LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಸ್ವಚ್ಚತಾ ಸಂಡೇ – ಬಿಜೆಪಿ ಯುವ ಮೋರ್ಚಾ ದ ಹೊಸ ಕಾರ್ಯಕ್ರಮ

ಧಾರವಾಡ - ಈಗಾಗಲೇ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಿಜೆಪಿಯ ಯುವ ಮೋರ್ಚಾದ ಕಾರ್ಯಕರ್ತರು ಈಗ ಮತ್ತೊಂದು ಕಾರ್ಯಕ್ಕೇ ಮುಂದಾಗಿದ್ದಾರೆ. ಹೌದು ಇನ್ನೂ ಪ್ರತಿ ರವಿವಾರಕ್ಕೊಮ್ಮೆ ಕ್ಲೀನ್ ಸಂಡೇ ಎಂಬ ಹೆಸರಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಮಾಡಲಿದ್ದಾರಂತೆ. ಈ ವಾರದಿಂದ ಕಾರ್ಯಕ್ರಮವು ಧಾರವಾಡದಲ್ಲಿ ಆರಂಭಗೊಂಡಿತು. ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಮೊದಲನೇಯ ಸ್ವಚ್ಚತಾ ಸಂಡೇ ಕಾರ್ಯಕ್ರಮಕ್ಕೇ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.

ಕೈಯಲ್ಲೊಂದು ಸಲಕಿಯನ್ನು ಹಿಡಿದುಕೊಂಡ ಶಾಸಕರು ಯುವ ಮೋರ್ಚಾ ಕಾರ್ಯಕರ್ತರು ಮುಖಂಡರು ಕೂಡಿಟ್ಟಿದ್ದ ಕಸವನ್ನು ತುಂಬುವ ಮೂಲಕ ಚಾಲನೆ ನೀಡಿದರು.

ಚಾಲನೆ ನೀಡಿ ಉದ್ದುದ್ದಾಗಿ ಭಾಷಣವನ್ನು ಮಾಡದೇ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಂತೆ ತಾವೊಬ್ಬರೂ ಕಾರ್ಯಕರ್ತರು ಎಂದುಕೊಂಡ ಶಾಸಕ ಅಮೃತ ದೇಸಾಯಿ ಸ್ವಚ್ಚತೆ ಮಾಡಿದ್ರು. ಬಿಜೆಪಿ ಯುವ ಮೋರ್ಚಾದ ನಗರ ಘಟಕ 71 ರ ಘಟಕದ ಅಧ್ಯಕ್ಷ ಶಕ್ತಿ ಹಿರೇಮಠ ಈ ಒಂದು ಸ್ವಚ್ಚತಾ ಸಂಡೇ ಕಾರ್ಯಕ್ರಮವನ್ನು ರೂಪಿಸಿದ್ದು ಮೊದಲನೇಯ ದಿನವಾದ ಇಂದು ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಮಾಡಲಾಯಿತು.

ನಗರ ಮತ್ತು ಗ್ರಾಮೀಣ ಯುವ ಮೋರ್ಚಾದ ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರೊಂದಿಗೆ ಶಾಸಕ ಅಮೃತ ದೇಸಾಯಿ ಕ್ಲೀನ್ ಮಾಡಿದ್ರು.ಹೊಸ ಬಸ್ ನಿಲ್ದಾಣದಲ್ಲಿ ಎಲ್ಲೇಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಳೆ ಬಾಟಲ್ ಹಾಗೇ ಕಸವನ್ನು ಕೂಡಿಸಿ ತುಂಬಿ ಬೇರೆ ಕಡೆ ಕಳಿಸಿದ್ರು.

ಇನ್ನೂ ಈ ಒಂದು ಸ್ವಚ್ಚತಾ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ , ಕ್ಷೇತ್ರದ ಮಂಡಳ ಅಧ್ಯಕ್ಷ ಸುನೀಲ್ ಮೊರೆ, ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ, ಮತ್ತು ಕಿರಣ ಉಪ್ಪಾರ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮ ಹಂಜಿ, ಶಿವಯ್ಯ ಹಿರೇಮಠ,

ಬಿಜೆಪಿ ಮುಖಂಡರಾದ ಶ್ರೀನಿವಾಸ್ ಕೋಟ್ಯಾನ್, ಹರೀಶ್ ಬಿಜಾಪುರ, ಈರಣ್ಣ ಹಪ್ಪಳಿ, ನಿರ್ಮಲಾ ಜವಳಿ, ಶ್ರೀಕಾಂತ ಪಾಟೀಲ್, ಪ್ರೀತಮ್ ನಾಯಕ್, ಗಂಗಾಧರ್ ಸಂಗಮಶೆಟ್ಟರ , ಮಂಜುನಾಥ ಸಿದ್ದಾಪುರ, ಮಂಜುನಾಥ ಯರಗಟ್ಟಿ, ವಿನಾಯಕ್ ಗೋಂದೋಳಿ, ಮುತ್ತು ಬನ್ನೂರ, ಹಾಗೂ ಎಲ್ಲಾ ಯುವ ಮೋರ್ಚಾ ಕಾರ್ಯಕರ್ತರು ಪಾಲ್ಗೊಂಡು ಸ್ವಚ್ಚತೆ ಮಾಡಿದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....