LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದ ಶಾಲಾ ಶಿಕ್ಷಕರಿಗೆ ಮಹತ್ವದ ಸೂಚನೆ.....ಮಹತ್ವದ ಮಾಹಿತಿ ನಿಮಗಾಗಿ.....

ಬೆಂಗಳೂರು

 ರಾಜ್ಯದ ಎಲ್ಲಾ ಶಾಲೆಗಳಲ್ಲಿ DIKSHA ಪೋರ್ಟಲ್ ಬಳಕೆಯನ್ನು ಹೆಚ್ಚಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಮಹತ್ವದ ಸುತ್ತೋಲೆ ಹೊರಡಿಸಿದೆ UDISE+ ನಲ್ಲಿ ನೋಂದಣಿಯಾಗಿರುವ ಎಲ್ಲಾ ಶಿಕ್ಷಕರು DIKSHA ಪೋರ್ಟಲ್‌ನಲ್ಲೂ ನೋಂದಣಿ ಮಾಡಿಕೊಳ್ಳಬೇಕು ಜೊತೆಗೆ, DIKSHA ಇ-ಸಂಪನ್ಮೂಲಗಳನ್ನು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಪರಿಣಾಮಕಾರಿ ಯಾಗಿ ಬಳಸುವಂತೆ ಇಲಾಖೆ ಸೂಚಿಸಿದೆ.

DSERT ನಿರ್ದೇಶಕರು 2026ರ ಸೆಪ್ಟೆಂಬರ್ 22 ರಂದು ಹೊರಡಿಸಿರುವ ಸುತ್ತೋಲೆಯಂತೆ, ಕರ್ನಾಟಕ ದಲ್ಲಿ DIKSHA ಪೋರ್ಟಲ್‌ನ ದೈನಂದಿನ ಸರಾಸರಿ ಸಕ್ರಿಯ ಬಳಕೆದಾರರ ಪ್ರಮಾಣ ರಾಷ್ಟ್ರೀಯಸರಾಸರಿ ಗಿಂತ ಕಡಿಮೆಯಿದೆ. ಶಿಕ್ಷಕರಿಗೆ DIKSHA ಬಗ್ಗೆ ಮಾಹಿತಿ ಇದ್ದರೂ ಪೋರ್ಟಲ್‌ನಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಕೆ ಹಾಗೂ ಅವುಗಳನ್ನು ತರಗತಿ ಯಲ್ಲಿ ಅಳವಡಿಸುವ ಕುರಿತು ಹೆಚ್ಚಿನ ತರಬೇತಿ ಅಗತ್ಯವಿದೆ ಎಂದು 2025-26ರ ಸಂಶೋಧನಾ ವರದಿಯಲ್ಲೂ ಉಲ್ಲೇಖಿಸಲಾಗಿದೆ.

DIKSHA ಮೂಲಕ ಏನೆಲ್ಲಾ ಪ್ರಯೋಜನ

DIKSHA ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಡಿಜಿಟಲ್ ಶಿಕ್ಷಣ ಉಪಕ್ರಮವಾಗಿದ್ದು‌ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಇ-ಕಲಿಕಾ ಸಂಪನ್ಮೂಲಗಳನ್ನು ಒದಗಿಸುತ್ತದೆ. ಶಿಕ್ಷಕರು ತಮ್ಮ ಅನುಕೂಲಕ್ಕೆ ತಕ್ಕ ಸಮಯದಲ್ಲಿ ಕಲಿಕಾ ಸಂಪನ್ಮೂಲ ಗಳನ್ನು ಬಳಸಿಕೊಳ್ಳಲು ಹಾಗೂ ತರಗತಿ ಬೋಧನೆ ಯನ್ನು ಪರಿಣಾಮಕಾರಿಯಾಗಿಸಲು ಇದು ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳೂ ತರಗತಿ, ವಿಷಯ ಮತ್ತು ಮಾಧ್ಯಮಕ್ಕೆ ಅನುಗುಣವಾಗಿ ಡಿಜಿಟಲ್ ಪಠ್ಯಪುಸ್ತಕಗಳು, ವಿವರ ಣಾತ್ಮಕ ಸಂಪನ್ಮೂಲಗಳು, ಅಭ್ಯಾಸ ಸಂಪನ್ಮೂಲಗಳು ಸೇರಿದಂತೆ ವಿವಿಧ ಇ-ಸಂಪನ್ಮೂಲಗಳನ್ನು ಬಳಸಿ ಕೊಂಡು ಸ್ವಯಂ ಕಲಿಕೆಗೆ ಮುಂದಾಗಬಹುದು.

ಶಿಕ್ಷಕರು DIKSHAನಲ್ಲಿ ನೋಂದಣಿ ಮಾಡಿಕೊಳ್ಳಬೇಕು

ಸುತ್ತೋಲೆಯ ಪ್ರಮುಖ ಸೂಚನೆಯಂತೆ,UDISE+ ನಲ್ಲಿ ನೋಂದಣಿಯಾಗಿರುವ ಪ್ರತಿಯೊಬ್ಬ ಶಿಕ್ಷಕರೂ DIKSHA ಪೋರ್ಟಲ್‌ನಲ್ಲಿ ನೋಂದಣಿಯಾಗಿರು ವುದನ್ನು ಖಚಿತಪಡಿಸಿಕೊಳ್ಳಬೇಕು ಈ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಜಿಲ್ಲೆ, ತಾಲೂಕು ಹಾಗೂ ಶಾಲಾ ಹಂತದಲ್ಲಿ ನೋಡೆಲ್ ಅಧಿಕಾರಿಗಳನ್ನು ನೇಮಿಸು ವಂತೆ ಸೂಚಿಸಲಾಗಿದೆ.

ಶಾಲಾ ಹಂತದಲ್ಲಿ ತಾಂತ್ರಿಕ ಜ್ಞಾನ ಹೊಂದಿರುವ ಒಬ್ಬ ಶಿಕ್ಷಕರನ್ನು ನೋಡೆಲ್ ಶಿಕ್ಷಕರಾಗಿ ನೇಮಿಸಿ, ಶಾಲೆಯ ಎಲ್ಲಾ ಶಿಕ್ಷಕರ DIKSHA ನೋಂದಣಿ ಖಚಿತಪಡಿಸ ಬೇಕು.

ಶಿಕ್ಷಕರ DIKSHA ಬಳಕೆಗೆ ಲಾಗ್‌ಬುಕ್ ಕಡ್ಡಾಯ

ಶಿಕ್ಷಕರು DIKSHA ಪೋರ್ಟಲ್‌ನಲ್ಲಿ ವೀಕ್ಷಿಸುವ ಹಾಗೂ ಬಳಸುವ ಸಂಪನ್ಮೂಲಗಳ ಕುರಿತು ಶಾಲೆಯಲ್ಲಿ ಲಾಗ್‌ಬುಕ್ ನಿರ್ವಹಿಸಬೇಕು. ಲಾಗ್‌ ಬುಕ್‌ನಲ್ಲಿ ಶಿಕ್ಷಕರ ಹೆಸರು, ವಿಷಯ, ವೀಕ್ಷಿಸಿದ ಸಂಪನ್ಮೂಲದ ವಿಧ, ಶಿಕ್ಷಕರ ಸಹಿ, ಮುಖ್ಯಶಿಕ್ಷಕರ ಸಹಿ ಹಾಗೂ ಶೆರಾ ದಾಖಲಿಸಬೇಕು.

ಪಠ್ಯಪುಸ್ತಕದ QR ಕೋಡ್ ಬಳಕೆಗೆ ಸೂಚನೆ

ಪಠ್ಯಪುಸ್ತಕಗಳಲ್ಲಿ ನೀಡಲಾಗಿರುವ QR ಕೋಡ್‌ ಗಳನ್ನು ಸ್ಕ್ಯಾನ್ ಮಾಡಿ ಲಭ್ಯವಿರುವ ಇ-ಸಂಪನ್ಮೂಲಗಳನ್ನು ಬಳಸುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು DSERT ಸೂಚಿಸಿದೆ.

ತರಗತಿ, ವಿಷಯ ಮತ್ತು ಮಾಧ್ಯಮಕ್ಕೆ ಅನುಗುಣವಾಗಿ DIKSHAನಲ್ಲಿ ಲಭ್ಯವಿರುವ ಡಿಜಿಟಲ್ ಪಠ್ಯಪುಸ್ತಕ, ವಿವರಣಾ ಸಂಪನ್ಮೂಲ, ಅಭ್ಯಾಸ ಸಂಪನ್ಮೂಲ ಹಾಗೂ ಇತರೆ ಕಲಿಕಾ ಸಂಪನ್ಮೂಲಗಳನ್ನು ವಿದ್ಯಾರ್ಥಿ ಗಳಿಗೆ ಪರಿಚಯಿಸಬೇಕು.

ASK DIKSHA AI ಬಳಕೆಗೆ ಮಾರ್ಗದರ್ಶನ

ASK DIKSHA AI ಬಳಸುವ ಕುರಿತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪರಿಕಲ್ಪ ನೆಗಳನ್ನು ಅರ್ಥಮಾಡಿಕೊಳ್ಳಲು, ಪ್ರಶ್ನೆಗಳಿಗೆ ಉತ್ತರ ಪಡೆಯಲು ಹಾಗೂ ಸಂಬಂಧಿತ ಪಾಠಗಳನ್ನು ಪ್ರವೇಶಿ ಸಲು ASK DIKSHA AI ಬಳಸುವಂತೆ ಪ್ರೋತ್ಸಾಹಿಸಬೇಕು.

ಜಿಲ್ಲೆ, ತಾಲೂಕು ಹಂತದಲ್ಲಿ ನೋಡೆಲ್ ಅಧಿಕಾರಿ ಗಳ ನೇಮಕ

ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ DIKSHA ಬಳಕೆಯ ಮೇಲ್ವಿಚಾರಣೆ ನಡೆಸಲು ನೋಡೆಲ್ ಅಧಿಕಾರಿಗಳನ್ನು ನೇಮಿಸಬೇಕು. ಶಾಲೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ಎಲ್ಲಾ ಶಿಕ್ಷಕರು DIKSHA ನಲ್ಲಿ ನೋಂದಣಿಯಾಗಿರುವುದನ್ನು ಹಾಗೂ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಇ-ಸಂಪನ್ಮೂಲ ಗಳನ್ನು ಬಳಸುತ್ತಿರುವುದನ್ನು ಪರಿಶೀಲಿಸಬೇಕು

ಅಲ್ಲದೆ ಶಾಲೆಗಳಲ್ಲಿ DIKSHA ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದಂತೆ ಲಾಗ್‌ಬುಕ್ ನಿರ್ವಹಣೆ ನಡೆಯುತ್ತಿದೆಯೇ ಎಂಬುದನ್ನೂ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಬೇಕು.

ಪ್ರತಿ ತಿಂಗಳು ವರದಿ ಸಲ್ಲಿಕೆ

UDISE+ ಮತ್ತು DIKSHA ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ ಶಿಕ್ಷಕರ ಮಾಹಿತಿ ಹಾಗೂ DIKSHA ಬಳಸುತ್ತಿರುವ ಶಿಕ್ಷಕರ ಮಾಹಿತಿಯನ್ನು ಪ್ರತಿ ತಿಂಗಳು ಸಂಗ್ರಹಿಸಿ ಸಲ್ಲಿಸಬೇಕು.

ಅನುಬಂಧ-1ರಲ್ಲಿ UDISE+ ಮತ್ತು DIKSHAನಲ್ಲಿ ನೋಂದಣಿಯಾಗಿರುವ ಶಿಕ್ಷಕರ ವಿವರಗಳನ್ನು ಹಾಗೂ ಅನುಬಂಧ-2ರಲ್ಲಿ DIKSHA ಪೋರ್ಟಲ್ ಬಳಸುತ್ತಿರುವ ಶಿಕ್ಷಕರ ವಿವರಗಳನ್ನು ದಾಖಲಿಸ ಬೇಕು.

ಪ್ರತಿ ತಿಂಗಳ 30ನೇ ತಾರೀಖಿನಂದು ಆಯಾ ಜಿಲ್ಲೆಯ ಕ್ರೋಢೀಕೃತ ಮಾಹಿತಿಯನ್ನು ಜಿಲ್ಲಾ DIKSHA ನೋಡೆಲ್ ಅಧಿಕಾರಿಗಳು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಶಿಕ್ಷಕರು ವಿದ್ಯಾರ್ಥಿಗಳನ್ನು DIKSHA ಬಳಕೆಗೆ ಪ್ರೋತ್ಸಾಹಿಸಬೇಕು

ಟಿವಿ, ಲ್ಯಾಪ್‌ಟಾಪ್ ಸೇರಿದಂತೆ ಡಿಜಿಟಲ್ ಸೌಲಭ್ಯ ಗಳು ಲಭ್ಯವಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ DIKSHA ಬಳಕೆ ಕುರಿತು ತಿಳಿಸಬೇಕು. ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ತರಗತಿ ಮತ್ತು ವಿಷಯಕ್ಕೆ ಸಂಬಂಧಿಸಿದ ಪಾಠಗಳಲ್ಲಿನ ನಿರ್ದಿಷ್ಟ ಅಂಶಗಳಿಗೆ ಸಂಬಂಧಿಸಿದ ಸಂಪನ್ಮೂಲಗಳನ್ನು DIKSHAನಲ್ಲಿ ಹುಡುಕುವಂತೆ ಪ್ರೋತ್ಸಾಹಿಸಬೇಕು.

ಇದರ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಯಂ ಕಲಿಕೆ, ಸ್ವಯಂ ವೇಗದ ಕಲಿಕೆ ಹಾಗೂ ಕಲಿಕಾ ಆಧಾರಿತ ಅನ್ವೇಷಣಾ ಮನೋಭಾವ ಬೆಳೆಸುವಂತೆ ಇಲಾಖೆ ಸೂಚಿಸಿದೆ.

YouTube Live ಮೂಲಕ ತರಬೇತಿ

ರಾಜ್ಯ ಹಂತದಲ್ಲಿ YouTube Live ಕಾರ್ಯಕ್ರಮ ಆಯೋಜಿಸಿ DIKSHA ಬಳಕೆಯ ಕುರಿತು ಅಗತ್ಯ ಮಾಹಿತಿಯನ್ನು ನೀಡಲಾಗುವುದು. ಈ ನೇರಪ್ರಸಾರ ಕಾರ್ಯಕ್ರಮದ ದಿನಾಂಕವನ್ನು ಪ್ರತ್ಯೇಕ ವಾಗಿ ತಿಳಿಸಲಾಗುವುದು ಎಂದು DSERT ತಿಳಿಸಿದೆ.

ಒಟ್ಟಿನಲ್ಲಿ, ರಾಜ್ಯದ ಎಲ್ಲಾ ಶಾಲೆಗಳಲ್ಲಿ DIKSHA ಪೋರ್ಟಲ್ ಬಳಕೆಯನ್ನು ಹೆಚ್ಚಿಸುವುದು UDISE+ನಲ್ಲಿ ನೋಂದಣಿಯಾಗಿರುವ ಎಲ್ಲಾ ಶಿಕ್ಷಕರ DIKSHA ನೋಂದಣಿ ಖಚಿತಪಡಿಸು ವುದು ಹಾಗೂ ಇ-ಕಲಿಕಾ ಸಂಪನ್ಮೂಲಗಳನ್ನು ತರಗತಿ ಬೋಧನೆಯಲ್ಲಿ ಪರಿಣಾಮಕಾರಿಯಾಗಿ ಬಳಸುವುದು ಈ ಸುತ್ತೋಲೆಯ ಪ್ರಮುಖ ಉದ್ದೇಶ ವಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ DDPI ವರ್ಗಾವಣೆ.....ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ.....ಬೆಂಗಳೂರಿನಲ್ಲೂ ಬಿಗ್ ಮಿಶ್ರಾ ಹವಾ..... ಜಯನಗರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಬಿಗ್ ಮಿಶ್ರಾ.....ಕೇಂದ್ರ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ......ಅನುಮೋದನೆ ನೀಡಿದ ಸಚಿವ ಸಂಪುಟಶಿಕ್ಷಕ‌ನ ಕಿರುಕುಳ ಪತ್ನಿ ಆತ್ಮಹತ್ಯೆ..... ಕಳೆದ ಮೂರು ವರ್ಷಗಳಿಂದ ಮದುವೆಯಾಗಿದ್ದ ದಂಪತಿಗಳು.....3 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಅರ್ನಬ್ ಅಬ್ಬರಕ್ಕೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ.....ಶಿಕ್ಷಕರ ಕ್ಷೇತ್ರದಲ್ಲಿ ರಂಗನಾಥ್‌ ಗೆಲುವು.....ಪುಟ್ಟಣ್ಣ ಗೆ ಸೋಲಿನ‌ ರುಚಿ ತೋರಿಸಿದ ಮತದಾರರು.....ಸಂಕಷ್ಟದಲ್ಲಿ ಸರ್ಕಾರಿ ಅಧಿಕಾರಿ.....ವಿಡಿಯೋ ಹಾಕಿ ಎಡವಟ್ಟು ಮಾಡಿಕೊಂಡ ಅಧಿಕಾರಿ.....ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ..... ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ ಶಿಕ್ಷಕ ಮುಹಮ್ಮದ್ ರಫಿ ಕಾರ್ಯಕ್ಕೆ ಮೆಚ್ಚುಗೆ.....ಸರ್ಕಾರಿ ನೌಕರ ಆತ್ಮಹತ್ಯೆ....ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೌಕರ.....ಮಾಜಿ ಶಿಕ್ಷಣ ಸಚಿವ ಬಂಧನ..... ಶಾಲೆಗಳ ಅನುಮತಿ ನೀಡುವ 100 ಕೋಟಿ ವಂಚನೆ ಕೇಸ್​ನಲ್ಲಿ ಲಾಕ್.....