LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಪಾಲಿಕೆ ಚುನಾವಣೆ – ಸಂಜೆ ಹೊರ ಬೀಳಲಿದೆ ಭವಿಷ್ಯ

ಬೆಂಗಳೂರು -

ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ಅಂತಿಮವಾಗಿದೆ. ಬೆಂಗಳೂರಿನ ಹೈಕೊರ್ಟ್ ನಲ್ಲಿ ಈಗಾಗಲೇ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ,ಚುನಾವಣಾ ಆಯೋಗ,ಅರ್ಜಿದಾರರು ಹೀಗೆ ಮೂವರ ಪರವಾಗಿ ನ್ಯಾಯವಾದಿಗಳಿಂದ ನ್ಯಾಯಾಧೀಶರು ವಾದ ಪ್ರತಿವಾದವನ್ನು ಆಲಿಸಿದ್ರು. ಈ ಹಿಂದೆ ಅಂದರೆ ಶುಕ್ರವಾರ ವಿಚಾರಣೆ ಮಾಡಿದ ವಿಭಾಗೀಯ ಪೀಠದ ನ್ಯಾಯಾಧೀಶರು ಇಂದು ಸಂಜೆ ಆದೇಶವನ್ನು ಪ್ರಕಟಿಸಲಿದ್ದಾರೆ.

ಈಗಾಗಲೇ ವಿಭಾಗೀಯ ಪೀಠದಲ್ಲಿ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳು ಮತ್ತೆ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ಪರ ವಕೀಲರಿಂದ ವಾದವನ್ನು ಆಲಿಸಿದ್ರು. ಅರ್ಜಿಯನ್ನು ವಿಚಾರಣೆಗೆ ಮುಂದೂಡಿದ್ದರು. ಮತ್ತೆ ಅರ್ಜಿಯನ್ನು ವಿಚಾರಣೆ ಮಾಡಿ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ವಾದ ಪ್ರತಿವಾದವನ್ನು ಆಲಿಸಿ ಇವತ್ತು ಆದೇಶವನ್ನು ಕಾಯ್ದಿರಿಸಿದ್ರು. ಈಗಾಗಲೇ ವಾದ ಪ್ರತಿವಾದವನ್ನು ಆಲಿಸಿರುವ ನ್ಯಾಯಮೂರ್ತಿಗಳು ಬಹುತೇಕವಾಗಿ ಇಂದೇ ಸಂಜೆ ಅಂತಿಮ ತೀರ್ಪನ್ನು ಪ್ರಕಟಿಸಲಿದ್ದಾರೆ .

ಇಂದು ನ್ಯಾಯಮೂರ್ತಿಗಳು ಈ ಒಂದು ಆದೇಶವನ್ನು ಸಂಜೆ ನಾಲ್ಕು ಘಂಟೆಗೆ ಆದೇಶವನ್ನು ನೀಡಲಿದ್ದಾರೆ. ಚುನಾವಣಾ ಆಯೋಗದ ಪರವಾಗಿ ಹಾಜರಾದ ನ್ಯಾಯವಾದಿಗಳು 82 ವಾರ್ಡ ಗಳಿಗೆ ಚುನಾವಣೆ ಮಾಡೋಣಾ,ಬೇರೆ ಮಾಡೋದಾದ್ರೆ ಮತ್ತೆ ಮೀಸಲಾತಿ ಮಾಡಿದರೆ ತುಂಬಾ ತಡವಾಗುತ್ತದೆ ಅಲ್ಲದೇ ಇದರೊಂದಿಗೆ ಮತ್ತೊಂದು ಸಮಸ್ಯೆಯಾಗುತ್ತದೆ ಎಂದಿದ್ದಾರೆ. ಅಲ್ಲದೇ ಈಗಾಗಲೇ ತಡವಾಗಿದ್ದು ಮತ್ತೆ ವಿಳಂಬವಾಗುತ್ತದೆ ಎಂದು ಹೇಳಿದರು. ಇನ್ನೂ ರಾಜ್ಯ ಸರ್ಕಾರದ ಪರವಾಗಿ ಎಜಿ ಫಣೀಂದ್ರ ಅವರು ಹಾಜರಾಗಿದ್ದರು.ಇನ್ನೂ ಇತ್ತ ಚುನಾವಣೆ ವಿಳಂಬ ಕುರಿತಂತೆ ಹುಬ್ಬಳ್ಳಿಯ ಕಾಂಗ್ರೇಸ್ ಪಕ್ಷದ ಮುಖಂಡ ನಾಗರಾಜ ಗೌರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರ ಪರವಾಗಿ ಎಸ್ ಪಿ ಶಂಕರ್ ನ್ಯಾಯವಾದಿಗಳು ಹಾಜರಾಗಿ ವಾದವನ್ನು ಮಂಡಿಸಿದ್ರು.ಒಟ್ಟಾರೆ ಈಗಾಗಲೇ ಮೂವರು ನ್ಯಾಯವಾದಿಗಳಿಂದ ವಾದ ಪ್ರತಿವಾದವನ್ನು ಆಲಿಸಿರುವ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ಇಂದು ಚುನಾವಣೆ ಮಾಡುವ ಕುರಿತಂತೆ ಗ್ರೀನ್ ಸಿಗ್ನಲ್ ಅಂತಿಮ ತೀರ್ಪನ್ನು ಸಂಜೆ ಪ್ರಕಟ ಮಾಡಲಿದ್ದಾರೆ.ಇನ್ನೂ ನ್ಯಾಯಾಲಯದ ಆದೇಶದ ಯಾವಾಗ ಎನ್ನುತ್ತಾ ಹುಬ್ಬಳ್ಳಿ ಧಾರವಾಡ ಜನತೆ ಕುತೂಹಲದಿಂದ ಕಾಯತಾ ಇದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....