LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಪೊಗರು ಚಿತ್ರದ ವಿರುದ್ಧ ಬ್ರಾಹ್ಮಣ ಸಭಾ ಆಕ್ರೋಶ

ಧಾರವಾಡ‌ -

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಚಿತ್ರದ ವಿರುದ್ಧ ಧಾರವಾಡ ತಾಲೂಕಾ ಬ್ರಾಹ್ಮಣ ಸಭಾ ಆಕ್ರೋಶ ಹೊರ ಹಾಕುತ್ತಿದೆ. ಈ ಚಲನಚಿತ್ರದಲ್ಲಿ ಬ್ರಾಹ್ಮಣ ಹಾಗೂ ಸನಾತನ ಹಿಂದೂ ಧರ್ಮವನ್ನು ಅವಮಾನಿಸುವ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ಗುರುವಾರ ದೊಳಗೆ ಆ ದೃಶ್ಯಗಳನ್ನು ತೆಗೆದು ಹಾಕದೇ ಇದ್ದರೆ ದೊಡ್ಡಮಟ್ಟದಲ್ಲಿ ಹೋರಾಟಕ್ಕೆ ಮುಂದಾಗಬೇಕಾ ಗುತ್ತದೆ ಎಂದು ಧಾರವಾಡ ತಾಲೂಕಾ ಬ್ರಾಹ್ಮಣ ಸಭಾದ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರಕ್ಕೆ ಸೆನ್ಸಾರ್ ಮಾಡುವಾಗ ಸರ್ಕಾರವಾದರೂ ಈ ದೃಶ್ಯಗಳನ್ನು ಗಮನಿಸಬೇಕಿತ್ತು. ಒಂದು ರೀತಿಯಲ್ಲಿ ಸರ್ಕಾರ ಕೂಡ ಇದಕ್ಕೆ ಹಿಂದಿನಿಂದ ಬೆಂಬಲ ಕೊಟ್ಟಿದೆ. ಚಿತ್ರದಲ್ಲಿನ ಆ ದೃಶ್ಯಾವಳಿ ಗಳನ್ನು ತೆಗೆದು ಹಾಕದೇ ಇದ್ದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗ ಬೇಕಾಗುತ್ತದೆ ಎಂದಿದ್ದಾರೆ.

https://youtu.be/5ojGpRyST8U

ಹಿಂದೂ ಜಾಗರಣ ವೇದಿಕೆ ಮುಖಂಡ ಜಯತೀರ್ಥ ಮಳಗಿ ಮಾತನಾಡಿ, ಯಾವುದೇ ಸಿನಿಮಾದಲ್ಲಿ ಉಳಿದ ಧರ್ಮದ ಆಚರಣೆಯನ್ನು ಅವಮಾನ ಮಾಡುವುದಿಲ್ಲ. ಆದರೆ, ಪ್ರತಿ ಸಿನಿಮಾನದಲ್ಲಿ ಹಿಂದೂ ಹಾಗೂ ಹಿಂದೂ ಧರ್ಮದ ಆಚರಣೆ ಯನ್ನು ಅವಮಾನಿಸುತ್ತಲೇ ಬರಲಾಗುತ್ತಿದೆ. ಇದು ನಮ್ಮ ದುರ್ದೈವ. ನಮಗೆ ಶಾಸ್ತ್ರ ಹೇಳುವುದೂ ಗೊತ್ತು. ಶಸ್ತ್ರ ಹಿಡಿಯುವುದೂ ಗೊತ್ತು. ಇನ್ನು ಮುಂದೆ ಯಾವುದೇ ಚಿತ್ರ ನಿರ್ಮಾಪಕರು ಈ ರೀತಿಯ ಅವಹೇಳನಕಾರಿ ದೃಶ್ಯಗಳನ್ನು ಸೆರೆ ಹಿಡಿದು ಹಿಂದೂ ಧರ್ಮಕ್ಕೆ ಅವಮಾನಿಸುವ ಕೆಲಸ ಮಾಡಬಾರದು. ಪೊಗರು ಚಿತ್ರ ತಂಡದವರು ಕೂಡಲೇ ಆ ದೃಶ್ಯಾವಳಿಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....