LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕ ಸಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದುರಗಪ್ಪ ಚಿಕಿತ್ಸೆ ಫಲಿಸದೇ ಸಾವು.....

ರಾಯಚೂರು -

ನೇಮಕಾತಿ ವಿಳಂಬದಿಂದ ಖಿನ್ನತೆಗೊಳಗಾಗಿ ಶಿಕ್ಷಕ ರೊಬ್ಬರು ಸಾವಿಗೀಡಾದ ಘಟನೆ ರಾಯ ಚೂರಿನಲ್ಲಿ ನಡೆದಿದೆ.ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಪದವೀಧರ ಶಿಕ್ಷಕರ ನೇಮಕದಲ್ಲಿ ಆಯ್ಕೆಯಾಗಿದ್ದ ಶಿಕ್ಷಕ.

ಶಾಲೆಗೆ ಹಾಜರಾಗುವ ಮುನ್ನವೇ ನೇಮಕಾತಿ ವಿಳಂಬ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.ಖಿನ್ನತೆಯಿಂದ ಮೆದುಳು ಸಂಬಂಧಿ ಕಾಯಿಲೆಗೆ ತುತ್ತಾಗಿ ಸಾವಿಗೀಡಾಗಿದ್ದಾರೆ‌‌‌. ದುರಗಪ್ಪ ನರಸಪ್ಪ ಪೂಲಭಾವಿ (33) ಮೃತ ರಾದವರಾಗಿದ್ದಾರೆ‌.

ಪದವೀಧರರ ಶಿಕ್ಷಕರ ನೇಮಕಾತಿಯ ಎರಡನೇ ಹಂತದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉಳಿಕೆ ವೃಂದದ ಹುದ್ದೆಗೆ ಆಯ್ಕೆಯಾಗಿದ್ದ ದುರುಗಪ್ಪ. ಈಚೆಗೆ ಕೌನ್ಸೆಲಿಂಗ್‌ನಲ್ಲಿ ದಾಖಲೆಗಳ ಪರಿಶೀಲನೆ ಯಲ್ಲಿ ಭಾಗಿಯಾಗಿದ್ದರು.ಮೊದಲ ಹಂತದಲ್ಲಿ ಆಯ್ಕೆಯಾಗದ್ದರಿಂದ ಮತ್ತು ದೀರ್ಘಕಾಲ ನೇಮಕಾತಿ ವಿಳಂಬ ಸೇರಿ ಹಲವು ಕಾರಣಗ ಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಎರಡನೇ ಹಂತದಲ್ಲಿ ಆಯ್ಕೆಯಾದರೂ ಪರಿಶೀಲನೆಗೆ ಮೆಡಿಕಲ್‌ ಸರ್ಟಿಫಿಕೆಟ್ ಪಡೆಯಲು ಪರದಾಡಿದ್ದರು.ನಂತರದ ದಿನ ಗಳಿಂದ ನಿರಂತರ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಕೊನೆಗೆ ಚಿಕಿತ್ಸೆ ಫಲಿಸದೆ ಬೆಂಗಳೂರಿನ ನಿಮಾನ್ಸ್‌ನಲ್ಲಿ ಸಾವಿಗೀಡಾಗಿ ದ್ದಾರೆ.ಇವರಿಗೆ ನಾಲ್ಕು ತಿಂಗಳ ಮಗು, ಪತ್ನಿ, ತಂದೆ, ತಾಯಿ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ರಾಯಚೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....