LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಮಾನ್ಯ ಷಡಕ್ಷಾರಿ, ಶಂಭುಲಿಂಗನಗೌಡ ಅವರಿಗೆ ಶಿಕ್ಷಕರ ಸಂದೇಶ....

ಬೆಂಗಳೂರು -

ಮಾನ್ಯ ಷಡಕ್ಷರಿಯವರು,ರಾಜ್ಯಾಧ್ಯಕ್ಷರು ಕ. ರಾ. ಸ. ನೌ. ಸಂಘ, ಬೆಂಗಳೂರು ಮಾನ್ಯ ಶಂಭುಲಿಂಗನಗೌಡರು ಅಧ್ಯಕ್ಷರು, ಕ. ರಾ. ಪ್ರಾ. ಶಾ. ಶಿ. ಸಂಘ ಬೆಂಗಳೂರು.

ವಿಷಯ :- ದಿನಾಂಕ 08/11/21 ರಂದು ಶಿಕ್ಷಕರ ಸಮಸ್ಸೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಸಭೆಯಲ್ಲಿ "ಶಿಕ್ಷಕರ ವರ್ಗಾವಣೆಗೆ" ಸಂಬಂಧಿಸಿದಂತೆ ಈ ಕೆಳಗಿನ ಸಮಸ್ಸೆಯನ್ನು ಪ್ರಸ್ತಾಪಿಸಿ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಕೋರಿ.

ಮಾನ್ಯರೆ, 2020 ರ ಸೆಪ್ಟೆಂಬರ್ ತಿಂಗಳಲ್ಲಿ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಿ, ಕೋರಿಕೆ ಹಾಗೂ ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕೋರಿದಾಗ ನಾವು (ಇಬ್ಬರು ಶಿಕ್ಷಕರು ) ವರ್ಗಾವಣೆ ನಿಯಮಗಳ ಅನುಸಾರ "2020 ರ ಸೆಪ್ಟೆಂಬರ್ ನಲ್ಲಿ ಪರಸ್ಪರ - ವರ್ಗಾವಣೆಗೆ " ಅರ್ಜಿ ಸಲ್ಲಿಸಿದ್ದೇವೆ.ಅರ್ಜಿ ಸ್ವೀಕರಿಸಿ,ಅಪ್ರೋವ್ ಮಾಡಿ 2021 ರಲ್ಲಿವರ್ಗಾವಣೆ ಕೌಂಸೆಲ್ಲಿಂಗ್ ನಡೆಯಬೇಕಾದ ಈ ಸಂದರ್ಭದಲ್ಲಿ (ಸೆಪ್ಟೆಂಬರ್ 2021 ರಂದು,12 ತಿಂಗಳ ನಂತರ ) ಪರಸ್ಪರ ವರ್ಗಾವಣೆ ನಿಯಮಾನುಸಾರ ಆ ವೃಂದದಲ್ಲಿ 7 ಪೂರ್ಣ ಗೊಂಡ ಸೇವೆಯನ್ನು ಇಬ್ಬರೂ ಪೂರೈಸಿದ್ದರೂ ಹಾಗೂ ಸೇವಾವಧಿಯಲ್ಲಿ ಈ ಹಿಂದೆ ಒಂದು ಬಾರಿಯೂ ಪರಸ್ಪರ ವರ್ಗಾವಣೆ ಪಡೆದಿಲ್ಲದಿದ್ದರೂ ಮತ್ತು ವಿಷಯ ಹಾಗೂ ವೃಂದ ಹೊಂದಾಣಿಕೆ ಇದ್ದಾಗಿಯೂ ನಮ್ಮಲ್ಲಿ ಒಬ್ಬರು ಈಗ ಕಾರ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ 3 ಪೂರ್ಣ ಗೊಂಡ ವರ್ಷಗಳ ಸೇವೆ ಸಲ್ಲಿಸಿಲ್ಲ ಎಂಬ ಈ ಬಾರಿಯ ವರ್ಗಾವಣೆ ನಿಯಮಾವಳಿಯಲ್ಲಿ ಇಲ್ಲದ ಕಾರಣ ನೀಡಿ ನಮ್ಮ ಸಾಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ "ಪರಸ್ಪರ ವರ್ಗಾವಣೆ" ಅರ್ಜಿಯನ್ನು ತಿರಸ್ಕರಿಸಿರುವರು ಹಾಗೂ 2021 ರ ಸೆಪ್ಟೆಂಬರ್ ನಲ್ಲಿ ಕೋರಿಕೆ ವರ್ಗಾವಣೆ ಗೆ ಅರ್ಜಿ ಸಲ್ಲಿಸುವಂತೆ ತಿಳಿಸಿರುತ್ತಾರೆ

ಆದ್ದರಿಂದ ನಮಗೆ ಅನ್ಯಾಯವಾಗಿದ್ದು, ಮೇಲಿನ ವರ್ಗಾವಣೆ ನಿಯಮಾವಳಿಯಲ್ಲಿಲ್ಲದ ನಿಯಮದ ನೆಪಹೇಳಿ ತಿರಸ್ಕರಿಸಿರುವ ನಮ್ಮ ಪರಸ್ಪರ ವರ್ಗಾವಣೆ ಅರ್ಜಿಯನ್ನು ದಯವಿಟ್ಟು ಈ ಬಾರಿಯ ವರ್ಗಾವಣೆ ಕೌನ್ಸ್ ಲಿಂಗ್ ನಲ್ಲಿ ಪರಿಗಣಿಸಿ ನಮಗೂ ಹಾಗೂ ರಾಜ್ಯದ ಸಾವಿರಾರು ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಈ ಮೂಲಕ ರಾಜ್ಯದ ಶಿಕ್ಷಕರ ಪರವಾಗಿ ಅತ್ಯಂತ ಕಳಕಳಿಯ ವಿನಂತಿ

ತಮ್ಮ ಸಹಾಯ /ನೆರವಿನ ನಿರೀಕ್ಷೆಯಲ್ಲಿ ಶಿಕ್ಷಕರು

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....