LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಶಾಸಕರ ಕಚೇರಿಗೆ ಕನ್ನಾ – ದಾಖಲೆಗಳನ್ನು ಕಳ್ಳತನ ಮಾಡಿದ ಖದೀಮರು

ಬೆಳಗಾವಿ -
ಶಾಸಕರೊಬ್ಬರ ಕಚೇರಿಗೆ ಕಳ್ಳರು ಕನ್ನ ಹಾಕಿದ ಘಟನೆ ರಾಮದುರ್ಗದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಮಹಾದೇವಪ್ಪ ಯಾದವಾಡ ಕಚೇರಿಗೆ ಖದೀಮರು ಕನ್ನಾ ಹಾಕಿದ್ದಾರೆ.

ಶಾಸಕ ಮಹಾದೇವಪ್ಪ ಯಾದವಾಡ

ನಿನ್ನೇ ತಡರಾತ್ರಿ ಪಡಕೋಟಿ ಗಲ್ಲಿಯಲ್ಲಿರುವ ಮನೆಯ ಮುಂದೆ ಇರುವ ಶಾಸಕರ ಕಚೇರಿಗೆ ಖದೀಮರು ಕೈಚಳಕ ತೋರಿದ್ದಾರೆ. ಕಚೇರಿಯ ಬೀಗ‌ ಮುರಿದು ಕಳ್ಳತನ ಮಾಡಿದ್ದಾರೆ ದುಷ್ಕರ್ಮಿಗಳು.

ಮುಸುಕುಧಾರಿಗಳಿಂದ ಕಳ್ಳತನ ನಡೆದಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕಚೇರಿ ಬೀಗವನ್ನು ಮುರಿದ ಖದೀಮರು ಕಚೇರಿಯಲ್ಲಿನ ಕೆಲ ದಾಖಲೆಗಳನ್ನು ಹಾಗೇ ಚೇಕ್ ಗಳನ್ನು ಕೈಗೆ ಸಿಕ್ಕ ಇತರೆ ಕೆಲ ವಸ್ತುಗಳನ್ನು ಕಳ್ಳರು ತಗೆದುಕೊಂಡು ಹೋಗಿದ್ದಾರೆ.

ಇನ್ನೂ ವಿಷಯ ತಿಳಿದ ರಾಮದುರ್ಗ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು. ಪೊಲೀಸ್ ಶ್ವಾನ ದಳದೊಂದಿಗೆ ಸಿಬ್ಬಂದಿಗಳು ಕೂಡಾ ಸ್ಥಳಕ್ಕೇ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

ಇನ್ನೂ ಕಳ್ಳರು ಬಂದು ಕಳ್ಳತನ ಮಾಡಿಕೊಂಡು ಮರಳಿ ಹೋಗುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರಯಾಗಿವೆ. ಸಧ್ಯ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ರಾಮದುರ್ಗ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....