LIVE TV LocalCrimeNationalInternationalPoliticsEducationTechnologyEntertainmentSportsFeature
State News

KSPSTA ತಡೆಯಾಜ್ಞೆ ತೆರವು — ಅವಿರೋಧ ಆಯ್ಕೆಗೆ ನ್ಯಾಯದ ಬಲ.....

ಕೊಪ್ಪಳ -

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (KSPSTA) ಕೊಪ್ಪಳ ತಾಲೂಕು ಘಟಕಕ್ಕೆ ನಡೆದ ಅವಿರೋಧ ಆಯ್ಕೆಯನ್ನು ಪ್ರಶ್ನಿಸಿ ನೀಡಲಾಗಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವು ಮಾಡಿದೆ ಈ ಹಿಂದೆ ತಡೆಯಾಜ್ಞೆ ಪಡೆಯಲಾಗಿತ್ತು ಹೀಗಾಗಿ ಸಧ್ಯ ತಡೆಯಾಜ್ಞೆ ತೆರವು ಆಗಿದ್ದು ಅವಿರೋಧ ಆಯ್ಕೆಗೆ ನ್ಯಾಯದ ಬಲ ಬಂದಂತಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (KSPSTA) ಕೊಪ್ಪಳ ತಾಲೂಕು ಘಟಕದ ಅವಿರೋಧ ಆಯ್ಕೆಯನ್ನು ಪ್ರಶ್ನಿಸಿ ತಡೆಯಾಜ್ಞೆ (Stay) ಪಡೆಯ ಲಾಗಿತ್ತು ಈ ಒಂದು ತಡೆಯಾಜ್ಞೆಯನ್ನು ಆಧಾರವಾಗಿ ಟ್ಟುಕೊಂಡು ವಿವಾದ ಮುಂದುವರದಿತ್ತು ಅಲ್ಲದೆ ಸ್ಟೇ ಸಿಕ್ಕಿದೆ ಗೆಲುವಾಗಿದೆ ಎಂದು ಕೆಲವರು ಅಂದು ಕೊಂಡ ಬೆನ್ನಲ್ಲೇ ನ್ಯಾಯಾಲಯ ಮತ್ತೊಂದು ಆದೇಶ ಮಾಡಿದೆ. 

ಕೊಪ್ಪಳ ತಾಲೂಕು ಘಟಕದ ಅವಿರೋಧ ಆಯ್ಕೆ ಯನ್ನು ಪ್ರಶ್ನಿಸಿ ತರಲಾಗಿದ್ದ ತಡೆಯಾಜ್ಞೆ ತೆರವು ಗೊಂಡಿದ್ದು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಪರವಾಗಿ ನಿಂತಿರುವ ಎಲ್ಲ ಶಿಕ್ಷಕರಿಗೆ ಆತ್ಮವಿಶ್ವಾಸ ನೀಡುವ ಬೆಳವಣಿಗೆಯಾಗಿದೆ ಎಂದು ಬಣ್ಣಿಸಲಾಗಿದೆ

ಅವಿರೋಧ ಆಯ್ಕೆ ಎಂದರೆ ಪ್ರಜಾಪ್ರಭುತ್ವದ ಸೋಲಲ್ಲ ಸಂಘದ ಸದಸ್ಯರು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿ ಸ್ಪರ್ಧೆಯ ಅಗತ್ಯವಿಲ್ಲವೆಂದು ಒಮ್ಮತ ದಿಂದ ನಿರ್ಧರಿಸಿ, ನಾಯಕತ್ವಕ್ಕೆ ಜವಾಬ್ದಾರಿ ನೀಡು ವುದು ಪ್ರಜಾಪ್ರಭುತ್ವದ ಅತ್ಯಂತ ಗೌರವಯುತ ಅಭಿವ್ಯಕ್ತಿಗಳಲ್ಲೊಂದು ಎಂದು ನೌಕರರು ಅಂದು ಕೊಂಡಿದ್ದಾರೆ

ಮತಗಳ ಮೂಲಕ ವ್ಯಕ್ತವಾಗುವ ಜನಾದೇಶ ಒಂದು ರೀತಿಯ ವಿಶ್ವಾಸವಾದರೆ ಅವಿರೋಧ ಆಯ್ಕೆ ಎಂಬುದು ಒಮ್ಮತದ ಮೂಲಕ ವ್ಯಕ್ತವಾಗುವ ವಿಶ್ವಾಸ ಹೀಗಾಗಿ ಮಧ್ಯಂತರ ತಡೆಯಾಜ್ಞೆಯನ್ನು ಹಿಡಿದು ಕೊಂಡು ಘೋಷಿಸಲಾದ ಗೆಲುವಿನ ಸಂಭ್ರಮ ಕ್ಕೆ ಇಂದು ತಡೆಯಾಜ್ಞೆ ತೆರವಾಗಿರುವ ವಾಸ್ತವವೇ ಸೂಕ್ತ ಉತ್ತರ ನೀಡಿದೆ ಎಂದು ಬಣ್ಣಿಸಿದ್ದಾರೆ

ನಾವು ಯಾರನ್ನೂ ವೈಯಕ್ತಿಕವಾಗಿ ಟೀಕಿಸುವುದಿಲ್ಲ.
ಯಾರನ್ನೂ ಅವಮಾನಿಸುವುದಿಲ್ಲ ನಮ್ಮ ಉತ್ತರ ಕಾನೂನುಬದ್ಧ ಪ್ರಕ್ರಿಯೆ ನಮ್ಮ ಬಲ ಶಿಕ್ಷಕರ ವಿಶ್ವಾಸ. ನಮ್ಮ ಹೆಮ್ಮೆ ಅವಿರೋಧ ಆಯ್ಕೆ.ನಮ್ಮ ಗುರಿ ಬಲಿಷ್ಠ ಮತ್ತು ಒಗ್ಗಟ್ಟಿನ ಶಿಕ್ಷಕರ ಸಂಘ ಎಂದು ಸಂಘವು ಬಣ್ಣಿಸಿದೆ.

ಇನ್ನೂ ಕೊಪ್ಪಳ ತಾಲೂಕು ಘಟಕದ ಅವಿರೋಧ ಆಯ್ಕೆಯನ್ನು ಪ್ರಶ್ನಿಸಿ ತರಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಕಾರ್ಯದಲ್ಲಿ ವಿಶೇಷ ಕಾಳಜಿ ವಹಿಸಿ ಮಾರ್ಗದರ್ಶನವನ್ನು KSPSTA ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಚಂದ್ರಶೇಖರ ನುಗ್ಗಲಿ ಪ್ರಧಾನ ಕಾರ್ಯದರ್ಶಿಗಳಾದ ಚೇತನ್ ಹೆಚ್.ಎಸ್.ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಂಘದ ಸದಸ್ಯರು ಹೇಳಿದ್ದಾರೆ.

ಅದೇ ರೀತಿ, ಸಂಘದ ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ಸಾಗಲು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ, ತಡೆಯಾಜ್ಞೆ ತೆರವುಗೊಳಿಸುವ ಪ್ರಕ್ರಿಯೆ ಯಲ್ಲಿ ವಿಶೇಷ ಸಹಕಾರ ನೀಡಿದ ರಾಜ್ಯ ಚುನಾವಣಾ ಧಿಕಾರಿಗಳಾದ ಮಹಿಬೂಬ್ ಪಾಷಾ ಮೂಲಿಮನಿ ಅವರಿಗೂ ರವಿ ಬೆಟಗೇರಿ ವಕೀಲರಿಗೂ ಹಾಗೂ ಸಹಕರಿಸಿದ ಸರ್ವರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಸದಸ್ಯರು ಹೇಳಿದ್ದಾರೆ

ಕೊಪ್ಪಳ ತಾಲೂಕು ಘಟಕದ ಅವಿರೋಧ ಆಯ್ಕೆ ಕೇವಲ ಒಂದು ಚುನಾವಣಾ ಪ್ರಕ್ರಿಯೆಯ ಫಲವಲ್ಲ; ಅದು ಶಿಕ್ಷಕರ ಒಗ್ಗಟ್ಟು, ವಿಶ್ವಾಸ ಮತ್ತು ಸಂಘದ ಮೇಲಿನ ನಂಬಿಕೆಯ ಪ್ರತಿಬಿಂಬ.ನಮ್ಮ ಸಂಘವನ್ನು ವಿಭಜಿಸುವ ಶಕ್ತಿಗಳಿಗಿಂತ ನಮ್ಮನ್ನು ಒಗ್ಗೂಡಿಸುವ ಶಕ್ತಿ ದೊಡ್ಡದು KSPSTA ಬಲವಾಗಿದ್ದರೆ ಶಿಕ್ಷಕರ ಧ್ವನಿ ಬಲವಾಗಿರುತ್ತದೆ.KSPSTA ಒಗ್ಗಟ್ಟಾಗಿದ್ದರೆ ಶಿಕ್ಷಕರ ಹಕ್ಕುಗಳ ಹೋರಾಟ ಬಲವಾಗಿರುತ್ತದೆ.

KSPSTA ಗೌರವದಿಂದ ಮುನ್ನಡೆದರೆ ಪ್ರತಿಯೊಬ್ಬ ಶಿಕ್ಷಕರಿಗೂ ಹೆಮ್ಮೆ.ಎಂದಿದ್ದಾರೆ

ಸುದ್ದಿ ಸಂತೆ ನ್ಯೂಸ್ ಕೊಪ್ಪಳ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....