LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯಶಿಕ್ಷಕ ನಿಗೆ ಜೈಲಿನ ದಾರಿ ತೋರಿಸಿದ ಶಾಲಾ ಮಕ್ಕಳು.....

ಪಾಟ್ನಾ -

ಸರ್ಕಾರಿ ಶಾಲೆಯೊಂದರ 8ನೇ ತರಗತಿಯ ವಿದ್ಯಾರ್ಥಿ ನಿಯರು ಮುಖ್ಯ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಆರೋಪದ ಬಳಿಕ ಶಾಲೆ ಯಲ್ಲಿ ಪ್ರತಿಭಟನೆ ಹಾಗೂ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ.ಇಂತಹ ದೊಂದು ಘಟನೆ ಬಿಹಾರದ ನವಾಡಾ ಜಿಲ್ಲೆಯಲ್ಲಿ ಘಟನೆ ನವಾಡಾ ಸದರ್ ಬ್ಲಾಕ್‌ನ ಆನಂದಪುರದಲ್ಲಿರುವ ಅಪ್‌ ಗ್ರೇಡೆಡ್ ಮಿಡಲ್ ಸ್ಕೂಲ್‌ನಲ್ಲಿ ನಡೆದಿದೆ ಮುಖ್ಯಶಿಕ್ಷಕ ಮಹೇಶ್ ಪ್ರಸಾದ್ ಯಾದವ್ ವಿರುದ್ಧ ವಿದ್ಯಾರ್ಥಿ ನಿಯರು ಈ ಆರೋಪ ಮಾಡಿದ್ದಾರೆ.

ಮುಖ್ಯಶಿಕ್ಷಕ ವಿದ್ಯಾರ್ಥಿನಿಯರನ್ನು ಎತ್ತಿಕೊಳ್ಳುವುದು, ಕೆನ್ನೆ ಮುಟ್ಟುವುದು ಹಾಗೂ ಅವರು ಶೌಚಾಲಯಕ್ಕೆ ತೆರಳುವಾಗ ಹಿಂಬಾಲಿಸುವುದು ಸೇರಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಶೌಚಾಲಯದ ಬಳಿ ಇಣುಕಿ ನೋಡುತ್ತಿದ್ದ ವಿದ್ಯಾರ್ಥಿನಿಯರು, ಪೊಲೀಸರು ಹಾಗೂ ತಮ್ಮ ಕುಟುಂಬ ಸದಸ್ಯರ ಮುಂದೆ ವಿವರಿಸಿದ್ದಾರೆ. ಈ ಆರೋಪಗಳಿಂದ ಪೋಷಕರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ

ಅವರು ಶಾಲೆಯ ಬಳಿ ಜಮಾಯಿಸಿ ಮುಖ್ಯಶಿಕ್ಷಕನ ವಿರುದ್ಧ ಪ್ರತಿಭಟನೆ ನಡೆಸಿದರು ಸ್ಥಳಕ್ಕೆ ಧಾವಿಸಿದ ನಾಗರ್ ಪೊಲೀಸ್ ಠಾಣೆಯ ಪೊಲೀಸರು, ಪರಿಸ್ಥಿತಿ ಯನ್ನು ನಿಯಂತ್ರಣಕ್ಕೆ ತಂದರು.ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದ ಮೇಲೆ, ಯಾದವ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅನುಚಿತ ಉದ್ದೇಶ ದಿಂದ ಬಾಲಕಿಯರನ್ನು ಮುಟ್ಟಿದ ಆರೋಪದಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನೂ ಪ್ರಕರಣದಲ್ಲಿ ದಾಖಲಿಸ ಲಾಗಿದೆ.ಸೆಪ್ಟೆಂಬರ್ 18ರಂದು, ಲೈಂಗಿಕ ಕಿರುಕುಳದ ಆರೋಪದ ಕುರಿತು ಮಾಹಿತಿ ದೊರೆತ ಬಳಿಕ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಇತರ ಸಿಬ್ಬಂದಿಯನ್ನು ಒಳಗೊಂಡ ಪೊಲೀಸ್ ತಂಡ ಶಾಲೆಗೆ ಭೇಟಿ ನೀಡಿತು ಪೊಲೀಸ್ ತಂಡವು ಶಾಲಾ ಆವರಣವನ್ನು ಪರಿಶೀಲಿಸಿ, ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿತು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು.

ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳ ಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸ ಲಾಗಿದೆ. ದೂರಿನ ಆಧಾರದ ಮೇಲೆ ಶಾಲೆಯ ಮುಖ್ಯಶಿಕ್ಷಕ ಮಹೇಶ್ ಪ್ರಸಾದ್ ಯಾದವ್‌ನನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದರು. ಬಳಿಕ ವಿಚಾರಣೆ ವೇಳೆ ಅಧಿಕೃತವಾಗಿ ಬಂಧಿಸಲಾಯಿತು ಎಂದು ನವಾಡಾ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ

ವಿದ್ಯಾರ್ಥಿನಿಯರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಲೈಂಗಿಕ ಕಿರುಕುಳ ಮತ್ತು ಅನುಚಿತ ಸ್ಪರ್ಶ ಸೇರಿವೆ ಮತ್ತು ಪೋಕ್ಸೊ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯ ಲಾಯಿತು ನಂತರ ಅವರ ಹೇಳಿಕೆಗಳನ್ನು ದಾಖಲಿ ಸಲು ನ್ಯಾಯಾಲಯದ ಮುಂದೆ ಹಾಜರುಪಡಿಸಲಾ ಯಿತು.

ಸುದ್ದಿ ಸಂತೆ ನ್ಯೂಸ್ ಪಾಟ್ನಾ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ DDPI ವರ್ಗಾವಣೆ.....ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ.....ಬೆಂಗಳೂರಿನಲ್ಲೂ ಬಿಗ್ ಮಿಶ್ರಾ ಹವಾ..... ಜಯನಗರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಬಿಗ್ ಮಿಶ್ರಾ.....ಕೇಂದ್ರ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ......ಅನುಮೋದನೆ ನೀಡಿದ ಸಚಿವ ಸಂಪುಟಶಿಕ್ಷಕ‌ನ ಕಿರುಕುಳ ಪತ್ನಿ ಆತ್ಮಹತ್ಯೆ..... ಕಳೆದ ಮೂರು ವರ್ಷಗಳಿಂದ ಮದುವೆಯಾಗಿದ್ದ ದಂಪತಿಗಳು.....3 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಅರ್ನಬ್ ಅಬ್ಬರಕ್ಕೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ.....ಶಿಕ್ಷಕರ ಕ್ಷೇತ್ರದಲ್ಲಿ ರಂಗನಾಥ್‌ ಗೆಲುವು.....ಪುಟ್ಟಣ್ಣ ಗೆ ಸೋಲಿನ‌ ರುಚಿ ತೋರಿಸಿದ ಮತದಾರರು.....ಸಂಕಷ್ಟದಲ್ಲಿ ಸರ್ಕಾರಿ ಅಧಿಕಾರಿ.....ವಿಡಿಯೋ ಹಾಕಿ ಎಡವಟ್ಟು ಮಾಡಿಕೊಂಡ ಅಧಿಕಾರಿ.....ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ..... ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ ಶಿಕ್ಷಕ ಮುಹಮ್ಮದ್ ರಫಿ ಕಾರ್ಯಕ್ಕೆ ಮೆಚ್ಚುಗೆ.....ಸರ್ಕಾರಿ ನೌಕರ ಆತ್ಮಹತ್ಯೆ....ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೌಕರ.....ಮಾಜಿ ಶಿಕ್ಷಣ ಸಚಿವ ಬಂಧನ..... ಶಾಲೆಗಳ ಅನುಮತಿ ನೀಡುವ 100 ಕೋಟಿ ವಂಚನೆ ಕೇಸ್​ನಲ್ಲಿ ಲಾಕ್.....