LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಬಂಗಾರದ ಆಭರಣ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಆರೋಪಿ ಅಂದರ್

ಹುಬ್ಬಳ್ಳಿ - ಮುಗ್ಧ ಗ್ರಾಹಕರನ್ನು ಮೋಸ ಮಾಡಿ ಅವರಿಂದ 330 ಗ್ರಾಂ ಬಂಗಾರ ಹಾಗೂ 5 ಲಕ್ಷ 11‌ ಸಾವಿರ ನಗದು ಎಗರಿಸಿ ಪರಾರಿಯಾಗಿದ್ದ ಆಸಾಮಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುನೀಲ. ಮೋಹನ್. ಪತ್ತಾರ ಬಂಧಿತ ಆರೋಪಿಯಾಗಿದ್ದಾನೆ.

ಇತ ಹುಬ್ಬಳ್ಳಿಯ ಅಕ್ಷಯ ಕಾಲನಿಯ, ಚೇತನಾ ಕಾಲೇಜು ಹಿಂದುಗಡೆ ಬೇರೆ ಬೇರೆ ಸಮಯದಲ್ಲಿ‌ ಬಂಗಾರದ ಆಭರಣ ರಿಪೇರಿ ಮಾಡಿಕೊಡುವುದಾಗಿ.ಜೊತೆಗೆ ಹಂತ ಹಂತವಾಗಿ ಹಣ ತುಂಬಿದವರಿಗೆ ಹಾಲ್ ಮಾರ್ಕ್ ಇರುವ ಚಿನ್ನ ನೀಡುವುದಾಗಿ ಗ್ರಾಹಕರನ್ನು ನಂಬಿಸಿ, ಅವರಿಂದ 330 ಗ್ರಾಂ ಆಭರಣ ಹಾಗೂ 5 ಲಕ್ಷ 11 ಸಾವಿರ ನಗದನ್ನು ತಗೆದುಕೊಂಡು ಹೋಗಿದ್ದನು.ಹಾಗಾಗಿ ಮೋಸ ಹೋದ ಗ್ರಾಹಕರು ವಿದ್ಯಾನಗರ ಪೊಲೀಸ ಠಾಣೆಯ ಮೊರೆಹೋಗಿದ್ದರು. ಈಗ ಬಂಧಿತನಿಂದ ವಿದ್ಯಾನಗರ ಪೊಲೀಸರು,

ಗ್ರಾಹಕರಿಂದ ವಂಚನೆ ಮಾಡಿದ 16 ಲಕ್ಷ 44 ಸಾವಿರ ಮೌಲ್ಯದ 330 ಗ್ರಾಂ ಚಿನ್ನ, 3ಲಕ್ಷ 56 ಸಾವಿರ 4 ನೂರ ರೂಪಾಯಿ ನಗದನ್ನು ವಶಕ್ಕೆ ಪಡಸಿಕೊಂಡಿದ್ದಾರೆ. ಈಗ ಆರೋಪಿ ಸುನೀಲ್‌ನನ್ನು ಬಂಧಿಸಿ ಕಂಬಿ ಹಿಂದೆ ವಿದ್ಯಾನಗರ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಹಾಕಿದ್ದಾರೆ. ಇನ್ಸ್ಪೆಕ್ಟರ್ ಆನಂದ ವನಕುದರಿ, ಪೊಲೀಸ್ ಸಿಬ್ಬಂದಿ ಗಳಾದ ಶಿವಾನಂದ ಬನ್ನಿಕೊಪ್ಪ ,ಬಿ ವಿ ವಿಕ್ಕಬಾಸೂರ ,ಬಸವರಾಜ ಕೋಟಬಾಗಿ,ಬಸವರಾಜ ಕಿತ್ತೂರ,ಯಲ್ಲಪ್ಪ ಶಿಂಡ್ಲೆ,ಎಮ್ ಎನ್ ಗುರಮ್ಮನವರ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....