LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕ ಶ್ಯಾಮ ಸುಂದರ್ ಮೇಲೆ ದೂರು ದಾಖಲು - ಬುದ್ದಿ ಹೇಳಿದ್ದೆ ತಪ್ಪಾಯಿತಾ.....

ವಿಜಯನಗರ -

ಹೌದು ನಾಗರಾಜ ಎಂಬ 14 ವರ್ಷದ ಬಾಲಕನನ್ನು ಶಿಕ್ಷಕ ರೊಬ್ಬರು ಥಳಿಸಿದ್ದಾರೆಂದು ಆರೋಪಿಸಿ ಅವರ ಮೇಲೆ ದೂರು ದಾಖಲಿಸಿದ ಘಟನೆ ವಿಜಯನಗರ ದಲ್ಲಿ ನಡೆದಿದೆ ಹಿರೇಕುಂಬಳಗುಂಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ.ವಿದ್ಯಾರ್ಥಿಯನ್ನ ಶಿಕ್ಷಕ ಶಾಮಸುಂದರ್ ಥಳಿಸಿದ್ದಾರೆ ನಂತರ ಮಗ ಕಾಣೆಯಾಗಿದ್ದಾನೆಂದು ತಂದೆ ದೊಡ್ಡಯ್ಯ ದೂರು ದಾಖಲಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಹೊಡೆದಿದ್ದರಿಂದ ತನ್ನ ಮಗ ಕಾಣೆಯಾಗಿದ್ದನೆಂದು ತಂದೆ ನೀಡಿದ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ‌ ದಾಸೋಬನ ಹಳ್ಳಿ ಗೊಲ್ಲರಹಟ್ಟಿ ನಾಗರಾಜ ಎಂಬ 14 ವರ್ಷದ ಬಾಲಕ ಹಿರೇಕುಂಬಳಗುಂಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ.ಬಾಲಕ ನಾಗರಾಜ ದಾಸೋಬನಹಳ್ಳಿ ಗೊಲ್ಲರಹಟ್ಟಿಯಿಂದ ಶಾಲೆಗೆ ತೆರಳಿದ್ದ.ನಂತರ ಮಧ್ಯಾಹ್ನ ದೊಡ್ಡಯ್ಯನಿಗೆ ಬಾಲಕನ ತಾಯಿ ಫೋನ್ ಮಾಡಿ ಮಗನು ಶಾಲೆಯಲ್ಲಿ ಶಿಕ್ಷಕರೊಬ್ಬರು ಹೊಡೆದಿದ್ದರಿಂದ ಕಾಣೆಯಾಗಿ ದ್ದನೆಂದು ಹೇಳಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಕುಟುಂಬ ಸ್ಥರು ಊರೆಲ್ಲ ಹುಡುಕಾಡಿದ್ದಾರೆ.ಆದರೆ ಬಾಲಕ ಎಲ್ಲೂ ಸಿಕ್ಕಿಲ್ಲ.ಹೀಗಾಗಿ ಮಗನು ಕಾಣೆಯಾಗಲು ಶಿಕ್ಷಕನೇ ಕಾರಣ ಎಂದು ಕಾಣೆಯಾದ ಮಗನ ತಂದೆ ದೊಡ್ಡಯ್ಯ ದೂರು ನೀಡಿದ್ದಾರೆ. ಹೊಸಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....