LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಶಿಕ್ಷಕರ ಮತದಾರರ ಪಟ್ಟಿಯಲ್ಲಿ ಸಿಕ್ಕಾಪಟ್ಟಿ ಲೋಪ ದೋಷಗಳು ಆತಂಕವನ್ನು ಸೃಷ್ಟಿಸಿದೆ ಮತದಾರರ ಪಟ್ಟಿ.....

ಧಾರವಾಡ -

ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರಿದ್ದರಿಂದಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಆದರೆ ಮತದಾರರ ಪಟ್ಟಿಯಲ್ಲಿನ ಹಲವು ದೋಷಗಳು ಆಕಾಂಕ್ಷಿಗಳ ನಿದ್ದೆಗೆಡಿಸಿದೆ.ಧಾರವಾಡ,ಹಾವೇರಿ,ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆ ಒಳಗೊಂಡ ಈ ಕ್ಷೇತ್ರದಲ್ಲಿ ಈವರೆಗೂ ಪ್ರಕಟಗೊಂಡ ಪಟ್ಟಿಯಲ್ಲಿ 17,334 ಮತದಾ ರರು ಇದ್ದಾರೆ.ಇದರಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು 6136 ಮತದಾರರು ಇದ್ದಾರೆ.ಅದರಂತೆಯೇ 3259, ಹಾವೇರಿ 4671 ಹಾಗೂ ಕಾರವಾರದಲ್ಲಿ 3605 ಮತದಾ ರರು ಇದ್ದಾರೆ.ಈ ಮತದಾರರ ಪಟ್ಟಿಯನ್ನು ಚುನಾವಣಾ ವಿಭಾಗ ಸಿದ್ಧಪಡಿಸಿದ್ದು ವಿಳಾಸಗಳು ಸಮರ್ಪಕವಾಗಿಲ್ಲದ ಕಾರಣ ಈಗಾಗಲೇ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಧಾರವಾಡದಲ್ಲಿ ಬಹುತೇಕ ಮತದಾರರ ವಿಳಾಸಗಳು ಚೆನ್ನಮ್ಮ ಉದ್ಯಾನ ಎಂದೇ ಇದೆ.ಮದಿಹಾಳ,ಮಾಳಾಪುರ, ಕುಮಾರೇಶ್ವರ ನಗರ,ಸಂಪಿಗೆ ನಗರ ಹೀಗೆ ಹಲವು ಬಡಾ ವಣೆಗಳಲ್ಲಿರುವ ಮನೆಗಳ ವಿಳಾಸ ಚೆನ್ನಮ್ಮ ಉದ್ಯಾನ ಅಥವಾ ಕೆ.ಸಿ. ಪಾರ್ಕ್ ಎಂದೇ ಇದೆ.ಮತ್ತೊಂದೆಡೆ ಕೆಲಸ ನಿರ್ವಹಿಸುವ ಶಿಕ್ಷಣ ಸಂಸ್ಥೆಗಳ ಹೆಸರನ್ನೂ ಒಗಟು ರೂಪ ದಲ್ಲಿ ನೀಡಿರುವುದು ಆಕಾಂಕ್ಷಿಗಳ ತಲೆನೋವಿಗೆ ಮತ್ತೊಂದು ಕಾರಣವಾಗಿದೆ.ಇದರಿಂದಾಗಿ ಮತದಾರರನ್ನು ನೇರವಾಗಿ ಸಂಪರ್ಕಿಸುವುದೇ ದೊಡ್ಡ ಸವಾಲು ಎನ್ನು ವುದು ಹಲವರ ಅಭಿಪ್ರಾಯ.ಶಿಕ್ಷಕರ ಮತಕ್ಷೇತ್ರದ ನಿಯಮದಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಹಕ್ಕು ಇಲ್ಲ.ಆದರೆ,ಮತದಾರರ ಪಟ್ಟಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹೆಸರೂ ಕಂಡುಬಂದಿವೆ. ಇವು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿವೆ.

ಈ ಚುನಾವಣೆಗೆ ಮತದಾನದ ಹಕ್ಕು 63 ವರ್ಷದೊಳಗಿರು ವವರಿಗೆ ಮಾತ್ರ ಇರಲಿದೆ.ಆದರೆ ಮತದಾರರ ಪಟ್ಟಿಯಲ್ಲಿ ವಯೋಮಾನದ ಸಾಲಿನಲ್ಲಿ 70 ದಾಟಿದ ಹಲವರ ಹೆಸರು ಗಳಿವೆ.ಇಂಥ ಬಹಳಷ್ಟು ಲೋಪಗಳು ಮತದಾರರ ಪಟ್ಟಿ ಯಲ್ಲಿದೆ ಎಂಬ ಆರೋಪವೂ ಇದೆ. 63 ದಾಟಿದವರನ್ನೂ ಮತದಾರರು ಎಂದು ಪರಿಗಣಿಸುವ ಅವಕಾಶ ಇದೆ ಎಂಬ ವಾದವೂ ಇದೆ.ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಹೆಸರು ಸೇರಿ ಸುವ ನಮೂನೆ 19ರಲ್ಲಿ ಹೆಸರು, ಲಿಂಗ, ತಂದೆ, ತಾಯಿ, ಪತಿಯ ಹೆಸರು, ಮನೆ ವಿಳಾಸ, ಮನೆ ಸಂಖ್ಯೆ, ಬೀದಿ, ಪಟ್ಟಣ ಅಥವಾ ಗ್ರಾಮ, ಅಂಚೆ ಕಚೇರಿ, ಪೊಲೀಸ್ ಠಾಣೆ ವ್ಯಾಪ್ತಿ, ಜಿಲ್ಲೆಯ, ವಯಸ್ಸು, ವಿಧಾನಸಭಾ ಕ್ಷೇತ್ರ ಹೀಗೆ ಹಲವು ಮಾಹಿತಿಗಳನ್ನು ನೀಡಬೇಕಾದ್ದು ಕಡ್ಡಾಯ.ಆದರೆ, ಮತದಾರರ ಪಟ್ಟಿಯಲ್ಲಿ ಈ ಯಾವುದೇ ಅಂಶಗಳು ಕಂಡು ಬಂದಿಲ್ಲ.ಮತದಾರರ ಅಂತಿಮ ಪಟ್ಟಿಗೆ ಹೆಸರು ಸೇರಿಸಲು ಈಗಲೂ ಕಾಲಾವಕಾಶವಿದೆ.ಕೊನೆ ಕ್ಷಣದಲ್ಲಿ ಇನ್ನಷ್ಟು ಹೊಸ ಮತದಾರರು ನೋಂದಾಯಿಸಿಕೊಳ್ಳಲಿದ್ದಾರೆ. ಆದರೆ ಈಗಿರುವ ಪಟ್ಟಿಯ ಪರಿಷ್ಕರಣೆಗೆ ಆಗ್ರಹ ಕೇಳಿಬಂದಿದೆ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....