LIVE TV LocalCrimeNationalInternationalPoliticsEducationTechnologyEntertainmentSportsFeature
State News

30 ವರ್ಷದ ಸರ್ಕಾರಿ ನೌಕರಿಯಲ್ಲಿ ಒಂದೇ ಒಂದು ರಜೆ ಇಲ್ಲ ಶಿಕ್ಷಕರಿಗೆ, ವಿದ್ಯಾರ್ಥಿ ಗಳಿಗೆ ಅಚ್ಚು ಮೆಚ್ಚಿನ ಸೋಮಶೇಖರ್ ಇಂದು ನಿವೃತ್ತಿ

ಮೈಸೂರು -

ಉದ್ಯೋಗದಲ್ಲಿರುವ ಪ್ರತಿಯೊಬ್ಬರು ರಜಾ ದಿನಗಳಿಗಾಗಿ ಕಾದು ಕುಳಿತಿರುತ್ತಾರೆ.ಅದರಲ್ಲೂ ಸರ್ಕಾರಿ ಉದ್ಯೋಗದ ಲ್ಲಿರುವ ಕೆಲವರು ಕೆಲಸ ಮಾಡುವುದಕ್ಕಿಂತ ಕಾಲ ಹರಣ ಮಾಡುವುದೇ ಹೆಚ್ಚು ಎಂಬ ಮಾತುಗಳು ಕೇಳಿ ಬರುತ್ತವೆ. ಆದರೆ ಇದಕ್ಕೆ ಹೊರತಾದ ಉದಾಹರಣೆಗಳೂ ಸಿಗುತ್ತವೆ ಆದರೆ ಅದು ಬಲು ಅಪರೂಪ.ಅಂತದೊಂದು ವಿಶೇಷ ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾಗಿದೆ ಪ್ತಕರಣವೊಂದು ಹೌದು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕಳೆದ 30 ವರ್ಷ ಗಳಿಂದ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಸೇವಾ ವಧಿಯಲ್ಲಿ ಒಂದೇ ಒಂದು ದಿನ ಕೂಡ ರಜಾ ಹಾಕಿಲ್ಲವೆಂ ದರೆ ನೀವು ನಂಬಲೇಬೇಕು.ಕುವೆಂಪು ವಿವಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಪಿ.ಸಿ. ಸೋಮ ಶೇಖರ್ ಇಂಥದೊಂದು ಅಪರೂಪದ ವ್ಯಕ್ತಿತ್ವ ಹೊಂದಿ ದವರಾಗಿ ಸಧ್ಯ ನಿವೃತ್ತರಾಗುತ್ತಿದ್ದಾರೆ.

ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ಸಹ ಸಿಬ್ಬಂದಿ ಪಾಲಿಗೆ ಸೋಮಣ್ಣ ಎಂದೇ ಆತ್ಮೀಯವಾಗಿ ಗುರುತಿಸಿಕೊಂಡಿರುವ ಇವರು ಶಿವಮೊಗ್ಗ ಜಿಲ್ಲೆ ಸೊರಬದವರು.1991 ರಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಹಂಗಾಮಿ ನೌಕರ ನಾಗಿ ಕೆಲಸಕ್ಕೆ ಸೇರಿದ್ದ ಇವರು ಮುಂದೆ ಹುದ್ದೆ ಕಾಯಂ ಆಗಿ ಪ್ರಥಮ ದರ್ಜೆ ಸಹಾಯಕರಾಗಿದ್ದರು.ತಮ್ಮ ಈ ಸುದೀರ್ಘ 30 ವರ್ಷಗಳ ಸೇವಾವಧಿಯಲ್ಲಿ ಒಂದು ದಿನವೂ ರಜಾ ಹಾಕದೆ ಕೆಲಸ ಮಾಡಿದ ಇವರು ಇಂದು ನಿವೃತ್ತರಾಗುತ್ತಿದ್ದಾರೆ.ವಿಶೇಷ ಸಂಗತಿ ಎಂದರೆ ತಮ್ಮ ದುಡಿ ಮೆಯ ಹಣ ಕೂಡಿಟ್ಟು ವಿಶ್ವವಿದ್ಯಾನಿಲಯದ ಕಲಾ, ವಿಜ್ಞಾನ,ವಾಣಿಜ್ಯ ಹಾಗೂ ಶಿಕ್ಷಣ ವಿಭಾಗದಲ್ಲಿ ತಲಾ ಒಂದೊಂದು ಚಿನ್ನದ ಪದಕ ದತ್ತಿ ಇಟ್ಟಿದ್ದಾರೆ.ಇಂದು ನಿವೃತ್ತಿಯಾಗುತ್ತಿರುವ ಸೋಮಣ್ಣ ಅವರ ಮುಂದಿನ ಜೀವನಕ್ಕೆ 'ಆಲ್ ದ ಬೆಸ್ಟ್'.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....