LIVE TV LocalCrimeNationalInternationalPoliticsEducationTechnologyEntertainmentSportsFeature
State News

ಕಲಿಕಾ ಚೇತರಿಕೆ ಹಾಳೆಗಳಿಗೆ ಅನುದಾನದ ಕೊರತೆ ಶಿಕ್ಷಕರೆ ಮಾಡಿಸುತ್ತಿದ್ದಾರೆ ಝರಾಕ್ಸ್.....

ಬೆಂಗಳೂರು -

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಆರಂಭಿಸಿ ರುವ ಕಲಿಕಾ ಚೇತರಿಕೆಯ ಹಾಳೆಗಳಿಗೂ ಸರ್ಕಾರ ಅನು ದಾನದ ಕೊರತೆಯಾಗಿದೆ.ಶಿಕ್ಷಕರೇ ಕಲಿಕಾ ಹಾಳೆಗಳ ಝೆರಾಕ್ಸ್‌ ಪ್ರತಿ ಮಾಡಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಂತೆ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಸೂಚಿ ಸಿದೆ.ವಿದ್ಯಾ ಪ್ರವೇಶ- ಕಲಿಕಾ ಚೇತರಿಕೆ'ಯ ಕಲಿಕಾ ಹಾಳೆ ಗಳನ್ನು ಝೆರಾಕ್ಸ್‌ ಮಾಡಿಸಲು ದಾನಿಗಳ ಬಳಿ ಹಣ ಸಂಗ್ರಹಿಸಿ ಎಂದು ಸಮಗ್ರ ಶಿಕ್ಷಣ ಯೋಜನೆ ರಾಜ್ಯ ನಿರ್ದೇ ಶಕರು ಜೂ. 27ರಂದು ಸುತ್ತೋಲೆ ಹೊರಡಿಸಿದ್ದಾರೆ.

ಕೋವಿಡ್‌ ಕಾರಣಕ್ಕೆ ವಿದ್ಯಾರ್ಥಿಗಳ ಕಲಿಕಾ ನಷ್ಟ ಸರಿ ದೂಗಿಸಲು1 ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿ ಗಳ ವಿದ್ಯಾಪ್ರವೇಶ-ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭಿಸಲಾಗಿದೆ.ಈ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಕಾರ್ಯಕ್ರಮದ ಉದ್ದೇಶ.1ರಿಂದ 3ನೇ ತರಗತಿಯವರೆಗೆ ಮೊದಲ ಮೂರು ತಿಂಗಳಿಗೆ ವಿದ್ಯಾಪ್ರವೇಶ ಅನುಷ್ಠಾನಗೊಳಿಸಲಾಗಿದೆ.

ಈ ಕಾರ್ಯಕ್ರಮದ ಭಾಗವಾಗಿ ಶಿಕ್ಷಣ ಇಲಾಖೆಯ ವೆಬ್‌ ಸೈಟ್‌ನಲ್ಲಿ ಶಿಕ್ಷಕರ ಕೈಪಿಡಿ ಹಾಗೂ ಮಕ್ಕಳ ಕಲಿಕಾ ಹಾಳೆ ಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗಿದೆ. ದಾನಿಗಳ ನೆರವಿನಲ್ಲಿ ಈ ಹಾಳೆಗಳನ್ನು ಝೆರಾಕ್ಸ್‌ ಮಾಡಿಸಿ ಮಕ್ಕಳಿಂದ ಕಲಿಕಾ ಚಟುವಟಿಕೆಗಳನ್ನು ಮಾಡಿಸಬೇಕು ಎಂದು ಸೂಚಿಸಿದೆ.

ಶಾಲಾನುದಾನ ಅಥವಾ ಎಸ್‌ಡಿ ಎಂಸಿ ಅನುದಾನ ಲಭ್ಯ ಇದ್ದರೆ ಅಥವಾ ಯಾವುದೇ ಸರ್ಕಾರದ ಅನುದಾನವನ್ನು ಸಹ ಝೆರಾಕ್ಸ್‌ಗೆ ಬಳಸಬಹುದಾಗಿದೆ.ಒಂದು ತರಗತಿ ಅಥವಾ ವಿಭಾಗಕ್ಕೆ ಒಂದು ವಿಷಯಕ್ಕೆ ಒಂದು ಪ್ರತಿ ಮಾತ್ರ ಝೆರಾಕ್ಸ್‌ ಪ್ರತಿ ಸಿದ್ಧಪಡಿಸಿ ಎಲ್ಲ ಮಕ್ಕಳಿಂದ ಕಲಿಕಾ ಚಟು ವಟಿಕೆ ಮಾಡಿಸಬೇಕುನ್ನಲಾಗಿದೆ.

ಕಲಿಕಾ ಹಾಳೆಯ ಮುದ್ರಣ ಪ್ರತಿಗಳನ್ನು ನೀಡುವುದಾಗಿ ಇಲಾಖೆ ತಿಳಿಸಿದೆ.ಆದರೆ ಇನ್ನೂ ಕೈ ಸೇರಿಲ್ಲ.ಸದ್ಯ ಒಂದು ವಿಷಯದ ಝೆರಾಕ್ಸ್‌ಗೆ ದಾನಿಗಳನ್ನು ಹುಡುಕುತ್ತ ಹೋಗ ಬೇಕಾದ ಪರಿಸ್ಥಿತಿ ಇದೆ.ಬಹುತೇಕ ಕಡೆಗಳಲ್ಲಿ ಶಿಕ್ಷಕರೇ ಝೆರಾಕ್ಸ್‌ಗೆ ಖರ್ಚು ಮಾಡುತ್ತಿದ್ದಾರೆ.

ಒಂದು ತರಗತಿಗೆ ಒಂದು ಪ್ರತಿ ಝೆರಾಕ್ಸ್ ಮಾಡಿಸಿ ಕಲಿಸುವುದಾದರೂ ಹೇಗೆ.....ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ಝೆರಾಕ್ಸ್‌ ₹800 ಅನ್ನು ಶಿಕ್ಷಕರೇ ಭರಿಸಬೇಕಿದೆ.

ಮಕ್ಕಳು ತ್ವರಿತಗತಿಯಲ್ಲಿ ಮತ್ತು ಸುಲಭವಾಗಿ ಕಲಿಯಲು ಅನುಕೂಲವಾಗುವಂತೆ ರೂಪಿಸಿರುವ ವರ್ಕ್‌ಶೀಟ್‌ಗಳೇ ಕಲಿಕಾ ಚೇತರಿಕೆಯ ಹಾಳೆಗಳು ಎಂದು ಶಿಕ್ಷಕರು ವಿವರಿಸಿ ದ್ದಾರೆ.ಚಿತ್ರಗಳ ಸಮೇತ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದರಿಂದ ಕಲಿಕೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....