LIVE TV LocalCrimeNationalInternationalPoliticsEducationTechnologyEntertainmentSportsFeature
State News

BRTS ಅವೈಜ್ಞಾನಿಕ ಫ್ಲೈಓವರ್ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ..

ಹುಬ್ಬಳ್ಳಿ ಧಾರವಾಡ -

BRTS ಅವೈಜ್ಞಾನಿಕ ಫ್ಲೈಓವರ್ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ BRTS ಬಂದ್ ಮಾಡಿ ಮೆಟ್ರೋ ರೈಲು ಯೋಜನೆ ಜಾರಿಗೊಳಿಸಿ ಹೊಟೇಲ್ ಉದ್ಯಮಿ ರಮಾನಂದ ಶೆಟ್ಟಿ ಆಗ್ರಹ ಹೌದು ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಇರುವ ಬಿಆರ್ ಟಿ ಎಸ್ ಯೋಜನೆ ಆರಂಭ ದಿಂದ ಈವರೆಗೆ ಸಾರ್ವಜನಿಕ ರಿಂದ ಸಾಕಷ್ಟು ಪ್ರಮಾಣದಲ್ಲಿ ಅಸಮಾಧಾನ ಆಕ್ರೋಶ ಕೇಳಿ ಬರುತ್ತಿದ್ದು ಸಧ್ಯ ಹುಬ್ಬಳ್ಳಿ-ಧಾರವಾ ಡದ ಜನತೆಯ ಪರವಾಗಿ ಹೊಟೇಲ್ ಉದ್ಯಮಿ ರಮಾನಂದ ಶೆಟ್ಟಿ ಯವರು ತುರ್ತು ಮನವಿ ಮಾಡಿದ್ದಾರೆ ಅವೈಜ್ಞಾನಿಕ ಫ್ಲೈಓವರ್ ಕಾಮಗಾರಿಗೆ ಬ್ರೇಕ್ ಹಾಕಿ ನವನಗರದವರೆಗೆ ವಿಸ್ತರಿಸಿ ಮೆಟ್ರೋ ರೈಲು ಯೋಜನೆ ಜಾರಿಗೊಳಿಸಿ ಎಂದು ಒತ್ತಾಯ ಮಾಡಿದ್ದಾರೆ

ಅಭಿವೃದ್ಧಿಯತ್ತ ವೇಗವಾಗಿ ಹೆಜ್ಜೆ ಹಾಕುತ್ತಿರುವ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೆತ್ತಿಕೊಂಡಿ ರುವ ಫ್ಲೈಓವರ್ ಕಾಮಗಾರಿಗಳು ಮುಂದಾ ಲೋಚನೆಯಿಲ್ಲದೆ ನಡೆಯುತ್ತಿವೆ ಎಂಬ ಸಾರ್ವಜನಿಕ ಆಕ್ರೋಶ ತೀವ್ರಗೊಂಡಿದೆ. ಅವೈಜ್ಞಾನಿಕ ಯೋಜನೆ ಯಿಂದಾಗಿ ದೈನಂದಿನ ಪ್ರಯಾಣಿಕರು, ಎಪಿಎಂಸಿ ರೈತರು ಮತ್ತು ಬೇಲೂರು ಕೈಗಾರಿಕಾ ಪ್ರದೇಶಕ್ಕೆ ತೆರಳುವ ಸಾವಿರಾರು ಕಾರ್ಮಿಕರು ಜೀವ ಕೈಯಲ್ಲಿ ಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಕೇವಲ ಕೆನರಾ ಹೋಟೆಲ್‌ವರೆಗೆ ಫ್ಲೈಓವರ್ ಏಕೆ? ನವನಗರ ಇಸ್ಕಾನ್ ದೇವಸ್ಥಾನದವರೆಗೆ ವಿಸ್ತರಿಸಿ!ಪ್ರಸ್ತುತ ರೂಪಿಸಲಾದ ಯೋಜನೆಯಂತೆ ಫ್ಲೈಓವರ್ ಕಾಮಗಾರಿಯು ಹುಬ್ಬಳ್ಳಿ ಕೆನರಾ ಹೋಟೆಲ್ ಮುಂಭಾಗದಲ್ಲೇ ಮುಕ್ತಾಯಗೊಳ್ಳಲಿದೆ. ಇದರಿಂದಾಗಿ ಮುಂದಿನ ರಸ್ತೆಯಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಗುವುದು ಖಚಿತ. ಬೆಳಿಗ್ಗೆ ಮತ್ತು ರಾತ್ರಿ ಪಾಳಿಗಳಲ್ಲಿ ಬೇಲೂರು ಕೈಗಾರಿಕಾ ಪ್ರದೇಶಕ್ಕೆ ಹೋಗುವ ಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ ಭಾರಿ ವಾಹನಗಳ ಮಧ್ಯೆ ಸಂಚರಿ ಸಬೇಕಿದ್ದು, ದಿನನಿತ್ಯ ಅಪಘಾತಗಳ ಭಯ ಕಾಡುತ್ತಿದೆ.

ಏಷ್ಯಾದಲ್ಲೇ ಹೆಸರಾದ ಹುಬ್ಬಳ್ಳಿ ಎಪಿಎಂಸಿಗೆ ಬರುವ ಭಾರಿ ವಾಹನಗಳು ಟ್ರಾಫಿಕ್ ಕಿರಿಕಿರಿಯಿಂದಾಗಿ ಪರದಾಡುವಂತಾಗಿದೆ. ರಸ್ತೆ ದಟ್ಟಣೆಯಿಂದಾಗಿ ಎಪಿಎಂಸಿಗೆ ಬರುವ ಸಾರ್ವಜನಿಕರು ಹಾಗೂ ರೈತರ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ.

ನವನಗರ ಭಾಗದಲ್ಲಿ ಪ್ರಮುಖ ಸರ್ಕಾರಿ ಕಚೇರಿ ಗಳಿದ್ದು, ಸಾರ್ವಜನಿಕರು ಪ್ರತಿನಿತ್ಯ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.ಕೆನರಾ ಹೋಟೆಲ್ ಮುಂಭಾಗ ದಲ್ಲಿ ಕೊನೆಗೊಳ್ಳುವ ಫ್ಲೈಓವರ್ ಅನ್ನು ಕೂಡಲೇ ಬದಲಾಯಿಸಿ, ಹೊಸ ಪ್ಲಾನ್ ಮಾಡಿ ಪಿಲ್ಲರ್‌ಗಳ ಮೂಲಕ ನವನಗರದ ಇಸ್ಕಾನ್ ದೇವಸ್ಥಾನದವರೆಗೆ ವಿಸ್ತರಿಸಬೇಕು. ಸಾರ್ವಜನಿಕರು ನೀಡುವ ತೆರಿಗೆ ಹಣಕ್ಕೆ ಸೂಕ್ತ ಗೌರವ ನೀಡಿ ಈ ಯೋಜನೆಯನ್ನು ಮರುಪರಿಶೀಲಿಸಬೇಕು.

ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಧಾರವಾಡ ಹೈಕೋರ್ಟ್ ವರೆಗೆ ಮೆಟ್ರೋ ರೈಲು’ ಜಾರಿ ಗೊಳಿಸಿ ಬೆಂಗಳೂರಿನ ಮಾದರಿಯಲ್ಲಿ ಅವಳಿ ನಗರ ಬೆಳೆಯಬೇಕಾದರೆ ಕೇವಲ ರಸ್ತೆ ವಿಸ್ತರಣೆ ಸಾಲದು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಆರಂಭಿಸಿ ನವನಗರ, ಬೇಲೂರು ಇಂಡಸ್ಟ್ರಿಯಲ್ ಏರಿಯಾ ಮಾರ್ಗವಾಗಿ ಧಾರವಾಡದ ಹೈಕೋರ್ಟ್‌ವರೆಗೆ ಮೆಟ್ರೋ ರೈಲು ಯೋಜನೆ ಜಾರಿಗೊಳಿಸಬೇಕು ಎಂಬ ಕೂಗು ಜೋರಾಗಿದೆ.ಮೆಟ್ರೋ ಜಾರಿಯಾದರೆ ಸಾವಿರಾರು ಕೈಗಾರಿಕಾ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ನ್ಯಾಯಾಲಯಕ್ಕೆ ತೆರಳುವ ಜನರಿಗೆ ಸುರಕ್ಷಿತ ಹಾಗೂ ವೇಗದ ಸಾರಿಗೆ ಸಿಗಲಿದೆ.ಅವಳಿ ನಗರಗಳ ಮಧ್ಯದ ಸಾರಿಗೆ ವ್ಯವಸ್ಥೆಗೆ ಹೊಸ ಮೆರುಗು ಸಿಗಲಿದ್ದು, ಭವಿಷ್ಯದ ಬೆಳವಣಿಗೆಗೆ ಮೆಟ್ರೋ ದಾರಿದೀಪ ವಾಗಲಿದೆ.

ಜನಪ್ರತಿನಿಧಿಗಳ ಗಮನಕ್ಕೆ ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಹುಬ್ಬಳ್ಳಿ-ಧಾರವಾಡದ ಎಲ್ಲಾ ಶಾಸಕರು ಮತ್ತು ಸಂಸದರು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಸಾರ್ವಜ ನಿಕರ ಹಿತದೃಷ್ಟಿಯಿಂದ ಈಗ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿಯ ಲೋಪದೋಷ ಗಳನ್ನು ಸರಿಪಡಿಸಿ, ನವನಗರದವರೆಗೆ ವಿಸ್ತರಿ ಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವಳಿ ನಗರದ ಜನತೆಯ ಪರವಾಗಿ ಹೊಟೇಲ್ ಉದ್ಯಮಿ ರಮಾನಂದ ಶೆಟ್ಟಿ ಮನವಿ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....