LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಶಾಲೆಗಳಿಗೆ ಮಿಂಚಿನ ಸಂಚಾರ ಯಶಸ್ವಿಯತ್ತ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅರಸನಾಳ ನೇತೃತ್ವದಲ್ಲಿ

ಧಾರವಾಡ -

ಇನ್ನೇನು ಶಾಲೆಗಳು ಆರಂಭವಾಗುವ ಆಶಯ ದೊಂದಿಗೆ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾ ಧಿಕಾರಿಗಳಾದ ಉಮೇಶ ಬಮ್ಮಕ್ಕನವರ ಇವರ ಮಾರ್ಗದರ್ಶನದಲ್ಲಿ ಧಾರವಾಡ ತಾಲ್ಲೂಕಿನಾದ್ಯಂತ ನಾಲ್ಕು ಐದು ಜನರ ತಂಡಗಳನ್ನು ಮಾಡಿಕೊಂಡು ಎಲ್ಲಾ ಶಾಲೆಗಳಿಗೆ ಬೇಟಿನೀಡಿ ಪರ್ಯಾಯ ಶಿಕ್ಷಣ ಕಲಿಕೆ ಸೇರಿದಂತೆ, ಮಕ್ಕಳ ಕಲಿಕೆಗೆ ಸಂಬಂಧಿಸಿ ದಂತೆ ಮಕ್ಕಳ ಪಾಲಕರ ಬಳಿ ಇರುವ ವ್ಯವಸ್ಥೆ ಹಾಗೂ ಶಿಕ್ಷಕರು ಮಾಡಿಕೊಂಡ‌ ಪರ್ಯಾಯ ವ್ಯವಸ್ಥೆ ಸೇರಿದಂತೆ,

ವಾರ್ಷಿಕ ಅಂದಾಜು, ಪೂರಕ ಪರೀಕ್ಷೆ ಮತ್ತು ಮಕ್ಕಳಿಗೆ ಕಲಿಕೆಯ ನಿತ್ಯ ಸಂಪರ್ಕ ಇರುವ ಹಾಗೆ ಮಕ್ಕಳ ತರಗತಿವಾರು ವಾಟಸಪ್ ಗ್ರುಪ್ ಗಳನ್ನು ರಚಿಸಿಕೊಂಡು, ಆ ಗ್ರುಪ್ ಗಳ‌ ಮೂಲಕ ಮಕ್ಕಳಿಗೆ ಹೇಗೆ ಕಾರ್ಡಗಳ ಮೂಲಕ ಕಲಿಕೆಯ ಸಂಪರ್ಕ ಸಾಧಿಸಬಹುದು ಎಂಬ ಬಗ್ಗೆ ಶಿಕ್ಷಕರಿಗೆ ಮಾರ್ಗ ದರ್ಶನ ಮಾಡುವುದೇ ಮಿಂಚಿನ ಸಂಚಾರದ ಮೂಲ ಉದ್ದೇಶ ಎಂದು ಧಾರವಾಡ ತಾಲ್ಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್ ಟಿ ಅರಸನಾಳ ತಿಳಿಸಿದರು

ಇವರೊಂದಿಗೆ ಸಂಪನ್ಮೂಲ ಶಿಕ್ಷಕರಾದ ಶ್ರೀಮತಿ ಕರಿಗಾರ, ಎ ಎ ಚಕೋಲಿ,ಎಂ ಡಿ ಹೊಸಮನಿ ಹಾಜರಿದ್ದು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಹೆಬ್ಬಳ್ಳಿಯ ಜಿ ಬಿ ಶೆಟ್ಟರ್ ತಿಳಿಸಿದರು.ಇದೇ ಸಂದರ್ಭದಲ್ಲಿ ಶಿಕ್ಷಕ ಎಸ್ ಎ ಜಾಧವ ಹಸೀನಾ ಸಮುದ್ರಿ, ಶಿವಬಸವ ಜೋತಿ, ಭಾರತಿ ಶಿಂದೆ, ಅಕ್ಬರಲಿ ಸೋಲಾಪುರ, ಸಾವಿತ್ರಿ ಜಾಲಿಮರದ, ನಾಗರತ್ನ ಅಂಚಟಗೇರಿ, ಅನ್ನಪೂರ್ಣೇಶ್ವರಿ ಹಳ್ಳಿಕೇರಿಮಠ,ಅನೀಸಾ ಕೊಲ್ಹಾಪುರ,ವಿ ವಿ ಕಟ್ಟಿ‌ ರೇಶ್ಮಾ ನಧಾಪ,ಎನ್ ಎನ್ ಹಾಲಿಗೇರಿ ಎಲ್ ಬಿ ಕೊಂಗವಾಡ ಸುಶ್ಮಾ ನರ್ಚಿ, ಅವರು ಈ ಕರೋನ ಸಾಂಕ್ರಾಮಿಕ ರೋಗ ಸಂಪೂರ್ಣ ಹೋಗಬೇಕು, ಮುಖಾಮುಖಿ ಕಲಿಕೆ ಆರಂಭವಾಗಬೇಕು ಎಂದು ಸದಾಶಯ ವ್ಯಕ್ತಪಡಿಸಿ ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....