LIVE TV LocalCrimeNationalInternationalPoliticsEducationTechnologyEntertainmentSportsFeature
Local News

ವಾರ್ಡ್ 35 ರಲ್ಲಿ ಜೋರಾಗಿದೆ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರ ಜನ ಬೆಂಬಲದ ನಡುವೆ ಮತಯಾ ಚನೆ ಮಾಡುತ್ತಿದ್ದಾರೆ ಬಸವರಾಜ ಮಾಯಕಾರ.....

ಹುಬ್ಬಳ್ಳಿ -

ಹು-ಧಾ ಮಹಾನಗರ ಪಾಲಿಕೆಯ 35ನೇ ವಾರ್ಡ್‌ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಮಾಯಕಾರ (ಬೆಲ್ಲದ)ಅವರಿಗೆ ಭಾರಿ ಜನಬೆಂಬಲ ವ್ಯಕ್ತವಾಗಿದೆ. ಮತಯಾಚನೆಗೆ ಹೋದ ಅಭ್ಯರ್ಥಿ ಮಾಯಕಾರ ಅವರಿಗೆ ಮತದಾರರು ಆರತಿ ಬೆಳಗಿ ಸ್ವಾಗತ ಕೋರುತ್ತಿರುವುದು ವಿಶೇಷವೇ ಸರಿ

ಹೌದು ರೈತ ಕುಟುಂಬದಿಂದ ಬಂದ ಬಸವರಾಜ ಮಾಯಕಾರ ಅವರು ನೇರ,ನಿಷ್ಠುರ ನಡೆ- ನುಡಿ ಯಿಂದಲೇ ಜನಜನಿತರಾದವರು.ಅವರ ಮೇಲೆ ಒಂದೂ ಕಪ್ಪುಚುಕ್ಕೆ ಇಲ್ಲದೇ ಅವರದು ರಾಜಕೀಯ ಹಿನ್ನೆಲೆ ಕುಟುಂಬವೂ ಅಲ್ಲ

ಆದರೆ, ವಾರ್ಡ್‌ ನ ಹಿರಿಯರು,ಹಿತೈಷಿಗಳ ಆಗ್ರಹದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿರುವ ಇವರಿಗೆ ಮತದಾರರು ಭಾರತೀಯ ಸಂಸ್ಕೃತಿಯ ಅನುಸಾರ ವಾಗಿಯೇ ಸ್ವಾಗತ ಕೋರುತ್ತಿದ್ದಾರೆ.

ಚುನಾವಣೆ ಪ್ರಚಾರದುದ್ದಕ್ಕೂ ಒಳ್ಳೆಯ ವ್ಯಕ್ತಿಗೆ ಅದರಲ್ಲೂ ಪ್ರಾಮಾಣಿಕರಿಗೆ ಮತ ನೀಡಿ ಎಂದು ಮತಯಾಚಣೆ ಮಾಡುತ್ತಿರುವ ಬಸವರಾಜ ಮಾಯಕಾರ ಅವರ ನಡೆ ಅವರ ಸರಳತೆಯನ್ನು ಸಾಕ್ಷಿಕರಿಸುತ್ತಿದೆ.ಹೀಗಾಗಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೂ ಕೈ ಪಡೆಯ ಕಾರ್ಯಕರ್ತರ ಜತೆ ಜತೆಗೆ ಪಕ್ಷಾತೀತವಾಗಿ ಜನ ಬೆಂಬಲ ವ್ಯಕ್ತಪಡಿಸುತ್ತಿ ದ್ದಾರೆ.

ವಾರ್ಡ್‌ ನ ಭೈರಿದೇವರಕೊಪ್ಪ,ಈಶ್ವರನಗರ, ರೇಣು ಕಾನಗರ,ಚೈತನ್ಯ ಕಾಲೊನಿ,ಶಾಂತಿನಿಕೇತನ, ಎಪಿಎಂಸಿ ಆವರಣ,ಮಾಯಕಾರ ಕಾಲೊನಿ, ಸದಾಶಿವನಗರ ಬಡಾವಣೆಗಳಿಗೆ ಬಸವರಾಜ ಮಾಯಕಾರ ಹೋದಾಗ ಮಹಿಳೆಯರಾದಿಯಾಗಿ ಅದ್ಧೂರಿ ಸ್ವಾಗತ ನೀಡುತ್ತಿದ್ದಾರೆ.

ಈ ಮಧ್ಯೆ ಈಶ್ವರನಗರದ ಸಂಜು ದೇಸಾಯಿ ಅವರ ಧರ್ಮಪತ್ನಿ ಶೈಲಾ ಅವರು ಸಹೋದರನೇ ಗೆದ್ದುಬಾ ಎಂಬ ಹಾರೈಕೆ ಜತೆಗೆ 5000 ಸಾವಿರ ರೂ.ನೀಡಿ ಇದು ನಿಮ್ಮ ಗೆಲವಿಗೆ ನನ್ನ ಕೊಡುಗೆ ಎಂದು ಶುಭ ಕೋರಿದ್ದು ವಿಶೇಷ.ಹೀಗೆ ಹಲವಾರು ರೀತಿಯಲ್ಲಿ ಜನರು ಬಸವರಾಜ ಮಾಯಕಾರ ಅವರಿಗೆ ಬೆಂಬಲ ವಾಗಿ ನಿಂತಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....