ಬೆಂಗಳೂರು -
ಕೇದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಬಹುನಿರೀಕ್ಷೆಯಿಂದ ಕಾಯುತ್ತಿರುವ 8ನೇ ಕೇಂದ್ರ ವೇತನ ಆಯೋಗ ರಚನೆಯಾಗಿ ಸುಮಾರು ಒಂದು ವರ್ಷ ಸಮೀಪಿಸುತ್ತಿದ್ದರೂ, ಹೊಸ ವೇತನ ಎಷ್ಟು ಹೆಚ್ಚಳವಾಗಲಿದೆ, ಫಿಟ್ಮೆಂಟ್ ಫ್ಯಾಕ್ಟರ್ ಎಷ್ಟಿರಲಿದೆ ಮತ್ತು ಪರಿಷ್ಕೃತ ವೇತನ ಯಾವಾಗ ಜಾರಿಗೆ ಬರಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ.
ಸದ್ಯ ಆಯೋಗವು ನೌಕರರ ಸಂಘಟನೆಗಳು, ಪಿಂಚಣಿ ದಾರರ ಒಕ್ಕೂಟಗಳು ಹಾಗೂ ವಿವಿಧ ಪಾಲುದಾರರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವ ಹಂತದಲ್ಲಿದೆ.ಕೇಂದ್ರ ಸರ್ಕಾರವು ನೌಕರರ ವೇತನ, ಭತ್ಯೆ ಹಾಗೂ ಪಿಂಚಣಿಯನ್ನು ಪರಿಷ್ಕರಿಸುವ ಉದ್ದೇಶ ದಿಂದ 2025ರ ನವೆಂಬರ್ನಲ್ಲಿ 8ನೇ ಕೇಂದ್ರ ವೇತನ ಆಯೋಗವನ್ನು ರಚಿಸಿತ್ತು. ಆಯೋಗಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ ಹೀಗಾಗಿ, 2027ರ ಮೇ ವೇಳೆಗೆ ವರದಿ ಸಲ್ಲಿಸುವ ಗಡುವು ಇದೆ.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಆಯೋಗದ ಅಧ್ಯಕ್ಷರಾಗಿದ್ದಾರೆ ಮಾಜಿ ಐಎಎಸ್ ಅಧಿಕಾರಿ ಪಂಕಜ್ ಜೈನ್ ಸದಸ್ಯ ಕಾರ್ಯದರ್ಶಿಯಾಗಿದ್ದು, ಪ್ರೊಫೆಸರ್ ಪುಲಕ್ ಘೋಷ್ ಆಯೋಗದ ಸದಸ್ಯರಾಗಿದ್ದಾರೆ.8ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ ಹಾಗೂ ಪಿಂಚಣಿಯಲ್ಲಿ ಬದಲಾವಣೆಗಳಾಗುವ ನಿರೀಕ್ಷೆಯಿದೆ. ಪ್ರಮುಖವಾಗಿ ಈ ಕೆಳಗಿನ ಅಂಶಗಳನ್ನು ಆಯೋಗ ಪರಿಶೀಲಿಸಲಿದೆ.ಮೂಲ ವೇತನ: ವೇತನ ಶ್ರೇಣಿ ಮತ್ತು ಪೇ ಮ್ಯಾಟ್ರಿಕ್ಸ್ನಲ್ಲಿ ಪರಿಷ್ಕರಣೆ.
ಫಿಟ್ಮೆಂಟ್ ಫ್ಯಾಕ್ಟರ್ ಹಳೆಯ ಮೂಲ ವೇತನ ವನ್ನು ಹೊಸ ವೇತನಕ್ಕೆ ಪರಿವರ್ತಿಸುವ ಲೆಕ್ಕಾಚಾರದ ಮಾನದಂಡ.ಭತ್ಯೆಗಳು: ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಸೇರಿದಂತೆ ವಿವಿಧ ಭತ್ಯೆಗಳ ಪರಿಶೀಲನೆ.ಪಿಂಚಣಿ: ನಿವೃತ್ತ ನೌಕರರ ಪಿಂಚಣಿ ಲೆಕ್ಕಾಚಾರ ಮತ್ತು ನಿವೃತ್ತಿ ಸೌಲಭ್ಯಗಳ ಪರಿಷ್ಕರಣೆ.
ಇತರ ಸೌಲಭ್ಯಗಳು: ವಾರ್ಷಿಕ ವೇತನ ಬಡ್ತಿ, ಬಡ್ತಿ ಮತ್ತು ಇತರ ಸೇವಾ ಸೌಲಭ್ಯಗಳ ಕುರಿತು ಶಿಫಾರಸು. ಆದರೆ ವೇತನ ಎಷ್ಟು ಹೆಚ್ಚಳವಾಗಲಿದೆ ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆಯೋಗದ ಅಂತಿಮ ಶಿಫಾರಸುಗಳು ಮತ್ತು ಕೇಂದ್ರ ಸರ್ಕಾರದ ನಿರ್ಧಾರದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.
ಈಗಾಗಲೇ ಯಾವ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಆಯೋಗವು ವಿವಿಧ ನೌಕರರ ಸಂಘಟನೆಗಳು, ಕಾರ್ಮಿಕ ಪ್ರತಿನಿಧಿಗಳು, ಪಿಂಚಣಿ ದಾರರ ಸಂಘಗಳು, ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಇತರ ಪಾಲುದಾರರಿಂದ ಸಲಹೆಗಳನ್ನು ಆಹ್ವಾನಿಸಿತ್ತು.
ಲಭ್ಯವಿರುವ ಮಾಹಿತಿಯ ಪ್ರಕಾರ, ಶಿಫಾರಸುಗಳು ಹಾಗೂ ಮನವಿಗಳನ್ನು ಸಲ್ಲಿಸಲು ಜೂನ್ 15ರವರೆಗೆ ಮತ್ತು ದತ್ತಾಂಶ ಸಲ್ಲಿಸಲು ಜುಲೈ 31ರವರೆಗೆ ಕಾಲಾ ವಕಾಶ ನೀಡಲಾಗಿತ್ತು ಆಯೋಗದ ಕಾರ್ಯಗಳಿಗೆ ನೆರವಾಗಲು ಗುತ್ತಿಗೆ ಆಧಾರದಲ್ಲಿ 23 ಪೂರ್ಣಾವಧಿ ಮತ್ತು ಅರೆಕಾಲಿಕ ಸಲಹೆಗಾರರ ನೇಮಕಾತಿಗೂ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿತ್ತು.
ಇದೀಗ ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸಿ, ನೌಕರರ ವೇತನ, ಭತ್ಯೆಗಳು ಮತ್ತು ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದ ಶಿಫಾರಸುಗಳನ್ನು ರೂಪಿಸುವುದು ಆಯೋಗದ ಮುಂದಿರುವ ಪ್ರಮುಖ ಕಾರ್ಯ ವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....