LIVE TV LocalCrimeNationalInternationalPoliticsEducationTechnologyEntertainmentSportsFeature
State News

ಧಾರವಾಡ ಜಿಲ್ಲೆಯ ಹೆಮ್ಮೆಯ ಕುಸ್ತಿಪಟು ಫಕೀರಪ್ಪ ಇನ್ನೂ ನೆನಪು ಮಾತ್ರ - ಸಣ್ಣ ವಯಸ್ಸಿನ ಪೈಲ್ವಾನ್ ನಿಧನದ ಸುದ್ದಿ ಕೇಳಿ ಶಾಕ್ ಗೊಂಡ ಜಿಲ್ಲೆಯ ಕುಸ್ತಿಪಟುಗಳು.....

ಧಾರವಾಡ -

ಧಾರವಾಡ ಜಿಲ್ಲೆಯ ಹೆಮ್ಮೆಯ ಕುಸ್ತಿಪಟು ಫಕೀರಪ್ಪ ಇನ್ನೂ ನೆನಪು ಮಾತ್ರ - ಸಣ್ಣ ವಯಸ್ಸಿನ ಪೈಲ್ವಾನ್ ನಿಧನದ ಸುದ್ದಿ ಕೇಳಿ ಶಾಕ್ ಗೊಂಡ ಜಿಲ್ಲೆಯ ಕುಸ್ತಿಪಟುಗಳು

ಧಾರವಾಡ ಜಿಲ್ಲೆಯ ಯುವ ಕುಸ್ತಿಪಟು ಫಕೀರಪ್ಪ ಲಕ್ಷ್ಮಪ್ಪ ಬೋಸನೂರು ನಿಧನರಾ ಗಿದ್ದಾರೆ.ಧಾರವಾಡ ತಾಲ್ಲೂಕಿನ ಕರಡಿಕೊಪ್ಪ ಗ್ರಾಮದವರಾಗಿದ್ದ ಫಕೀರಪ್ಪ ಅವರು ಕುಸ್ತಿ ಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಧನೆಯನ್ನು ಮಾಡಿದ್ದರು.ಬಯಲು ಕುಸ್ತಿಯಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೆ ಹಾಕಿಕೊಂಡಿದ್ದ ಇವರು ಧಾರವಾಡ ಜಿಲ್ಲೆಯ ಹೆಮ್ಮೆಯ ಕುಸ್ತಿಪಟು ಎಂದೇ ಹೆಸರಾಗಿದ್ದರು.

ಯುವ ಉತ್ಸಾಹಿ ಕುಸ್ತಿ ಪಟು ಎಂದೇ ಹೆಸರಾಗಿದ್ದ ಇವರ ನಿಧನಕ್ಕೆ ಜಿಲ್ಲೆಯ ಇವರ ಅಪಾರ ಅಭಿ ಮಾನಿಗಳು ಆಪ್ತರು ಸ್ನೇಹಿತರು ಸೇರಿದಂತೆ ಹಲವರು ಕಂಬನಿಯನ್ನು ಮಿಡಿದಿದ್ದಾರೆ.ಇನ್ನೂ ಆರೋಗ್ಯವಾಗಿದ್ದ ಫಕೀರಪ್ಪನಿಗೆ ಏಕಾಎಕಿಯಾಗಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾ ಯಿತು

ಆದರೂ ಚಿಕಿತ್ಸೆ ಫಲಿಸದೇ ನಿಧನರಾಗಿದ್ದು ಕುಸ್ತಿ ಕ್ಷೇತ್ರದಲ್ಲಿ ತುಂಬಲಾರದ ನಷ್ಟವಾಗಿದೆ. ಧಾರವಾಡ ಜಿಲ್ಲೆಯ ಹೆಮ್ಮೆಯ ಕುಸ್ತಿಪಟು ಎಂದೇ ಗುರುತಿಸಿಕೊಂಡಿದ್ದ ಫಕೀರಪ್ಪ ಅವರ ಸಾವು ಜಿಲ್ಲೆಯ ಪೈಲ್ವಾನರಿಗೆ ಶಾಕ್ ನೀಡಿದ್ದು ಅಕಾಲಿಕ ನಿಧನದ ಸುದ್ದಿ ಮನಸ್ಸಿಗೆ ನೋವುಂಟಾ ಗಿದ್ದು ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಭಗವಂ ತನಲ್ಲಿ ಜಿಲ್ಲೆಯ ಕುಸ್ತಿ ಪಟುಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....