LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತರು.....ಖಡಕ್ ಆದೇಶ.....

ಬೆಂಗಳೂರು -

ಕೆಲಸದ ಊರಲ್ಲೇ ಮನೆ ಮಾಡಬೇಕು ಅಧಿಕಾರಿ ಗಳು ಕಚೇರಿ ವೇಳೆಯಲ್ಲಿ ಸಿಗದ ಅಧಿಕಾರಿಗಳಿಗೆ ಲೋಕಾಯುಕ್ತರು ಬಿಸಿ- ದಿನನಿತ್ಯದ ಓಡಾಟಕ್ಕೆ ಬ್ರೇಕ್ ಹಾಕಿದ ಸರ್ಕಾರದ ಖಡಕ್ ಆದೇಶ ಹೌದು ರಾಜ್ಯದ ಸಾರ್ವಜನಿಕ ಸೇವೆಯಲ್ಲಿ ಶಿಸ್ತು ತರಲು ಮತ್ತು ಜನರ ಕೆಲಸಗಳು ವಿಳಂಬವಿಲ್ಲದೆ ನಡೆಯು ವಂತೆ ಮಾಡಲು ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ತಾವು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲೇ ಕಡ್ಡಾಯವಾಗಿ ವಾಸ್ತವ್ಯ ಹೂಡಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಈ ನಿಯಮ ಉಲ್ಲಂಘಿಸುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.ಅಲ್ಲದೆ ಅಲೆದಾಟಕ್ಕೆ ಬಿತ್ತು ಬ್ರೇಕ್ 

ಹಲವು ಸರ್ಕಾರಿ ನೌಕರರು ಕೆಲಸ ಮಾಡುವ ಸ್ಥಳದಲ್ಲಿ ವಾಸವಿರದೆ, ದೂರದ ಊರುಗಳಿಂದ ಅಥವಾ ನಗರಗಳಿಂದ ದಿನನಿತ್ಯ ಓಡಾಟ ಮಾಡುತ್ತಿ ರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದ ಅಧಿಕಾರಿಗಳು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿಲ್ಲ ಮತ್ತು ಸಾರ್ವಜನಿಕರು ಭೇಟಿ ನೀಡುವ ಸಮಯದಲ್ಲಿ ಲಭ್ಯವಿರುತ್ತಿಲ್ಲ ಈ ಗಂಭೀರ ಲೋಪದ ಬಗ್ಗೆ ಉಪ ಲೋಕಾಯುಕ್ತರು ಸರ್ಕಾರಕ್ಕೆ ವರದಿ ನೀಡಿ, ಅಧಿಕಾರಿಗಳ ಈ ನಡವಳಿಕೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಹೊಸ ಸುತ್ತೋಲೆಯನ್ನು ಹೊರಡಿಸಿದೆ.

ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಾದ ಕೆಸಿಎಸ್‌ಆರ್ ನಿಯಮ 13, 14 ಹಾಗೂ 15ನ್ನು ಉಲ್ಲೇಖಿಸಿರುವ ಸರ್ಕಾರ, ಪ್ರತಿಯೊಬ್ಬ ನೌಕರನು ಅಧಿಕೃತವಾಗಿ ನಿಗದಿಪಡಿಸಿದ ಕೇಂದ್ರ ಸ್ಥಾನದಲ್ಲೇ ನೆಲೆಸಬೇಕು ಎಂದು ನೆನಪಿಸಿದೆ. ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ನೌಕರ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ಒಂದು ವೇಳೆ ಅನುಮತಿ ಪಡೆಯದೆ ಹೊರಗೆ ವಾಸವಿದ್ದರೆ, ಅಂತಹ ದಿನಗಳ ವೇತನ ಮತ್ತು ಭತ್ಯೆಗಳನ್ನು ಪಡೆಯಲು ಆ ನೌಕರನು ಅರ್ಹನಾಗಿರುವುದಿಲ್ಲ ಎಂದು ಸರ್ಕಾರ ಎಚ್ಚರಿಸಿದೆ.

ಗಜೆಟೆಡ್ ಅಧಿಕಾರಿಗಳು ಸಹ ಇಂತಹ ಅಶಿಸ್ತು ತೋರುತ್ತಿರುವುದು ಕಡತಗಳ ವಿಲೇವಾರಿಗೆ ದೊಡ್ಡ ಅಡ್ಡಿಯಾಗಿದೆ ಎಂದು ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ. ಅವರು ಹೊರಡಿಸಿರುವ ಈ ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಹಾಗೂ ನಿಗಮ ಮಂಡಳಿಗಳ ಮುಖ್ಯಸ್ಥರಿಗೆ ರವಾನಿಸಲಾಗಿದೆ. ಸಾರ್ವಜನಿಕರು ಕಚೇರಿಗೆ ಬಂದಾಗ ಅವರ ಅಹವಾಲುಗಳನ್ನು ಆಲಿಸಲು ಅಧಿಕಾರಿಗಳು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ ಲಭ್ಯವಿರಬೇಕು ಎನ್ನುವುದೇ ಈ ಆದೇಶದ ಮುಖ್ಯ ಉದ್ದೇಶವಾಗಿದೆ. ಇಲಾಖಾ ಮುಖ್ಯಸ್ಥರು ತಮ್ಮ ಅಧೀನ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ್ತವ್ಯ ಹೂಡಿರುವುದನ್ನು ಖಚಿತ ಪಡಿಸಿಕೊಳ್ಳಬೇಕು ಮತ್ತು ನಿಯಮ ಮೀರಿದವರ ವಿರುದ್ಧ ತಕ್ಷಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ DDPI ವರ್ಗಾವಣೆ.....ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ.....ಬೆಂಗಳೂರಿನಲ್ಲೂ ಬಿಗ್ ಮಿಶ್ರಾ ಹವಾ..... ಜಯನಗರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಬಿಗ್ ಮಿಶ್ರಾ.....ಕೇಂದ್ರ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ......ಅನುಮೋದನೆ ನೀಡಿದ ಸಚಿವ ಸಂಪುಟಶಿಕ್ಷಕ‌ನ ಕಿರುಕುಳ ಪತ್ನಿ ಆತ್ಮಹತ್ಯೆ..... ಕಳೆದ ಮೂರು ವರ್ಷಗಳಿಂದ ಮದುವೆಯಾಗಿದ್ದ ದಂಪತಿಗಳು.....3 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಅರ್ನಬ್ ಅಬ್ಬರಕ್ಕೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ.....ಶಿಕ್ಷಕರ ಕ್ಷೇತ್ರದಲ್ಲಿ ರಂಗನಾಥ್‌ ಗೆಲುವು.....ಪುಟ್ಟಣ್ಣ ಗೆ ಸೋಲಿನ‌ ರುಚಿ ತೋರಿಸಿದ ಮತದಾರರು.....ಸಂಕಷ್ಟದಲ್ಲಿ ಸರ್ಕಾರಿ ಅಧಿಕಾರಿ.....ವಿಡಿಯೋ ಹಾಕಿ ಎಡವಟ್ಟು ಮಾಡಿಕೊಂಡ ಅಧಿಕಾರಿ.....ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ..... ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ ಶಿಕ್ಷಕ ಮುಹಮ್ಮದ್ ರಫಿ ಕಾರ್ಯಕ್ಕೆ ಮೆಚ್ಚುಗೆ.....ಸರ್ಕಾರಿ ನೌಕರ ಆತ್ಮಹತ್ಯೆ....ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೌಕರ.....ಮಾಜಿ ಶಿಕ್ಷಣ ಸಚಿವ ಬಂಧನ..... ಶಾಲೆಗಳ ಅನುಮತಿ ನೀಡುವ 100 ಕೋಟಿ ವಂಚನೆ ಕೇಸ್​ನಲ್ಲಿ ಲಾಕ್.....