LIVE TV LocalCrimeNationalInternationalPoliticsEducationTechnologyEntertainmentSportsFeature
State News

ಪಠ್ಯಪುಸ್ತಕ ವಿವಾದ ಕುರಿತು CM ಭೇಟಿಯಾದ ಶಿಕ್ಷಣ ಸಚಿವ ಬಿ ಸಿ ನಾಗೇಶ್ - ಭೇಟಿ ಮಾಡಿ ಚರ್ಚೆ ಮಾಡಿದ ಸಚಿವ.....

ಬೆಂಗಳೂರು -

ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ಸಿಎಂ ಭೇಟಿ ಮಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪಠ್ಯಪುಸ್ತಕ ಪರಿಷ್ಕರಣೆ ಗೊಂದಲದ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಹೌದು ಆರ್ ಎಸ್‌ಎಸ್ ಪ್ರಮುಖರ ಸಭೆಯಲ್ಲಿ ಭಾಗವ ಹಿಸಿದ್ದ ಸಚಿವ ನಾಗೇಶ್ ಇಂದು ಆರ್.ಟಿ.ನಗರದ ನಿವಾಸ ದಲ್ಲಿ ಸಿಎಂ ಬೊಮ್ಮಾಯಿ ಭೇಟಿಯಾದರು.

ಆ ಸಭೆ ಹಾಗೂ ಆರ್ ಎಸ್‌ಎಸ್ ನವರ ಸಂದೇಶದ ಬಗ್ಗೆ ಸಿಎಂ ಗೆ ನಾಗೇಶ್ ಮಾಹಿತಿ ನೀಡಿದ್ದಾರೆ.ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ಸರಿಪಡಿಸುವ ಸಂಬಂಧವೂ ಸಮಾಲೋಚನೆ ನಡೆಸಲಾಗಿದೆ ಎನ್ನಲಾಗಿದೆ.

ಜನರ ಅವಗಾಹನೆಗೆ ಪಠ್ಯ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಸಾಹಿತ್ಯಿಕ ಮತ್ತು ರಾಜಕೀಯವಾಗಿ ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಮತ್ತು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಗಳು ಯಾವ ಪಠ್ಯವನ್ನು ತೆಗೆದು ಯಾವುದನ್ನು ಸೇರ್ಪಡೆ ಮಾಡಿದ್ದರು ಎಂಬ ವಿವರಗಳನ್ನು ಸಾರ್ವಜನಿ ಕರಿಗೆ ಮಾಹಿತಿ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ಮಾಹಿತಿಯನ್ನು ಸದ್ಯದಲ್ಲಿಯೇ ಶಿಕ್ಷಣ ಇಲಾಖೆಯು ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‌ ಸೈಟ್‌ನಲ್ಲಿ ಪ್ರಕಟಿಸ ಲಿದೆ.ಬಳಿಕ ಎರಡೂ ವಿಚಾರವಾಗಿ ಸಾರ್ವಜನಿಕರು ಮುಕ್ತ ವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗುತ್ತದೆ.ಬಳಿಕ ಅಗತ್ಯಬಿದ್ದರೆ ಚರ್ಚಿಸಿ ಯಾವ ವಿಷಯಗಳನ್ನು ಸೇರ್ಪಡೆ ಮಾಡಬೇಕು ಮತ್ತು ಬಿಡಬೇಕು ಎಂಬ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....