ರ ವ್ಯಾಪ್ತಿಯಲ್ಲಿ ಬರುವ ಹಳೇ ಹುಬ್ಬಳ್ಳಿ ಮಾರುಕಟ್ಟೆ, ಅಕ್ಕಸಾಲಿಗರ ಓಣಿ, ಪಠಾಣಗಲ್ಲಿ, ಕಟಕರ ಓಣಿ,ಕರ್ಜಗಿ ಓಣಿ,ಮುಂತಾದ ಕಾಲೋನಿಗಳಲ್ಲಿ ಸುತ್ತಾಡಿ ಸ್ವಚ್ಚತಾ ಕಾರ್ಯ ಪರಿಶೀಲನೆ ಮಾಡಿ ಸಾರ್ವಜನಿಕರೊಂದಿಗೆ ಸಮಸ್ಯೆ ಆಲಿಸಿದರು.

ಇದರೊಂದಿಗೆ ಸಾರ್ವಜನಿಕರು ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಆಟೋ ಟಿಪ್ಪರ್ ಗಳಿಗೆ ಹಾಕುವ ಸಮಯದಲ್ಲಿ ಸರಿಯಾಗಿ ಬೇರ್ಪಡಿಸಿ ನೀಡುತ್ತಿದ್ದಾರೊ ಇಲ್ಲವೊ ಎಂಬೊದನ್ನು ಖುದ್ದಾಗಿ ಪರಿಶೀಲನೆ ಮಾಡಿದರು ಇದರೊಂದಿಗೆ ಹಲವಾರು ವಿಷಯಗಳ ಬಗ್ಗೆ ಪರಿಶೀಲಿಸಿ ಇಂದಿರಾ ನಗರದಲ್ಲಿರುವ ಕಾಂಪ್ಯಾಕ್ಟರ್ ಸ್ಟೇಶನ್ ಹಾಗೂ ಇಂದಿರಾ ಕ್ಯಾಂಟಿನ್ ಕಾರ್ಯವೈಖರಿಯನ್ನು ವೀಕ್ಷಿಸಿ ಸ್ವಚ್ಛತೆ ಹಾಗೂ ಹಸಿರಿಕರಣ ಮಾಡಲು ತಿಳಿಸಲಾಯಿತು.

ಇದರೊಂದಿಗೆ ಪಾಲಿಕೆಯ ಆಯುಕ್ತರು ಸುತ್ತಾಟವನ್ನು ಆರಂಭ ಮಾಡಿದ್ದಾರೆ.ಇನ್ನೂ ಈ ಒಂದು ಈ ಸಂದರ್ಭ ದಲ್ಲಿ ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ ಸದಸ್ಯರು,ಪಾಲಿಕೆಯ ಉಪ ಆಯುಕ್ತರು ಹಾಗೂ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ......

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....