ಬೆಂಗಳೂರು -
ಶಿಕ್ಷಕರಿಗೆ ಬೋಧನೇತರ ಕರ್ತವ್ಯಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರದಿಂದ ಹೊಸ ಕಾನೂನು ರಚನೆ ಮಾಡಲು ಮುಂದಾಗಿದೆ ಹೌದು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ಬೋಧನೆಯ ಹೊರಗಿನ ಕರ್ತವ್ಯಗಳಿಗೆ ನಿಯೋಜಿ ಸುವ ಪದ್ಧತಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಹೊಸ ಕಾನೂನಿನ ಕರಡು ಸಿದ್ಧಪಡಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣೆ ಹಾಗೂ ಜನಗಣತಿಯಂತಹ ಕರ್ತವ್ಯಗಳಿಂದ ಶಿಕ್ಷಕರನ್ನು ಸಾಧ್ಯವಾದಷ್ಟು ದೂರವಿಟ್ಟು, ಅವರ ಮೂಲ ಜವಾಬ್ದಾರಿಯಾದ ತರಗತಿ ಬೋಧನೆಗೆ ಆದ್ಯತೆ ನೀಡುವುದು ಕರಡು ಕಾಯ್ದೆಯ ಪ್ರಮುಖ ಉದ್ದೇಶ ವಾಗಿದೆ.
ಕರಡು ಪ್ರಸ್ತಾವನೆಯನ್ನು ವಿವಿಧ ಇಲಾಖೆಗಳ ಒಪ್ಪಿಗೆ ಗಾಗಿ ಕಳುಹಿಸಲಾಗಿದೆ.2026ರ ಜೂನ್ 20ರಿಂದ ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿತ್ತು. ಜೂನ್ 30 ರಿಂದ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಗೊಂಡಿದ್ದು, ರಾಜ್ಯದಲ್ಲಿ ಸಾವಿರಾರು ಶಿಕ್ಷಕರು ಬೂತ್ ಮಟ್ಟದ ಅಧಿಕಾರಿಗಳಾಗಿ ನಿಯೋಜಿ ತರಾಗಿದ್ದರು. ಎಸ್‌ಐಆರ್ ವೇಳಾಪಟ್ಟಿಯ ಪ್ರಕಾರ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಪ್ರಕ್ರಿಯೆ ಯೂ ಸೆಪ್ಟೆಂಬರ್-ಅಕ್ಟೋಬರ್ ಅವಧಿಯವರೆಗೆ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಯಿಂದ ಹೊರಗಿದ್ದು, ತರಗತಿ ಬೋಧನೆಗೆ ಹೊಡೆತ ಬೀಳುತ್ತಿದೆ ಎಂಬ ಆತಂಕ ವ್ಯಕ್ತವಾಗಿತ್ತು. ಜೂನ್‌ನಲ್ಲಿಯೇ ಶಿಕ್ಷಕರ ಬೋಧನಾ ಸಮಯ ಕಡಿಮೆಯಾಗುತ್ತಿರುವ ಬಗ್ಗೆ ವರದಿಗಳು ಬಂದಿದ್ದವು. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಕೆಲವೇ ಶಿಕ್ಷಕರನ್ನು ಬೋಧನೇತರ ಕೆಲಸಕ್ಕೆ ನಿಯೋಜಿಸಿದರೂ ಇಡೀ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಶಿಕ್ಷಣ ವಲಯದವರು ಹೇಳಿದ್ದರು.
ಸರ್ಕಾರದ ಪ್ರಸ್ತಾವಿತ ವ್ಯವಸ್ಥೆಯ ಅತ್ಯಂತ ಪ್ರಮುಖ ಅಂಶವೆಂದರೆ ಬೋಧಕೇತರ ಸಾರ್ವಜನಿಕ ಕರ್ತವ್ಯ ನಿರ್ವಹಣಾ ಪಟ್ಟಿ ರಚಿಸುವುದು. ರಾಜ್ಯದ ವಿವಿಧ ಇಲಾಖೆಗಳು, ಶಾಸನಬದ್ಧ ಮಂಡಳಿಗಳು, ನಿಗಮ ಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ನಿವೃತ್ತ ಸರ್ಕಾರಿ ನೌಕರರು ಹಾಗೂ ತರಬೇತಿ ಪಡೆದ ಸ್ವಯಂಸೇವಕರ ಜಿಲ್ಲಾವಾರು ಪಟ್ಟಿಯನ್ನು ಸಿದ್ಧಪ ಡಿಸುವ ಉದ್ದೇಶವಿದೆ. ಶಿಕ್ಷಕರನ್ನು ನಿಯೋಜಿಸುವ ಮೊದಲು ಈ ಲಭ್ಯವಿರುವ ಮಾನವ ಸಂಪನ್ಮೂಲ ವನ್ನು ಬಳಸಿಕೊಳ್ಳಬೇಕಾಗುತ್ತದೆ.
ಅಂದರೆ, ಮೊದಲ ಆಯ್ಕೆ ಬೋಧಕೇತರ ಸಿಬ್ಬಂದಿ; ಶಿಕ್ಷಕರು ಕೊನೆಯ ಆಯ್ಕೆ ಎಂಬ ವ್ಯವಸ್ಥೆ ರೂಪಿಸು ವುದು ಸರ್ಕಾರದ ಉದ್ದೇಶವಾಗಿದೆ.ಬೋಧಕೇತರ ಕರ್ತವ್ಯಕ್ಕೆ ಶಿಕ್ಷಕರನ್ನು ನಿಯೋಜಿಸುವ ಮುನ್ನ ಸಂಬಂಧಪಟ್ಟ ಜಿಲ್ಲಾಧಿಕಾರಿಯಿಂದ ಲಭ್ಯವಿಲ್ಲದ ಪ್ರಮಾಣಪತ್ರ ಪಡೆಯುವುದು ಕಡ್ಡಾಯಗೊಳಿಸುವ ಪ್ರಸ್ತಾವನೆ ಇದೆ. ಜಿಲ್ಲೆಯಲ್ಲಿ ಬೋಧಕೇತರ ಸಿಬ್ಬಂದಿ ಅಥವಾ ಪರ್ಯಾಯ ಮಾನವ ಸಂಪನೂಲ ಲಭ್ಯವಿಲ್ಲ ಎಂಬುದನ್ನು ಜಿಲ್ಲಾಧಿಕಾರಿ ದೃಢಪಡಿಸಿದ ನಂತರವೇ ಶಿಕ್ಷಕರ ನಿಯೋಜನೆಗೆ ಮುಂದಾಗಬ ಹುದು
ಈ ಮೂಲಕ ಯಾವುದೇ ಇಲಾಖೆಯು ತನ್ನ ಅನುಕೂಲಕ್ಕಾಗಿ ನೇರವಾಗಿ ಶಾಲಾ ಶಿಕ್ಷಕರನ್ನು ಕರ್ತವ್ಯಕ್ಕೆ ಕರೆಸಿಕೊಳ್ಳುವುದನ್ನು ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....