LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಮಾನವೀಯತೆ ಮೆರೆದ ಧಾರವಾಡದ ಯುವಕರು - ನಿಮಗೊಂದು ಸಲಾಂ

ಧಾರವಾಡ -

ಬೈಕ್ ಸವಾರೊಬ್ಬನಿಗೆ ವಾಹನವೊಂದು ಹಿಟ್‌ ಅಂಡ್‌ ರನ್ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಮರಾಠಾ ಕಾಲೊನಿಯ ಮುಖ್ಯ ರಸ್ತೆಯಲ್ಲಿ ಈ ಒಂದು ಅಪಘಾತ ನಡೆದಿದೆ. ಅಪಘಾತ ಮಾಡಿ ವಾಹನವೊಂದು ಪರಾರಿಯಾಗಿದೆ.

ಇನ್ನೂ ರಸ್ತೆಯಲ್ಲಿ ಬೈಕ್ ಸವಾರ ಬಿದ್ದಿದನ್ನು ನೋಡಿದ ಸಾರ್ವಜನಿಕರು ಅಪಘಾತಕ್ಕಿಡಾದ ಯುವಕನ ರಕ್ಷಣೆಗೆ ಮುಂದಾದರು. ಬರೊಬ್ಬರಿ ಒಂದು ಘಂಟೆಗಳ ಕಾಲ 108 ಗೆ ಕರೆ ಮಾಡಿದ್ದಾರೆ. ಇವರ ಕರೆಗೆ ಯಾರೂ ಕೂಡಾ ಸ್ಪಂದಿಸಿಲ್ಲ.

ರಸ್ತೆ ಮಧ್ಯದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನ ರಕ್ಷಣೆಗೆ ಯುವಕರು ಸಾರ್ವಜನಿಕರು ಪರದಾಡಿದರು. 108 ನಿಂದ ಹಿಡಿದು ಎಲ್ಲರಿಗೂ ಕರೆ ಮಾಡಿದರು ಯಾರೂ ಕೂಡಾ ಸ್ಪಂದಿಸಲಿಲ್ಲವಂತೆ‌.

ಕೊನೆಗೂ ಬಿಡದೇ ಕರೆ ಮಾಡಿ ಮಾಡಿ 108 ಕರೆಸಲಾಯಿತು. ಸ್ಥಳಕ್ಕೆ ಅಂಬ್ಯೂಲೆನ್ಸ್ ಆಗಮಿಸಿತು. ಮಮ್ಮಿಗಟ್ಟಿ ಗ್ರಾಮದ ಮಂಜುನಾಥ ಜಿ ಮಳ್ಳೂರ ಎಂಬ ಯುವಕನಿಗೆ ಅಪಘಾತವಾಗಿದೆ. ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು.ಸ್ಥಳದಲ್ಲೇ ಇದ್ದ ಅಶೋಕ ಕನ್ನೂರ ,ಹಂಸರಾಜ ತೇಗೂರ,ಮನೋಹರ ಯಾವಗಲ್ಲ್, ತನ್ವೀರ್ ಹುಸೇನ್‌ ,ಮೆಕಾನಿಕ್ ರಾಜು ಸೇರಿದಂತೆ ಹಲವು ಯುವಕರು ರಸ್ತೆಯಲ್ಲಿ ಬಿದ್ದಿದ್ದ ಮಂಜುನಾಥನನ್ನು ಆಸ್ಪತ್ರೆಗೆ ಸೇರಿಸಿದರು‌. ಇತ್ತ ಧಾರವಾಡ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿ ಮಾಹಿತಿಯನ್ನು ಪಡೆದುಕೊಂಡರು.ಒಟ್ಟಾರೆ ಧಾರವಾಡದ ಯುವಕರು ಅಪಘಾತವನ್ನು ನೋಡಿ ಸುಮ್ಮನೇ ಹೋಗದೇ ಮಾನವೀಯತೆ ಮೆರೆದಿದ್ದಾರೆ .

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....