LIVE TV LocalCrimeNationalInternationalPoliticsEducationTechnologyEntertainmentSportsFeature
International News

ಗೋವಾದಲ್ಲಿ ಸೋನಿಯಾ ,ರಾಹುಲ್ ಗಾಂಧಿ

ಪಣಜಿ -

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಗೋವಾಗೆ ಶಿಪ್ಟ್ ಆಗಿದ್ದಾರೆ. ಹೌದು ರಾಜಧಾನಿ ನವದೆಹಲಿಯಲ್ಲಿನ ವಿಪರೀತ ವಾಯುಮಾಲಿನ್ಯ ಸಮಸ್ಯೆಯಿಂದಾಗಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಗೋವಾಕ್ಕೆ ಶಿಫ್ಟ್‌ ಆಗಿದ್ದಾರೆ‌. ಒಂದು ವಾರದ ಹಿಂದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರು ಇಲ್ಲಿಗೆ ಬಂದಿದ್ದು ಸಧ್ಯ ಎಲ್ಲವನ್ನೂ ಮರೆತು ಆರೋಗ್ಯದತ್ತ ಗಮನ ಹರಿಸಿದ್ದಾರೆ.ತಾವಾಯಿತು ತಮ್ಮ ಆರೋಗ್ಯವಾಯಿತೆಂದುಕೊಂಡು ಗೋವಾದ ಲೀಲಾ ಪ್ಯಾಲೇಶ್ ಹೊಟೇಲ್ ವೊಂದರಲ್ಲಿ ಕಾಲ ಕಳೆಯುತ್ತಿದ್ದಾರೆ.ವಾಕಿಂಗ್ ಯೋಗ ಸೇರಿದಂತೆ ಸೈಕ್ಲಿಂಗ್ ಮಾಡ್ತಾ ಇದ್ದಾರೆ.ಗೋವಾದ ಹೊಟೇಲ್ ಲೀಲಾ ಪ್ಯಾಲೇಸ್ ನಲ್ಲಿ ತಂಗಿದ್ದು ಸೈಕ್ಲಿಂಗ್ ಮಾಡ್ತಾ ಇರುವ ದೃಶ್ಯಗಳು ಕಂಡು ಬಂದಿದ್ದು ಸುದ್ದಿ ಸಂತೆ ವೇಬ್ ನ್ಯೂಸ್ ಗೆ ಲಭ್ಯವಾಗಿವೆ.

ಈ ಹಿಂದೆ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದಾಗ ವೈಧ್ಯರು ವಾಯುಮಾಲಿನ್ಯ ಕಡಿಮೆ ಇರುವ ಪ್ರದೇಶದಲ್ಲಿ ಸಮಯ ಕಳೆಯುವಂತೆ ಸೂಚಿಸಿದ್ದರು.ಹೀಗಾಗಿ ಈ ಹಿಂದೆ ವೈದ್ಯರು ನೀಡಿದ್ದ ಸಲಹೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಪಣಜಿಗೆ ಆಗಮಿಸಿದ್ದಾರೆ.

ಆಗಸ್ಟ್ ತಿಂಗಳಿನಲ್ಲಿ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಹೆಚ್ಚಿನ ರೀತಿಯ ವೈದ್ಯಕೀಯ ನಿಗಾವಣೆಯಲ್ಲಿದ್ದರು. ಅವರಿಗೆ ನಿರಂತರವಾಗಿ ಕಾಡುತ್ತಿರುವ ಸೋಂಕಿನ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ವೈಧ್ಯರ ಸೂಚನೆಯಂತೆ ಗೋವಾಕ್ಕೆ ಬಂದಿದ್ದಾರೆ. ದೆಹಲಿಯಲ್ಲಿನ ಮಾಲಿನ್ಯದ ಕಾರಣ ಒಂದೆಡೆಯಾದರೆ ಮತ್ತೊಂದು ಕಡೆ ಆರೋಗ್ಯದ ದೃಷ್ಟಿಯಿಂದ ಗೋವಾಗೆ ಬಂದಿದ್ದಾರೆ.ಎಲ್ಲವನ್ನೂ ಮರೆತು ಸಧ್ಯ ತಾವಾಯಿತು ತಮ್ಮ ಆರೋಗ್ಯವಾಯಿತು ಎಂದುಕೊಂಡು ಯೋಗ ವಾಯು ವಿಹಾರ ಸೇರಿದಂತೆ ಸೈಕ್ಲಿಂಗ್ ಕೂಡಾ ಮಾಡ್ತಾ ಇದ್ದಾರೆ.ಇನ್ನೂ ಇವೆಲ್ಲದರ ನಡುವೆ ಹುಬ್ಬಳ್ಳಿಯ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ತಮ್ಮ ತಾಯಿಯವರೊಂದಿಗೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮದುವೆಗೆ ಆಮಂತ್ರಣ ನೀಡಿದರು.ಇದೇ ವೇಳೆ ಆರೋಗ್ಯ ವಿಚಾರಣೆ ಮಾಡಿ ಶುಭಾಶಯಗಳನ್ನು ಕೋರಿದರು.

ಸೋನಿಯಾ ಗಾಂಧಿ ಸೈಕ್ಲಿಂಗ್ ಮಾಡುತ್ತಿರುವ ದೃಶ್ಯಗಳು ಸುದ್ದಿ ಸಂತೆಗೆ ಲಭ್ಯವಾಗಿದೆ‌. ಇನ್ನೂ ದೆಹಲಿಯ ವಾಯುಮಾಲಿನ್ಯ ಸೋನಿಯಾಗೆ ಆಸ್ತಮಾ ಮತ್ತು ಎದೆ ಸಮಸ್ಯೆಗೆ ಕಾರಣವಾಗಿದ್ದು, ಅಲ್ಲಿಂದ ಕೆಲಕಾಲ ಬೇರೆಡೆಗೆ ತೆರಳುವಂತೆ ವೈದ್ಯರು ಸಲಹೆ ನೀಡಿದ್ದಾರೆ . ಸೋಲಿನಿಂದ ಕಂಗೆಟ್ಟಿದ ಕೆಲ ನಾಯಕರು, ಪಕ್ಷದ ಕಳಪೆ ಸಾಧನೆ ಬಗ್ಗೆ ಸಮಗ್ರ ಪರಾಮರ್ಶೆ ನಡೆಸುವಂತೆ ಒತ್ತಾಯ ಹೇರಿದ್ದರು. ಈ ನಡುವೆಯೇ ಸೋನಿಯಾ ಗಾಂಧಿ ಗೋವಾಕ್ಕೆ ಆಗಮಿಸಿದ್ದು ಎಲ್ಲವನ್ನೂ ಮರೆತು ಸೈಕ್ಲಿಂಗ್ ವಾಯು ವಿಹಾರ ಯೋಗ ಮಾಡುತ್ತಾ ಆರೋಗ್ಯವೇ ಭಾಗ್ಯ ಎಂದುಕೊಂಡು ಇದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....