LIVE TV LocalCrimeNationalInternationalPoliticsEducationTechnologyEntertainmentSportsFeature
State News

Bed ಅರ್ಹತೆಯುಳ್ಳ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್.....ಮತ್ತೊಮ್ಮೆ ಸುವರ್ಣ ಅವಕಾಶ.....

ಬೆಂಗಳೂರು -

ಬಿಎಡ್ ಅರ್ಹತೆಯುಳ್ಳ ಪ್ರಾಥಮಿಕ ಶಿಕ್ಷಕರಿಗೆ ಮತ್ತೊಂದು ಅವಕಾಶ ದೊಂದಿಗೆ ಗುಡ್ ನ್ಯೂಸ್ ನೀಡಲಾಗಿದ್ದು ಇಲ್ಲಿದೆ ಮಹತ್ವದ ಸುದ್ದಿ ಹೌದು ಬಿ.ಎಡ್ ಅರ್ಹತೆಯುಳ್ಳ ಪ್ರಾಥಮಿಕ ಶಿಕ್ಷಕರಿಗೆ 6 ತಿಂಗಳ ಅವಧಿಯ ಸರ್ಟಿಫಿಕೇಟ್ ಬ್ರಿಡ್ಜ್ ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳಲು ಮತ್ತೊಮ್ಮೆ ಸುವರ್ಣಾ ವಕಾಶ ಕಲ್ಪಿಸಲಾಗಿದೆ.ಈ ಹಿಂದೆ ವಿವಿಧ ಕಾರಣ ಗಳಿಂದ ನೋಂದಣಿ ಮಾಡಿಕೊಳ್ಳಲು ವಿಳಂಬ ಮಾಡಿದ ಅರ್ಹ ಶಿಕ್ಷಕರು ಈಗ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸರ್ಕಾರಿ ಶಿಕ್ಷಕರು ಸೇರಿದಂತೆ ಹಲವು ಪಾಲುದಾರರು ನೋಂದಣಿ ಪೋರ್ಟಲ್ ಅನ್ನು ಪುನಃ ಆರಂಭಿಸು ವಂತೆ NIOS ಸಂಸ್ಥೆಗೆ ಸತತವಾಗಿ ಮನವಿ ಸಲ್ಲಿಸಿದ್ದರು. ಶಿಕ್ಷಕರ ಈ ಕೋರಿಕೆಯನ್ನು ಗಂಭೀರವಾಗಿ ಪರಿಗಣಿ ಸಿದ ಸಕ್ಷಮ ಪ್ರಾಧಿಕಾರವು, ಪೋರ್ಟಲ್ ತೆರೆಯಲು ಗ್ರೀನ್ ಸಿಗ್ನಲ್ ನೀಡಿದೆ.

ಇದರನ್ವಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 21, 2026 ರಿಂದ ಆರಂಭವಾಗಲಿದ್ದು ಅಕ್ಟೋಬರ್ 28 ರವರೆಗೆ ಮಾತ್ರ ಲಭ್ಯವಿರಲಿದೆ‌ನಿಗದಿತ ಗಡುವು ಮುಗಿದ ಬಳಿಕ ಯಾವುದೇ ಕಾರಣಕ್ಕೂ ದಿನಾಂಕ ವನ್ನು ವಿಸ್ತರಿಸುವುದಿಲ್ಲ ಎಂದು NIOS ಸ್ಪಷ್ಟಪಡಿಸಿದೆ. ಹೀಗಾಗಿ ಅರ್ಹ ಪ್ರಾಥಮಿಕ ಶಿಕ್ಷಕರು ಕೊನೆಯ ಕ್ಷಣದವರೆಗೆ ಕಾಯದೆ ಆದಷ್ಟು ಬೇಗ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸ ಲಾಗಿದೆ.

ಆಸಕ್ತ ಹಾಗೂ ಅರ್ಹ ಶಿಕ್ಷಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅರ್ಜಿ ನಮೂನೆ ಭರ್ತಿ ಮಾಡುವ ಮುನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳುವುದು ಕಡ್ಡಾಯವಾಗಿದೆ.ಮೊದಲಿಗೆ ಅಧಿಕೃತ ವೆಬ್‌ಸೈಟ್ bridge.nios.ac.in ಗೆ ಭೇಟಿ ನೀಡಿ

ಮುಖಪುಟದಲ್ಲಿ ಲಭ್ಯವಿರುವ ಈಗಲೇ ನೋಂದಾ ಯಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್ ಮೇಲೆ ಬರುವ ಪ್ರಮುಖ ಸೂಚನೆಗಳನ್ನು ಸಂಪೂರ್ಣವಾಗಿ ಓದಿ ಮುಂದುವರಿಯಿರಿ ನಿಮ್ಮ ಮೂಲಭೂತ ವಿವರ ಗಳ ಜತೆಗೆ ವೈಯಕ್ತಿಕ ಹಾಗೂ ವೃತ್ತಿಪರ ಮಾಹಿತಿ ಯನ್ನು ಯಾವುದೇ ತಪ್ಪುಗಳಿಲ್ಲದೆ ನಿಖರವಾಗಿ ಭರ್ತಿ ಮಾಡಿ ಕೋರ್ಸ್‌ಗೆ ಅಗತ್ಯವಿರುವ ಎಲ್ಲಾ ಸಂಬಂಧಿತ ದಾಖಲೆಗಳನ್ನು ಸರಿಯಾದ ಮಾಪನದಲ್ಲಿ ಅಪ್‌ ಲೋಡ್ ಮಾಡಿ

ನಿಗದಿತ ಶುಲ್ಕವನ್ನು ಪಾವತಿಸಿ, ಅರ್ಜಿ ನಮೂನೆ ಯನ್ನು ಅಂತಿಮವಾಗಿ ಸಬ್ಮಿಟ್ (Submit) ಮಾಡಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ದೃಢೀಕರಣ ಪುಟವನ್ನು (Confirmation Page) ಡೌನ್‌ಲೋಡ್ ಮಾಡಿಕೊಂಡು, ಮುಂದಿನ ಬಳೆಕೆ ಗಾಗಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ

NIOS ಬ್ರಿಡ್ಜ್ ಕೋರ್ಸ್‌ಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅಕ್ಟೋಬರ್ 28 ಕೊನೆಯ ದಿನವಾಗಿದೆ. ಈ ಅವಧಿ ಮುಗಿದ ನಂತರ ಯಾವುದೇ ಕಾರಣಕ್ಕೂ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಸಂಸ್ಥೆ ಕಟ್ಟುನಿಟ್ಟಾಗಿ ತಿಳಿಸಿರುವುದರಿಂದ, ಅರ್ಹ ಶಿಕ್ಷಕರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ DDPI ವರ್ಗಾವಣೆ.....ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ.....ಬೆಂಗಳೂರಿನಲ್ಲೂ ಬಿಗ್ ಮಿಶ್ರಾ ಹವಾ..... ಜಯನಗರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಬಿಗ್ ಮಿಶ್ರಾ.....ಕೇಂದ್ರ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ......ಅನುಮೋದನೆ ನೀಡಿದ ಸಚಿವ ಸಂಪುಟಶಿಕ್ಷಕ‌ನ ಕಿರುಕುಳ ಪತ್ನಿ ಆತ್ಮಹತ್ಯೆ..... ಕಳೆದ ಮೂರು ವರ್ಷಗಳಿಂದ ಮದುವೆಯಾಗಿದ್ದ ದಂಪತಿಗಳು.....3 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಅರ್ನಬ್ ಅಬ್ಬರಕ್ಕೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ.....ಶಿಕ್ಷಕರ ಕ್ಷೇತ್ರದಲ್ಲಿ ರಂಗನಾಥ್‌ ಗೆಲುವು.....ಪುಟ್ಟಣ್ಣ ಗೆ ಸೋಲಿನ‌ ರುಚಿ ತೋರಿಸಿದ ಮತದಾರರು.....ಸಂಕಷ್ಟದಲ್ಲಿ ಸರ್ಕಾರಿ ಅಧಿಕಾರಿ.....ವಿಡಿಯೋ ಹಾಕಿ ಎಡವಟ್ಟು ಮಾಡಿಕೊಂಡ ಅಧಿಕಾರಿ.....ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ..... ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ ಶಿಕ್ಷಕ ಮುಹಮ್ಮದ್ ರಫಿ ಕಾರ್ಯಕ್ಕೆ ಮೆಚ್ಚುಗೆ.....ಸರ್ಕಾರಿ ನೌಕರ ಆತ್ಮಹತ್ಯೆ....ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೌಕರ.....ಮಾಜಿ ಶಿಕ್ಷಣ ಸಚಿವ ಬಂಧನ..... ಶಾಲೆಗಳ ಅನುಮತಿ ನೀಡುವ 100 ಕೋಟಿ ವಂಚನೆ ಕೇಸ್​ನಲ್ಲಿ ಲಾಕ್.....