ಪುತ್ತೂರು -
ಕೆರೆಗೆ ಬಿದ್ದು ಯೋಗ ಶಿಕ್ಷಕ ರೊಬ್ಬರು ಕೆರೆಗೆ ಬಿದ್ದು ಸಾವಿಗೀಡಾದ ಘಟನೆ ಪುತ್ತೂರಿನಲ್ಲಿ ನಡೆದಿದೆ ಪ್ರಸಾದ್ ಪಾಣಾಜೆ ಕೆರೆಗೆ ಬಿದ್ದು ಸಾವಿಗೀಡಾದ ಶಿಕ್ಷಕ ರಾಗಿದ್ದು ಹಿರಿಯ ಯೋಗಶಿಕ್ಷಕ, ಬನ್ನೂರು ಗ್ರಾಮದ ನೆಕ್ಕಿಲ ನಿವಾಸಿ ಪ್ರಸಾದ್ ಪಾಣಾಜೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಬೆಳಿಗ್ಗೆ ಅಡಿಕೆ ತೋಟಕ್ಕೆ ತೆರಳಿದ್ದ ಅವರು ಬಹಳ ಸಮಯವಾದರೂ ಹಿಂತಿರುಗಿ ಮನೆಗೆ ಬಾರದಿದ್ದ ಹಿನ್ನಲೆಯಲ್ಲಿ ಅವರ ಪತ್ನಿ ಹುಡುಕಿಕೊಂಡು ತೋಟಕ್ಕೆ ಹೋದಾಗ ತೋಟದ ಕೆರೆಯ ನೀರಿನಲ್ಲಿ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.
ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದ ಅವರು ಆಕಸ್ಮಿಕ ವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವುದಾಗಿ ಮೃತರ ಪತ್ನಿ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಪುತ್ತೂರು.....