LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯ ಸರ್ಕಾರಿ ನೌಕರರೇ ಎಚ್ಚರ ಎಚ್ಚರ - ಆದೇಶ ಪ್ರತಿಯೊಂದಿಗೆ ನೌಕರರಿಗೆ ಮಹತ್ವದ ಮಾಹಿತಿ.....

ಬೆಂಗಳೂರು -

ರಾಜ್ಯ ಸರ್ಕಾರಿ ನೌಕರರು ಕರ್ತವ್ಯದಲ್ಲಿರುವಾಗ ಎಸಗುವ ತಪ್ಪುಗಳು ಹಾಗೂ ನಿಯಮ ಉಲ್ಲಂಘನೆ ಗಳಿಗೆ ಅನುಗುಣವಾಗಿ ಯಾವ ರೀತಿಯ ದಂಡನೆ ವಿಧಿಸಬಹುದು ಎಂಬುದರ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಹತ್ವದ ಮಾರ್ಗ ಸೂಚಿಗಳನ್ನು ಹೊರಡಿಸಿದೆ 2001ರ ಸೆಪ್ಟೆಂಬರ್ 14ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ವಿವಿಧ ಆರೋಪಗಳಿಗೆ ವಿಧಿಸಬಹುದಾದ ದಂಡನೆಗಳ ಸ್ವರೂಪವನ್ನು ಉದಾಹರಣಾತ್ಮಕವಾಗಿ ವಿವರಿಸಲಾ ಗಿದೆ.ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 8ರಲ್ಲಿ ಸರ್ಕಾರಿ ನೌಕರರಿಗೆ ವಿಧಿಸ ಬಹುದಾದ ದಂಡನೆಗಳನ್ನು ಉಲ್ಲೇಖಿಸಲಾಗಿದ್ದರೂ, ಯಾವ ಆರೋಪಕ್ಕೆ ಯಾವ ಶಿಕ್ಷೆ ಎಂಬುದನ್ನು ಪ್ರತ್ಯೇಕವಾಗಿ ನಿಗದಿಪಡಿಸಿರಲಿಲ್ಲ. ಹೀಗಾಗಿ ಒಂದೇ ರೀತಿಯ ಆರೋಪಗಳಿಗೆ ಬೇರೆ ಬೇರೆ ಶಿಸ್ತು ಪ್ರಾಧಿಕಾರಗಳಿಂದ ವಿಭಿನ್ನ ದಂಡನೆ ವಿಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳನ್ನು ನೀಡಲಾಗಿತ್ತು.

ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಪ್ರಮುಖ ಪ್ರಕರಣಗಳು ಹೀಗಿವೆ ಒಂದು ತಿಂಗಳಿಗಿಂತ ಹೆಚ್ಚು, ನಾಲ್ಕು ತಿಂಗಳಿಗಿಂತ ಕಡಿಮೆ ಅನಧಿಕೃತ ಗೈರುಹಾಜರಿ: ಮೂರು ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿ ಯುವ ದಂಡನೆ.ನಾಲ್ಕು ತಿಂಗಳಿಗಿಂತ ಹೆಚ್ಚು ಅನಧಿಕೃತ ಗೈರುಹಾಜರಿ ಸೇವೆಯಿಂದ ವಜಾ ರೂ.10,000ಕ್ಕಿಂತ ಕಡಿಮೆ ಮೊತ್ತದ ಸರ್ಕಾರಿ ಹಣದ ದುರುಪಯೋಗ ಐದು ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯುವುದು.

ರೂ.10,000ಕ್ಕಿಂತ ಹೆಚ್ಚಿನ ಹಣದ ದುರುಪಯೋಗ: ಕಾಲವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ ಇಳಿಕೆ.
ಸರ್ಕಾರಿ ಹಣದ ದುರುಪಯೋಗ: ಕಡ್ಡಾಯ ನಿವೃತ್ತಿ.
ಕರ್ತವ್ಯ ನಿರ್ವಹಣೆಯಲ್ಲಿ ಕಾರ್ಯವಿಧಾನದ ಲೋಪ ಮೊದಲ ಬಾರಿ ವಾಗ್ದಂಡನೆ ಪುನರಾವರ್ತನೆಯಾದರೆ ವೇತನ ಶ್ರೇಣಿಯಲ್ಲಿ ಕೆಳಹಂತಕ್ಕೆ ಇಳಿಕೆ.

ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸದೆ ಅಸಮಂಜಸ ವಿಳಂಬ: ಮೊದಲ ಬಾರಿ ವಾಗ್ದಂಡನೆ; ನಂತರ ಕನಿಷ್ಠ ಒಂದು ವಾರ್ಷಿಕ ವೇತನ ಬಡ್ತಿ ತಡೆ.
ಲೈಂಗಿಕ ಕಿರುಕುಳ: ಕೆಳಮಟ್ಟದ ಕಾಲವೇತನ ಶ್ರೇಣಿ ಅಥವಾ ಹುದ್ದೆಗೆ ಇಳಿಕೆ.ಮೇಲಾಧಿಕಾರಿಗಳ ಲಿಖಿತ ಆದೇಶ ಪಾಲಿಸಲು ನಿರಾಕರಣೆ: ಎರಡು ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯುವುದು.ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸಲು ಅಧಿಕಾರಅಥವಾ ಪ್ರಭಾವ ಬಳಸುವುದು: ಕಾಲವೇತನ ಶ್ರೇಣಿಯಲ್ಲಿ ಕೆಳಹಂತಕ್ಕೆ ಇಳಿಕೆ.news_1786184526_0_749.webp

 

news_1786184526_1_436.webp

 

ಸ್ವಹಿತಾಸಕ್ತಿ ಇರುವ ವ್ಯಕ್ತಿ ಅಥವಾ ಸಂಸ್ಥೆಗೆ ಸಂಬಂಧಿ ಸಿದ ಅಧಿಕೃತ ವ್ಯವಹಾರ ಅಥವಾ ಗುತ್ತಿಗೆ ಕಡ್ಡಾಯ ನಿವೃತ್ತಿ.ನಡತೆ ನಿಯಮ ಉಲ್ಲಂಘಿಸಿ ರಾಜಕೀಯ ಅಥವಾ ಚುನಾವಣಾ ಚಟುವಟಿಕೆಯಲ್ಲಿ ಭಾಗವಹಿ ಸುವುದು ಕಡ್ಡಾಯ ನಿವೃತ್ತಿ.ನಿಯಮ ಉಲ್ಲಂಘಿಸಿ ವ್ಯಾಪಾರ, ಉದ್ಯೋಗ ಅಥವಾ ವ್ಯವಹಾರದಲ್ಲಿ ತೊಡಗುವುದು: ಕಡ್ಡಾಯ ನಿವೃತ್ತಿ.ನಿಯಮ ಉಲ್ಲಂಘಿಸಿ ಎರಡನೇ ಮದುವೆ ಮಾಡಿಕೊಳ್ಳುವುದು: ಕಡ್ಡಾಯ ನಿವೃತ್ತಿ.

ವರದಕ್ಷಿಣೆ ನೀಡುವುದು, ಪಡೆಯುವುದು ಅಥವಾ ಉತ್ತೇಜಿಸುವುದು: ಸೇವೆಯಿಂದ ವಜಾ.ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಸಲ್ಲಿಸದಿರುವುದು: ಕನಿಷ್ಠ ಒಂದು ವಾರ್ಷಿಕ ವೇತನ ಬಡ್ತಿ ತಡೆ.ಚರ ಮತ್ತು ಸ್ಥಿರ ಆಸ್ತಿಗಳ ವ್ಯವಹಾರದಲ್ಲಿ ನಿಯಮ ಉಲ್ಲಂಘನೆ: ಒಂದು ವಾರ್ಷಿಕ ವೇತನ ಬಡ್ತಿ ತಡೆ.ಸರ್ಕಾರದ ಸೂಚನೆಗಳಿಗೆ ವಿರುದ್ಧವಾಗಿ ಸಿನಿಮಾ, ನಾಟಕ ಮುಂತಾದ ಚಟುವಟಿಕೆಗಳಲ್ಲಿ ತೊಡಗುವುದು:

ಎರಡು ವಾರ್ಷಿಕ ವೇತನ ಬಡ್ತಿಗಳನ್ನು ತಡೆ.
ವಾರ್ಷಿಕ ಕಾರ್ಯನಿರ್ವಹಣಾ ವರದಿ ಬರೆಯಲು ವಿಫಲರಾಗುವುದು: ವಾಗ್ದಂಡನೆ ಲೈಂಗಿಕ ಕಿರುಕುಳ, ವರದಕ್ಷಿಣೆ, ಎರಡನೇ ಮದುವೆಗೂ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ

news_1786176273_0_852.webp

ಸರ್ಕಾರಿ ನೌಕರರು ಲೈಂಗಿಕ ಕಿರುಕುಳ ವರದಕ್ಷಿಣೆ, ನಿಯಮಬಾಹಿರ ಎರಡನೇ ಮದುವೆ, ಸರ್ಕಾರಿ ಹಣದ ದುರುಪಯೋಗ, ರಾಜಕೀಯ ಚಟುವಟಿಕೆ ಯಲ್ಲಿ ನಿಯಮ ಉಲ್ಲಂಘಿಸಿ ಭಾಗವಹಿಸುವುದು ಹಾಗೂ ಸ್ವಹಿತಾಸಕ್ತಿಯ ವ್ಯವಹಾರಗಳಲ್ಲಿ ತೊಡಗು ವುದು ಸೇರಿದಂತೆ ಗಂಭೀರ ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಕಠಿಣ ದಂಡನೆ ಎದುರಿಸಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಕಡ್ಡಾಯ ನಿವೃತ್ತಿ ಅಥವಾ ಸೇವೆಯಿಂದ ವಜಾ ಮಾಡುವವರೆಗೂ ಶಿಕ್ಷೆ ವಿಧಿಸಬಹುದಾಗಿದೆ.

ಸುತ್ತೋಲೆಯಲ್ಲಿ ನೀಡಿರುವ ಪ್ರಕರಣಗಳು ಉದಾಹ ರಣಾತ್ಮಕ ಮಾತ್ರ ಎಂದು ಸ್ಪಷ್ಟಪಡಿಸಲಾಗಿದೆ. ಅಂದರೆ ಪಟ್ಟಿಯಲ್ಲಿ ಉಲ್ಲೇಖಿಸದ ಇತರ ಆರೋಪಗಳಿಗೂ ಪ್ರಕರಣದ ಸ್ವರೂಪ, ತೀವ್ರತೆ ಮತ್ತು ಸಂದರ್ಭಗಳನ್ನು ಪರಿಗಣಿಸಿ ಸಂಬಂಧಿಸಿದ ಶಿಸ್ತು ಪ್ರಾಧಿಕಾರ ಸೂಕ್ತ ದಂಡನೆ ನಿರ್ಧರಿಸಬಹುದು.

1992ರ ಮಾರ್ಚ್ 21ರಂದು ಹೊರಡಿಸಲಾದ ಮತ್ತೊಂದು ಸುತ್ತೋಲೆಯಲ್ಲಿ ಇಲಾಖಾ ವಿಚಾರಣೆ ಹಾಗೂ ಕಠಿಣ ದಂಡನೆಗೆ ಸಂಬಂಧಿಸಿದ ಪ್ರಮುಖ ಪ್ರಕ್ರಿಯೆಯನ್ನು ಸ್ಪಷ್ಟಪಡಿಸಲಾಗಿದೆ.ಶಿಸ್ತು ಪ್ರಾಧಿಕಾ ರಿಯೇ ವಿಚಾರಣೆ ನಡೆಸದೆ, ಬೇರೆ ವಿಚಾರಣಾಧಿಕಾರಿ ಇಲಾಖಾ ವಿಚಾರಣೆ ನಡೆಸಿದ್ದರೆ, ಕಠಿಣ ದಂಡನೆ ವಿಧಿಸುವ ಮೊದಲು ವಿಚಾರಣಾಧಿಕಾರಿಯ ವರದಿಯ ಪ್ರತಿಯನ್ನು ಆರೋಪಿತ ಸರ್ಕಾರಿ ನೌಕರರಿಗೆ ನೀಡಬೇಕು.

ನೌಕರರಿಗೆ ತಮ್ಮ ಅಭಿಪ್ರಾಯ ಅಥವಾ ಆಕ್ಷೇಪಣೆ ಗಳನ್ನು ಸಲ್ಲಿಸಲು ಸೂಕ್ತ ಸಮಯಾವಕಾಶ ನೀಡಿದ ಬಳಿಕವೇ ಶಿಸ್ತು ಪ್ರಾಧಿಕಾರಿ ಮುಂದಿನ ಕ್ರಮ ಕೈಗೊಳ್ಳಬೇಕು.ಆದರೆ, ಶಿಸ್ತು ಪ್ರಾಧಿಕಾರಿ ನೌಕರನಿಗೆ ವಿಧಿಸಲು ಉದ್ದೇಶಿಸಿರುವ ನಿರ್ದಿಷ್ಟ ದಂಡನೆಯನ್ನು ಮುಂಚಿತವಾಗಿ ತಿಳಿಸುವ ಅಗತ್ಯವಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಒಟ್ಟಿನಲ್ಲಿ ಸರ್ಕಾರಿ ನೌಕರರ ವಿರುದ್ಧದ ಆರೋಪ ಸಾಬೀತಾದಾಗ ಆರೋಪದ ತೀವ್ರತೆಗೆ ಅನುಗುಣ ವಾಗಿ ದಂಡನೆ ವಿಧಿಸುವುದು ಮುಖ್ಯ ಉದ್ದೇಶ ವಾಗಿದೆ. ಅದೇ ವೇಳೆ, ಕಠಿಣ ದಂಡನೆ ವಿಧಿಸುವ ಮುನ್ನ ಸಂಬಂಧಿಸಿದ ನೌಕರರಿಗೆ ವಿಚಾರಣಾ ವರದಿ ನೀಡಿ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇ ಕೆಂಬ ಪ್ರಕ್ರಿಯೆಯನ್ನೂ ಸರ್ಕಾರ ಸ್ಪಷ್ಟಪಡಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....