LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬಾಗಿಲು ಮುಚ್ಚಿದ್ದ ಶಾಲೆ ಮತ್ತೆ ಆರಂಭ ನಾಲ್ಕು ವರ್ಷಗಳ ನಂತರ ಬಾಗಿಲು ತೆರೆದ ಶಾಲೆ

ಹೌದು ಕಳೆದ 4 ವರ್ಷಗಳಿಂದ ಬಂದ್‌ ಆಗಿದ್ದ (ಮುಚ್ಚಿದ್ದ) ನಗರದ ಉದ್ದಾರ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪುನರಾರಂಭ ಮಾಡಲಾಯಿತು.ಶಾಲೆಯನ್ನು ಸಿಂಗರಿಸಿ, ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಮಕ್ಕಳು ಖುಷಿಯಿಂದ ಕುಣಿದಾಡಿದರು.ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಪಂಡಿತ ನಿಂಬೂರ ಮಾತನಾಡಿ, ಸತತವಾಗಿ ಮಕ್ಕಳ ಸಂಖ್ಯೆ ಕ್ಷೀಣಿಸಿದ್ದರಿಂದ 2018 ರಲ್ಲಿ ಈ ಶಾಲೆಯನ್ನು ಬಂದ್ ಮಾಡಲಾಗಿತ್ತು ಎಂದರು.

 

ಪಾಲಕರು ಶಾಲೆ ಆರಂಭಿಸುವಂತೆ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದ್ದರು.ಮಕ್ಕಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಖಾತರಿ ನೀಡಿದ್ದರು ಕಾರಣ ಮಕ್ಕಳ ಸಂಖ್ಯೆ ಪರಿಶೀಲಿಸಿ ಶಾಲೆಆ ರಂಭಿಸಲಾಯಿತು ಎಂದರು.

 

11ಕ್ಕಿಂತ ಹೆಚ್ಚು ಮಕ್ಕಳ ಸಂಖ್ಯೆ ಇದ್ದರೆ ಅಲ್ಲಿ ಶಾಲೆ ಆರಂಭಿಸಬೇಕೆನ್ನುವ ನಿಯಮವಿದೆ. ಈಗ ಮಕ್ಕಳ ಸಂಖ್ಯೆ 15 ಕ್ಕೂ ಹೆಚ್ಚು ಇದೆ.ಪಾಲಕರು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಗಮನಹರಿಸಬೇಕು ಎಂದು ಕರೆ ನೀಡಿದರು.

 

ಅಧಿಕಾರಿಗಳಾದ ಮೌನೇಶ ಕಂಬಾರ, ಖಾದರಪಟೇಲ, ಶಿವಪುತ್ರ, ಚನ್ನಪ್ಪ ಕ್ಯಾದಗಿ, ಶರಣು ಗೋನಾಲ, ನಿವೃತ್ತ ಬಿಇಓ ಡಿ.ಎಂ. ನಾಯಕ, ಮುಖ್ಯ ಶಿಕ್ಷಕಿ ಇಂದುಮತಿ, ನಗರಸಭೆ ಸದಸ್ಯ ಶಿವಕುಮಾರ ಕಟ್ಟಿಮನಿ, ಭೂನ್ಯಾಯ ಮಂಡಳಿ ಸದಸ್ಯ ಪಾರಪ್ಪ ಗುತ್ತೇದಾರ, ಧರ್ಮರಾಜ ಮಂಗಿಹಾಳ, ಜಟ್ಟೆಪ್ಪ ಇದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....