ತುಮಕೂರು -
ಸರ್ಕಾರಿ ಶಾಲೆಯಲ್ಲಿ ಏಕಾಏಕಿ ಭಾರೀ ಸ್ಫೋಟ ಕಟ್ಟಡದ ಗೋಡೆ ಛಿದ್ರ ಛಿದ್ರ, ಅಷ್ಟಕ್ಕೂ ಆಗಿದ್ದೇನು ಘಟನೆ ನಡೆದಿದ್ದು ಎಲ್ಲಿ ಗೊತ್ತಾ ಹೌದು ಇಂತಹ ದೊಂದು ಘಟನೆ ತುಮಕೂರಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ ಭಾರೀ ಸ್ಫೋಟ ಸಂಭವಿಸಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಹೋಬಳಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಅಕ್ಷರ ದಾಸೋಹದ ಅಡುಗೆ ಕೋಣೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು ಅಡುಗೆ ಸಹಾಯಕಿ ಗಾಯಗೊಂಡಿದ್ದಾರೆ.
ಇನ್ನು ಸ್ಫೋಟದ ತೀವ್ರತೆಗೆ ಶಾಲಾ ಕಟ್ಟಡದ ಗೋಡೆ ಛಿದ್ರ ಛಿದ್ರವಾಗಿದೆ.ಕುಕ್ಕರ್ ಸ್ಫೋಟವೋ ಗ್ಯಾಸ್ ಸಿಲಿಂಡರ್ ಅವಘಡವೋ ಎಂಬೊದು ದೊಡ್ಡ ಯಕ್ಷ ಪ್ರಶ್ನೆ ಯಾಗಿದೆ ಅಡುಗೆ ಕೋಣೆಯಲ್ಲಿ ಏಕಾಏಕಿ ಸ್ಫೋಟವಾಗಿದ್ದು, ಅಡುಗೆ ಕೆಲಸ ಮಾಡುತ್ತಿದ್ದ ಲತಾ ಎಂಬುವರು ಗಾಯಗೊಂಡಿದ್ದಾರೆ.
ಸದ್ಯ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಅಡುಗೆ ಕೋಣೆಯ ಕಟ್ಟಡದ ಭಾಗ ಕುಸಿತಗೊಂಡಿದ್ದು, ಕುಕ್ಕರ್ ಸ್ಫೋಟವೋ ಅಥವಾ ಗ್ಯಾಸ್ ಸಿಲಿಂಡರ್ ಅವಘಡವೋ ಪ್ರಶ್ನೆ ಮೂಡಿದ್ದು, ಸ್ಫೋಟಕ್ಕೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಸದ್ಯ, ಘಟನಾಸ್ಥಳಕ್ಕೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. ಇನ್ನು ಈ ಘಟನೆಯಿಂದ ಶಾಲಾ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸುದ್ದಿ ಸಂತೆ ನ್ಯೂಸ್ ತುಮಕೂರು.....