LIVE TV LocalCrimeNationalInternationalPoliticsEducationTechnologyEntertainmentSportsFeature
State News

ವಿಕಲಚೇತನ ನಾರಾಯಣ ನಿಗೆ ಆಸರೆಯಾದ ಸಚಿವ ಸಂತೋಷ ಲಾಡ್ - ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಎರಡು ದಿನಗಳಲ್ಲಿ ನುಡಿದಂತೆ ನಡೆದು ಹೊಸ ಸ್ಕೂಟರ್ ವಿತರಣೆ ಮಾಡಿದ ಸಚಿವರು.....

ಹುಬ್ಬಳ್ಳಿ -

ವಿಕಲಚೇತನ ನಾರಾಯಣ ನಿಗೆ ಆಸರೆಯಾದ ಸಚಿವ ಸಂತೋಷ ಲಾಡ್ - ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಎರಡು ದಿನಗಳಲ್ಲಿ ನುಡಿದಂತೆ ನಡೆದು ಹೊಸ ಸ್ಕೂಟರ್ ವಿತರಣೆ ಮಾಡಿದ ಸಚಿವರು.

ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ತುಂಬಾ ಅರ್ಥಪೂರ್ಣವಾಗಿ ವಿಶೇಷವಾಗಿ ಮಾಡುತ್ತಾ ಗಮನ ಸೆಳೆಯುತ್ತಿರುವ ಸಚಿವ ಸಂತೋಷ ಲಾಡ್ ಈಗ ಮತ್ತೊಂದು ಕೆಲಸದ ಮೂಲಕ ನೆರವಾಗಿದ್ದಾರೆ.ಹೌದು ಕಳೆದ ಅಕ್ಟೋಬರ್ 28 ರಂದು ಧಾರವಾಡದಲ್ಲಿ ನಡೆದ ಜಿಲ್ಲಾ ಕಟ್ಟಡ ಕಾರ್ಮಿಕರ ಸಮಾವೇಶದಲ್ಲಿ ಸಚಿವ ಸಂತೋಷ ಲಾಡ್ ಭಾಗವಹಿಸಿದ್ದರು.ಈ ಒಂದು ಸಮಯ ದಲ್ಲಿ ನಾರಾಯಣ ಶಿರಗುಪ್ಪಿ ಎಂಬ ಹಿರಿಯ ಕಟ್ಟಡ ಕಾರ್ಮಿಕರೊಬ್ಬರ ಕಾಲಿಗೆ ಪೆಟ್ಟು ಮಾಡಿ ಕೊಂಡಿರುವ ವಿಚಾರ ಸಂತೋಷ ಲಾಡ್ ಗಮನಕ್ಕೆ ಬಂದಿತ್ತು.

ಇನ್ನೂ ಇತ್ತ ನಡೆಯಲಾಗದ ಸ್ಥಿತಿಯಲ್ಲಿರುವ ನಾರಾಯಣ ನ ಪರಸ್ಥಿತಿಯನ್ನು ನೋಡಿದ ಸಚಿವರ ಗಮನಕ್ಕೆ ಬರುತ್ತಿದ್ದಂತೆ ಈ ಒಂದು ವಿಚಾರವನ್ನು ಗಂಭೀರವಾಗಿ ತಗೆದುಕೊಂಡು ನಾರಾಯಣನಿಗೆ ಏನಾದರೂ ಸಹಾಯ ಮಾಡು ತ್ತೇನೆ ಎಂದು ಹೇಳಿದ್ದರು.ಸಮಸ್ಯೆ ಗಮನಕ್ಕೆ ಬಂದು ನಾಲ್ಕೈದು ದಿನಗಳ ಒಳಗಾಗಿ ಸಧ್ಯ ನಾರಾಯಣನಿಗೆ ಸಚಿವ ಸಂತೋಷ ಲಾಡ್ ನೆರವಾಗಿದ್ದಾರೆ.ಅಸಹಾಯಕತೆಯನ್ನು ತೋಡಿ ಕೊಂಡಿದ್ದ ನಾರಾಯಣನಿಗೆ ಸಚಿವ ಸಂತೋಷ ಲಾಡ್ ವಯಕ್ತಿಕವಾಗಿ ನೆರವನ್ನು ನೀಡಿದ್ದಾರೆ.

ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ನಡೆಯಲು ಬಾದ ಈ ವಿಶೇಷ ಚೇತನ ನಾರಾ ಯಣನಿಗೆ ಹೊಸ ಸ್ಕೂಟರ್ ಕೊಡಿಸುವಂತೆ ಸೂಚಿಸಿದ ಬೆನ್ನಲ್ಲೇ ಕನ್ನಡ ರಾಜ್ಯೋತ್ಸವದ ದಿನದಂದು ಅವರಿಗೆ ಹೊಸ ಸ್ಕೂಟರ್ ವಿತರಿಸ ಲಾಯಿತು.

ನಾರಾಯಣ ಶಿರಗುಪ್ಪಿ ಅವರಿಗೆ ಈ ಸಣ್ಣ ಸಹಾಯ ಆಸರೆಯಾದರೆ ನಮ್ಮ ಪ್ರಯತ್ನ ಸಾರ್ಥಕವಾಯಿತು ಎಂಬ ಮಾತುಗಳನ್ನು ಸಚಿವರು ತಮ್ಮ ಫೇಸ್ ಬುಕ್ ನಲ್ಲಿ ಉಲ್ಲೇಖ ಮಾಡಿಕೊಂಡು ಸಧ್ಯ ಸಚಿವರ ಈ ಒಂದು ನಡೆಗೆ ಮೆಚ್ಚುಗೆ ಕಂಡು ಬರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....