LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯಶಿಕ್ಷಕಿ ಯ ಮತ್ತೊಂದು ಅವ್ಯವಹಾರ ಬಯಲು ವರ್ಷದ ಹಿಂದೆಷ್ಟೆ ನೇಮಕಗೊಂಡಿದ್ದ ಶಿಕ್ಷಕಿಯಿಂದ ಲಕ್ಷ ಲಕ್ಷ ರೂಪಾಯಿ ಗುಳುಂ.....

ಮೈಸೂರು -

ಮೈಸೂರು ತಾಲೂಕಿನ ಹನಗೋಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಹ ಶಿಕ್ಷಕಿ ಎಸ್.ಅಂಜಲಿ ಮಾರೀಸ್‌ ಅವರ ಮತ್ತೊಂದು ಅವ್ಯವ ಹಾರ ಬಯಲಾಗಿದೆ ಹೌದು ಅಕ್ಷರ ದಾಸೋಹ ಯೋಜನೆ ಯಲ್ಲಿ 4.42ಲಕ್ಷರೂ ಹಣ ದುರುಪಯೋಗದ ಬೆನ್ನಲ್ಲೇ ಈಗ ಇವರನ್ನು ಈಗಾಗಲೇ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಅಮಾನತುಗೊಳಿಸಿ ಆದೇಶ ಹೊರಡಿಸಿ ದ್ದಾರೆ.

ವರ್ಷದ ಹಿಂದಷ್ಟೆ ಕಾಯಂ ಮುಖ್ಯ ಶಿಕ್ಷಕಿಯಾಗಿ ಪ್ರಭಾ ಮಣಿ ಅಧಿಕಾರವಹಿಸಿಕೊಂಡಿದ್ದರು.ಅಕ್ಷರ ದಾಸೋಹ ಯೋಜನೆಯ ಖಾತೆಯಲ್ಲಿ ಹಣ ಬಹಳ ಕಡಿಮೆಯಿರುವು ದನ್ನು ಕಂಡು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ಧೇಶಕರಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದರು.ಎಲ್ಲಾ ಪ್ರೌಢಶಾಲೆಯ ಖಾತೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹಣವಿತ್ತು.ಇಲ್ಲಿ ಹಣವಿಲ್ಲದ ಬಗ್ಗೆ ಅನು ಮಾನಗೊಂಡು ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಲಿಂಗರಾಜಯ್ಯನವರೇ ಶಾಲೆಗೆ ಬಂದು ತಪಾಸಣೆ ನಡೆಸಿದ ವೇಳೆ ಹಣ ದುರುಪಯೋಗದ ಪ್ರಕರಣ ಬಯಲಿಗೆ ಬಂದಿದೆ.

ಜಚಅಂಜಲಿ ಮಾರೀಸ್‌ರವರು ಪ್ರಭಾರಿ ಮುಖ್ಯ ಶಿಕ್ಷಕಿ ಯಾಗಿದ್ದ ವೇಳೆ ಬಿಸಿಯೂಟ ಹಣ ದುರುಪಯೋಗದ ಜೊತೆಗೆ ಪಿಠೋಪಕರಣಗಳಿಗಾಗಿ ಶಾಲಾ ಮಕ್ಕಳಿಂದ ವಸೂಲಿ ಮಾಡಿದ್ದ ೪೮ ಸಾವಿರ ರೂಗಳನ್ನು ಶಾಲಾ ಖಾತೆಗೆ ಜಮೆ ಮಾಡದೆ ಪೀಠೋಪಕರಣವನ್ನು ಮಾಡಿಸದೆ ತಮ್ಮ ಬಳಿಯೇ ಹಣವಿಟ್ಟುಕೊಂಡು ದುರುಪಯೋಗಪಡಿ ಸಿಕೊಂಡ ಪಡಿಸಿಕೊಂಡಿದ್ದು ಸಹ ತನಿಖೆ ವೇಳೆ ಪೋಷ ಕರು ಅಧಿಕಾರಿಗಳಿಗೆ ದೂರಿದ್ದರು.ಮಾರನೇ ದಿನವೇ ಈ ಹಣವನ್ನು ಖಾತೆಗೆ ಜಮೆ ಮಾಡಿದ್ದರಾದರೂ ಅಕ್ಷರ ದಾಸೋಹದ ಹಣ ಮಾತ್ರ ಪಾವತಿಸಿರಲಿಲ್ಲ ತನಿಖೆ ವೇಳೆ ಸಮರ್ಪಕ ಉತ್ತರ ನೀಡಿರಲಿಲ್ಲ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....