LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮಳೆಗಾಗಿ ಗ್ರಾಮದೇವತೆಗಳಿಗೆ ಉಡಿ ತುಂಬಿದ ಶಾಸಕ NH ಕೋನರಡ್ಡಿ - ಕ್ಷೇತ್ರದ ರೈತರಿಗಾಗಿ ವಿಶೇಷ ಪ್ರಾರ್ಥನೆ.....ಜನಸೇವಕನ ಕಾರ್ಯಕ್ಕೆ ಸಾಥ್ ನೀಡಿದ ಪತ್ನಿ ,ರೈತರು ,ಅಧಿಕಾರಿಗಳು.....

ನವಲಗುಂದ -

ರಾಜ್ಯದ ಹಲವು ಕಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಯಾಗುತ್ತಿದ್ದರೆ ಇನ್ನೂ ಹಲವೆಡೆ ಮಳೆರಾಯ ಕೈಕೊಟ್ಟಿದ್ದಾನೆ ಇನ್ನೂ ಇತ್ತ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮದೇವತೆ ಗಳಿಗೆ ಶಾಸಕ ಕೋನರೆಡ್ಡಿ ಅವರು ಉಡಿ ತುಂಬಿ ಪ್ರಾರ್ಥನೆ ಮಾಡಿದರು

ವಿಧಾನಸಭಾ ಕ್ಷೇತ್ರದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಯಲ್ಲಿ ರೈತರು ಬಿತ್ತನೆ ಮಾಡಿದ ಬೆಳೆ ರಕ್ಷಿಸಲು ಉತ್ತಮ ಮಳೆ ಯಾಗಲಿ' ಎಂದು ಪ್ರಾರ್ಥಿಸಿ ಶಾಸಕ ಎನ್.ಎಚ್.ಕೋನರಡ್ಡಿ ದಂಪತಿ ಸಮೇತರಾಗಿ ಪಟ್ಟಣದಲ್ಲಿನ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಗೆ ಉಡಿ ತುಂಬಿದರು ಇದಕ್ಕೂ ಮೊದಲು ಪಟ್ಟಣದ ನೀಲಮ್ಮನ ಜಲಾಶಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಂಭಹೊತ್ತ ನೂರಾರು ಮಹಿಳೆಯರೊಂದಿಗೆ ಭಜನೆ ಹಾಗೂ ಡೊಳ್ಳು ವಾದ್ಯಗಳ ಮೇಳದೊಂದಿಗೆ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು

ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆ ಇಲ್ಲದೆ ಸಂಕಷ್ಟ ದಲ್ಲಿರುವ ಕ್ಷೇತ್ರದ ರೈತರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿ ದೇವತೆಗಳಲ್ಲಿ ಬೇಡಿಕೊಂಡರು.ಈ ಒಂದು ಸಂದರ್ಭ ದಲ್ಲಿ  ​ತಹಶೀಲ್ದಾರ್ ಸುಧೀರ ಸಾಹುಕಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ಸದುಗೌಡ ಪಾಟೀಲ, ದೇವೇಂದ್ರಪ್ಪ ಹಳ್ಳದ, ನರಸಿಂಹ ಇನಾಮತಿ, ಪ್ರಕಾಶ್ ಸಿಗ್ಲಿ,ಪ್ರೇಮಾ ನಾಯ್ಕರ, ಜಯಶ್ರೀ ಕೆರೆಮನಿ, ಶೋಭಾ ಕಲ್ಲಯ್ಯನಮಠ, ಸರಸಮ್ಮ ಜಾಲಗಾರ, ದಾವಲಬಾಯಿ ಅಲ್ಲಿಬಾಯಿ, ನಿಂಗಮ್ಮ ಜಲಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

ಸುದ್ದಿ ಸಂತೆ ನ್ಯೂಸ್ ನವಲಗುಂದ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....