ಬೆಂಗಳೂರು -
ರಾಜ್ಯದ 10 ಜಿಲ್ಲೆಗಳ DDPI ಸೇರಿದಂತೆ 17 ಅಧಿಕಾರಿ ಗಳಿಗೆ ವರ್ಗಾವಣೆ ಮುಂಬಡ್ತಿ ನೀಡಿ ಕರ್ನಾಟಕ ಸರ್ಕಾರ ಆದೇಶ ಹೌದು ರಾಜ್ಯ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ನಿರ್ದೇಶಕರು (ಡಿಡಿಪಿಐ) ಹಾಗೂ ತತ್ಸಮಾನ ವೃಂದದ 17 ಹಿರಿಯ ಅಧಿಕಾರಿಗಳಿಗೆ ಜಂಟಿ ನಿರ್ದೇಶಕರು ಹಾಗೂ ತತ್ಸಮಾನ ವೃಂದಕ್ಕೆ ಮುಂಬಡ್ತಿ ನೀಡಿ, ನೂತನ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.


ಈ ಮೂಲಕ ಹಲವು ಜಿಲ್ಲೆಗಳ ಡಿಡಿಪಿಐ ವರ್ಗಾವಣೆ ಯಾಗಿದೆ. 1,18,700 - 1,75,200 ರೂ. ವೇತನ ಶ್ರೇಣಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಮುಂಬಡ್ತಿ ಮತ್ತು ಸ್ಥಳ ನಿಯುಕ್ತಿಯನ್ನು ಆದೇಶಿಸ ಲಾಗಿದೆ. ಈ ಆದೇಶದನ್ವಯ ಪ್ರಮುಖವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಕಾರ್ಯದರ್ಶಿ ಹುದ್ದೆಗೆ ಗಿರೀಶ್ ಕೃಷ್ಣರಾವ್ ಪದಕಿ ಅವರನ್ನು ನಿಯೋಜಿಸಲಾಗಿದ್ದು, ವಿವಿಧ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಆಯುಕ್ತರ ಕಚೇರಿಗಳ ಜಂಟಿ ನಿರ್ದೇಶಕರ ಹುದ್ದೆಗಳಿಗೆ ಅಧಿಕಾರಿಗಳನ್ನು ನಿಯುಕ್ತಿಗೊ ಳಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....