ಬೆಂಗಳೂರು -
ನಮ್ಮ ನಾಡಿಗೆ ಬಂದು ಕನ್ನಡಿಗರ ಅನ್ನ ತಿಂದು, ಇಲ್ಲಿಯೇ ಬದುಕಿ, ಕೊನೆಗೆ ಕನ್ನಡಿಗರ ಮೇಲೆಯೇ ದಬ್ಬಾಳಿಕೆ ನಡೆಸುವ ಪರಭಾಷಿಕರ ಸೊಕ್ಕು ದಿನ ದಿಂದ ದಿನಕ್ಕೆ ಮಿತಿಮೀರುತ್ತಿದೆ ಇದಕ್ಕೆ ಸಾಕ್ಷಿ ರಾಜ್ಯದ ಸರ್ಕಾರಿ ನೌಕರನಿಗೆ ಹಿಂದಿ ವಾಲಾ ಧಮ್ಕಿ ಹಾಕಿರುವ ವಿಚಾರ ಹೌದು ನಮ್ಮಲ್ಲಿ ಕೆಲಸ ಮಾಡಬೇಕೆಂದರೆ ನೀವು ಹಿಂದಿ ಕಲಿತುಕೊಂಡು ಬರಬೇಕು. ಕನ್ನಡ ಮಾತಾಡುವವರೆಲ್ಲಾ ಕೆಲಸ ಬಿಟ್ಟು ತೊಲಗಿ ಎಂದು ಖಾಸಗಿ ಕಂಪನಿಯ ವ್ಯಕ್ತಿಯೊಬ್ಬ ಕನ್ನಡಿಗರ ವಿರುದ್ಧವೇ ಉದ್ಧಟತನ ಮೆರೆದಿರುವ ಆಘಾತಕಾರಿ ವಿಡಿಯೋ ಒಂದು ಸೋಶಿಯ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿದ್ದು, ಆಕ್ರೋಶದ ಕಿಡಿ ಹೊತ್ತಿಸಿದೆ..ವೈರಲ್ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ ಕನ್ನಡದ ನೌಕರರನ್ನು ಅಕ್ಷರಶಃ ಅವಮಾನಿಸಿದ್ದಾನೆ. ಆತನ ಎದುರು ಕನ್ನಡಿಗರನ್ನು ನಿಲ್ಲಿಸಿ ಕೆಟ್ಟದಾಗಿ ಮಾತನ್ನಾಡಿದ್ದಾನೆ. ನಾನು ನಿಮಗೆ ನೇರವಾಗಿ ಹೇಳ್ತಿದ್ದೀನಿ ನೀವೆಲ್ಲರೂ ಹಿಂದಿ ಕಲಿತು ಬರಬೇಕು. ಕನ್ನಡ ಯಾರೆಲ್ಲಾ ಮಾತಾಡ್ತೀರಾ ಅವರೆಲ್ಲಾ ಕೆಲಸ ಬಿಟ್ಟು ಹೋಗ ಬಹುದು ನನಗೆ ಯಾವುದೇ ಸಮಸ್ಯೆ ಇಲ್ಲ! ನನಗೆ ಕನ್ನಡ ಬರಲ್ಲ, ನಾನು ಹಿಂದಿಯಲ್ಲೇ ಮಾತಾಡೋದು.
ಕರ್ನಾಟಕದಲ್ಲಿದ್ದರೆ ಏನಾಯ್ತುನಮ್ಮ ಬಳಿ ಕೆಲಸವಿದೆ, ಎಲ್ಲರೂ ಗಾಡಿ ಹತ್ತಿ ಜಾಗ ಖಾಲಿ ಮಾಡಿ ಎಂದು ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕಿದ್ದಾನೆ. 'ಕನ್ನಡದಲ್ಲಿ ಮಾತನಾಡು' ಎಂದು ಕೇಳಿದ ಕನ್ನಡಿ ಗರಿಗೆ ಮುಖಕ್ಕೆ ಹೊಡೆದಂತೆ ಆತ ತನ್ನ ದರ್ಪ ಪ್ರದರ್ಶಿಸಿದ್ದಾನೆಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ.. ಕನ್ನಡಗರ ಹೃದಯವನ್ನ ಕೆಣಕಿದ್ದಾರೆ. ಕನ್ನಡಿಗರ ಅನ್ನ ತಿಂದು ಕನ್ನಡಿಗರ ನೆಲದಲ್ಲಿಯೇ ಇದ್ದುಕೊಂಡು ಈ ರೀತಿ ಕನ್ನಡಿಗರ ಮೇಲೆ ದರ್ಪ ತೋರಿಸುವ ವ್ಯಕ್ತಿ ವಿರುದ್ಧ ಕಠಿಣ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿಬಂದಿದೆ.
ಪೊಲೀಸರು ತಕ್ಷಣವೇ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂಬಂಧಪಟ್ಟ ಕಂಪನಿ ಈತನಿಗೆ ತಕ್ಷಣ ಗೇಟ್‌ಪಾಸ್ ಕೊಟ್ಟು ಮನೆಗೆ ಕಳುಹಿಸಬೇಕು ಎಂದು ಕನ್ನಡಿಗರು ಒಕ್ಕೊರಲಿನಿಂದ ಎಚ್ಚರಿಕೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......