LIVE TV LocalCrimeNationalInternationalPoliticsEducationTechnologyEntertainmentSportsFeature
State News

ಚಿಗರಿ ಬಸ್ ಗಳ ಕಾಡತಾ ಇದೆ ರೇಡಿಯೇಟರ್ ಸಮಸ್ಯೆ - ಹುಬ್ಬಳ್ಳಿಯಲ್ಲೊಮ್ಮೆ ಧಾರವಾಡದಲ್ಲೊಮ್ಮೆ ನೀರು ಹಾಕಿದ್ದೇ ಹಾಕಿದ್ದು ಚಾಲಕರ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ AC ಆಫೀಸ್ ನಲ್ಲಿ ಮೌನವಾಗಿದ್ದಾರೆ ಅಧಿಕಾರಿಗಳು.....

ಹುಬ್ಬಳ್ಳಿ -

ಚಿಗರಿ ಬಸ್ ಗಳ ಕಾಡತಾ ಇದೆ ರೇಡಿಯೇಟರ್ ಸಮಸ್ಯೆ - ಹುಬ್ಬಳ್ಳಿಯಲ್ಲೊಮ್ಮೆ ಧಾರವಾಡದ ಲ್ಲೊಮ್ಮೆ ನೀರು ಹಾಕಿದ್ದೇ ಹಾಕಿದ್ದು ಚಾಲಕರ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ AC ಆಫೀಸ್ ನಲ್ಲಿ ಮೌನವಾಗಿದ್ದಾರೆ ಅಧಿಕಾರಿಗಳು

ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ತ್ವರಿತ ಸಾರಿಗೆ ಸಂಪರ್ಕ ಸಾರಿಗೆಯಾಗಿ ಚಿಗರಿ ಬಸ್ ಗಳು ಸಂಚಾರವನ್ನು ಮಾಡುತ್ತಿವೆ.ಎರಡು ನಗರಗಳ ಮಧ್ಯೆ ಈ ಒಂದು ಚಿಗರಿ ಬಸ್ ಗಳನ್ನು ಬಿಆರ್ ಟಿಎಸ್ ಸಂಸ್ಥೆ ಓಡಾಡಿಸುತ್ತಿದ್ದು ಹತ್ತಾರು ಸಮಸ್ಯೆಗಳ ನಡುವೆ ಈ ಒಂದು ಸಾರಿಗೆ ಸಾರ್ವ ಜನಿಕರಿಗೆ ಅನುಕೂಲದೊಂದಿಗೆ ಅನಾನೂಕೂಲ ವಾಗಿದೆ.

ಅವೈಜ್ಞಾನಿಕವಾಗಿರುವ ಈ ಒಂದು ಬಸ್ ಸೇವೆಗೆ ಸಾಕಷ್ಟು ಪ್ರಮಾಣದಲ್ಲಿ ವಿರೋಧ ಕೂಡಾ ಕಂಡು ಬರುತ್ತಿದೆ.ಇದಕ್ಕೆ ನೂರೆಂಟು ಕಾರಣಗ ಳಿದ್ದು ಇನ್ನೂ ಇದು ಒಂದೆಡೆಯಾದರೆ ಇನ್ನೂ ಚಾಲಕರಿಗೂ ಕೂಡಾ ಈ ಒಂದು ಚಿಗರಿ ಬಸ್ ಗಳು ದೊಡ್ಡ ಪ್ರಮಾಣದಲ್ಲಿ ದೊಡ್ಡ ತಲೆ ನೋವಾಗಿವೆ.

ಒಂದು ಕಡೆಗೆ ಸೆನ್ಸಾರ್ ಗಳ ಮೇಲೆ ನಡೆಯುತ್ತಿ ರುವ ಬಸ್ ಗಳನ್ನು ಇಲಾಖೆ ಸರಿಯಾಗಿ ಮೇಲಿಂದ ಮೇಲೆ ದುರಸ್ತಿ ಸೇರಿದಂತೆ ಏನು ಕೂಡಾ ಮಾಡುತ್ತಿಲ್ಲ ಹೀಗಾಗಿ ಆರಂಭಗೊಂಡು ಐದು ವರ್ಷಗಳಿಂದ ಈವರೆಗೆ ಕೂಡಾ ಇದೇ ಪರಸ್ಥಿತಿಯಲ್ಲಿ ಬಸ್ ಗಳು ಸಂಚಾರವನ್ನು ಮಾಡುತ್ತಿದ್ದು ಒಂದಿಷ್ಟು ಹಿರಿಯ ನುರಿತ ಚಾಲಕರು ಇರುವ ಹಿನ್ನಲೆಯಲ್ಲಿ ಸುಮ್ಮನೇ ತಳ್ಳುತ್ತಾ ಚಿಗರಿ ಬಸ್ ಗಳು ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿವೆ.

ಇದೇಲ್ಲಾ ಒಂದು ವಿಚಾರವಾದರೆ ಇನ್ನೂ ಪ್ರಮುಖವಾಗಿ ಬಸ್ ಗಳ ವ್ಯವಸ್ಥೆ ಒಂದೆಡೆ ಇರಲಿ ಸಧ್ಯ ಸಿಕ್ಕಾಪಟ್ಟಿ ಬಿಸಿಲಿನ ತಾಪಮಾನ ಇದರ ನಡುವೆ ಬಿಡುವಿಲ್ಲದೇ ಸಂಚಾರವನ್ನು ಮಾಡುತ್ತಿರುವ ಈ ಒಂದು ಬಸ್ ಗಳನ್ನು ಯಂತ್ರ ಗಳು ಕೂಲ್ ಮಾಡುವ ವ್ಯವಸ್ಥೆ ಈ ಬಸ್ ನಲ್ಲಿ ರುವ ರೇಡಿಯೇಟರ್ .

ಈ ಒಂದು ರೇಡಿಯೇಟರ್ ಗಳ ಸರಿಯಾದ ಮೆಂಟೆನನ್ಸ್ ಇಲ್ಲದ ಕಾರಣ ರೇಡಿಯೇಟರ್ ಗಳಿಗೆ ಚಾಲಕರು ನೀರು ಹಾಕಿದ್ದೇ ಹಾಕಿದ್ದು ಹುಬ್ಬಳ್ಳಿಯಿಂದ ಧಾರವಾಡ ಗೆ ಬಂದರೆ ಧಾರವಾಡದಿಂದ ಹುಬ್ಬಳ್ಳಿಗೆ ಹೋದರೆ ನೀರು ಹಾಕಬೇಕು.

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ತಾಂತ್ರಿಕ ಬಸ್ ಶೆಲ್ಟರ್ ನ್ನು ಬಿಟ್ಟರೆ ಯಾವುದೇ ನೀರಿನ ಸೌಲಭ್ಯ  ಗಳಿಲ್ಲ ಹೀಗಾಗಿ ಚಾಲಕರಿಗೆ ದೊಡ್ಡ ಸಮಸ್ಯೆ ಯಾಗಿದ್ದು ತಾವು ಕುಡಿಯಲು ತಗೆದುಕೊಂಡು ಬಂದಿರುವ ನೀರನ್ನು ಹಾಕಿಕೊಂಡು ಬಸ್ ಗಳನ್ನು ಕೂಲ್ ಕೂಲ್ ಮಾಡುತ್ತಾ ಕರ್ತವ್ಯವನ್ನು ಮಾಡುತ್ತಿದ್ದಾರೆ.

ಒಂದು ಟ್ರೀಪ್ ಗೆ 10 ಲೀಟರ್ ಗಳ ಅವಶ್ಯಕತೆ ಇದ್ದು ಈ ಒಂದು ರೇಡಿಯೇಟರ್ ಗಳು ಕುಡಿಯು ತ್ತಿದ್ದು ಹೀಗಾಗಿ ಇದೊಂದು ಚಿಗರಿ ಬಸ್ ಚಾಲಕ ರಿಗೆ ದೊಡ್ಡ ಸಮಸ್ಯೆಯೊಂದಿಗೆ ತಲೆನೋವಾಗಿದೆ. ಈ ಒಂದು ಕುರಿತಂತೆ ಚಾಲಕರು ಡೂಟಿ ಮುಗಿದ ಮೇಲೆ ತಮ್ಮ ತಮ್ಮ ಲಾಗ್ ಶೀಟ್ ನಲ್ಲಿ ಉಲ್ಲೇಖ ವನ್ನು ಮಾಡಿ ಹೋದರು ಕೂಡಾ ಯಾರು ಕೂಡಾ ತಲೆ ಕೆಡಿಸಿಕೊಳ್ಳುತ್ತಿಲ್ಲ ಕಣ್ತೇರೆದು ನೋಡುತ್ತಿಲ್ಲ

ಎಸಿ ಯ ನಡುವೆ ಕಚೇರಿಯಲ್ಲಿ ಕುಳಿತುಕೊಳ್ಳುವ ಇಲಾಖೆಯ ಅಧಿಕಾರಿಗಳು ಇನ್ನಾದರೂ ಈ ಒಂದು ಕುರಿತಂತೆ ನೋಡಿ ಚುರು ಚುರು ಎನ್ನುವ ಬಿಸಿಲಿನ ನಡುವೆ ಈ ಒಂದು ದೊಡ್ಡ ರೇಡಿಯೇ ಟರ್ ಸಮಸ್ಯೆಗೆ ಮುಕ್ತಿ ನೀಡಿ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಧಾರವಾಡದಲ್ಲೊಮ್ಮೆ ಹುಬ್ಬಳ್ಳಿಯಲ್ಲೊಮ್ಮೆ ನೀರು ಹಾಕುವುದನ್ನೇ ದೊಡ್ಡ ತಲನೋವಾಗಿ ಮಾಡಿಕೊಂಡಿದ್ದ ಚಾಲಕರಿಗೆ ಒಂದಿಷ್ಟು ಕೂಲ್ ಮಾಡಬೇಕಿದೆ

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....