LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಕಾಂಗ್ರೇಸ್ ಪಕ್ಷದ ಸೇರಲಿದ್ದಾ ರೆಯೇ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ – ಸೇರ್ಪಡೆಗೆ ಕೈ ಪಕ್ಷದಲ್ಲಿ ಯೇ ವಿರೋಧ…..

ಧಾರವಾಡ -

ಮುಖ್ಯಮಂತ್ರಿ ರೇಸ್ ನಲ್ಲಿದ್ದು ಕೊನೆಗೆ ಸಚಿವ ರಾಗುತ್ತಾರೆಂದುಕೊಂಡಿದ್ದ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕಾಂಗ್ರೇಸ್ ಪಕ್ಷವನ್ನು ಸೇರುತ್ತಿದ್ದಾರಂತೆ. ಹೌದು ಕಾಂಗ್ರೇಸ್ ಪಕ್ಷ ಸೇರತಾರಾ ಶಾಸಕ ಅರವಿಂದ ಬೆಲ್ಲದ ಎನ್ನುವ ಬಿಸಿ ಬಿಸಿ ಮಾತುಗಳು ಚರ್ಚೆ ಈಗ ಹುಬ್ಬಳ್ಳಿ ಧಾರವಾಡ ತುಂಬೆಲ್ಲಾ ಜೋರಾಗಿ ಕೇಳಿ ಬರುತ್ತಿದೆ.

ಅರವಿಂದ ಬೆಲ್ಲದ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು ಮುಖ್ಯಮಂತ್ರಿ ಗಾದೆಯ ರೇಸ್ ನಲ್ಲಿದ್ದು ಇವರು ಕೊನೆಗೆ ಸಚಿವರಾಗುತ್ತಾರೆ ಎಂದುಕೊಳ್ಳಲಾಗಿತ್ತು. ಇವೆರೆಡು ಕೈತಪ್ಪಿದ್ದು ಹೀಗಾಗಿ ಇವರು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿದ್ದಾರೆ ಎಂಬ ಮಾತುಗಳು ಬೆಂಗಳೂರಿನ ಡಿಕೆಶಿ ಅವರ ಮನೆಯಿಂದ ಹುಬ್ಬಳ್ಳಿ ಧಾರವಾಡ ತುಂಬೆಲ್ಲಾ ಜೋರಾಗಿ ಕೇಳಿ ಬರುತ್ತಿವೆ. ಮುಖ್ಯಮಂತ್ರಿ ರೇಸ್ ನಲ್ಲಿದ್ದು ಅದು ಆಗದೇ ಸಚಿವರಾಗಲಿಲ್ಲ ಹೀಗಾಗಿ ಬೇಸರಗೊಂಡಿರುವ ಇವರು ಹುಬ್ಬಳ್ಳಿ-ಧಾರವಾಡ 74 ರ ಶಾಸಕರು ಕಾಂಗ್ರೆಸ್ ಗೆ ಸೇರುತ್ತಿದ್ದಾರೆ. ಹೀಗಾಗಿ ಶಾಸಕರ ಸೇರ್ಪಡೆ ಗೆ ಕಾಂಗ್ರೆಸ್ ನಲ್ಲಿಯೇ ಆರಂಭದಲ್ಲಿಯೇ ಸಾಕಷ್ಟು ವಿರೋಧ ಕೇಳಿ ಬರುತ್ತಿದೆ.

ಕೈ ಕಾರ್ಯ ಕರ್ತರಿಂದ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು ಧಾರವಾಡ 74 ರ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸೇರ್ತಾರಾ ಕಾಂಗ್ರೆಸ್ ಎಂಬ ಗುಮಾನಿಯ ಮಾತುಗಳು ಹರಡಿದ್ದು ಡಿಕೆಶಿ ಅವರನ್ನು ಬೆಂಗಳೂರಿನಲ್ಲಿ ಬೆಲ್ಲದ ಭೇಟಿ ಮಾಡಿದ್ದಾರಂತೆ.ಇನ್ನೂ ನವಲಗುಂದ ಮಾಜಿ ಶಾಸಕ ಎನ್.ಎಚ್ ಕೋನರಡ್ಡಿ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದ್ದು ಇದನ್ನು ಸ್ವಾಗತ ಮಾಡಿದ್ದು ಜೆಡಿಎಸ್ ಬಿಜೆಪಿ ಶಾಸಕರು ಕೈ ಮುಖಂಡರ ಭೇಟಿ ಮಾಡಿರೋ ಹಿನ್ನೆಲೆ.ಧಾರವಾಡ ಕಾಂಗ್ರೆಸ್ ಕಾರ್ಯ ಕರ್ತರಲ್ಲಿ ಅಸಮಾಧಾನ ಕಂಡು ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ತೋರುತ್ತಿದ್ದಾರೆ ಕೈ ಪಡೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....