LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮೂವರು ಶಿಕ್ಷಕರು ಅಮಾನತು - ಅಮಾನತುಗೊಳಿಸಿ ಆದೇಶ ಮಾಡಿದ BEO.....

ಮಧುಗಿರಿ -

ಅನುದಾನ ದುರುಪಯೋಗ, ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಆರೋಪದ ಮೇರೆಗೆ ಮೂವರು ಶಿಕ್ಷಕರನ್ನು ಅಮಾನತುಗೊಳಿಸಿದ ಘಟನೆ ಮಧುಗಿರಿ ಯಲ್ಲಿ ನಡೆದಿದೆ ಹೌದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ಆದೇಶಿಸಿ ದ್ದಾರೆ.ಪಟ್ಟಣದ ಕೆ.ಆರ್.ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್.ಅನುಪಮಾ ತಾಲ್ಲೂಕಿನ ಹಳೆಇಟಕಲೋಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ

ಶಾಲೆಯ ಸಹ ಶಿಕ್ಷಕ ಆರ್.ವೆಂಕಟಪ್ಪ, ದೊಡ್ಡ ದಾಳವಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಎ.ಆರ್.ಶ್ರೀನಿವಾಸಮೂರ್ತಿ ಅಮಾನತುಗೊಂ ಡವರು.ಎಚ್.ಎಸ್.ಅನುಪಮಾ 'ಪಿಎಂಶ್ರೀ ಯೋಜನೆಯ ಅನುದಾನದಲ್ಲಿ ಖರ್ಚಾದ ಹಣಕ್ಕೆ ಸರಿಯಾದ ಬಿಲ್ ನೀಡಿಲ್ಲ. ಡಿಜಿಟಲ್‌ ಗ್ರಂಥಾಲ ಯಕ್ಕೆ ವೆಚ್ಚ ಮಾಡಿದ ಹಣಕ್ಕೂ ಬಿಲ್ ಮತ್ತು ಆದಾಯ ತೆರಿಗೆ ಕಟಾವಣೆ ಮಾಡಿಲ್ಲ. ಮಕ್ಕಳಿಂದ ಶಾಲೆ ಸ್ವಚ್ಛ ಮಾಡಿಸುತ್ತಾರೆ' ಎಂಬ ಆರೋಪದ ಮೇಲೆ ಕ್ರಮಕೈಗೊಳ್ಳಲಾಗಿದೆ.

ಆರ್.ವೆಂಕಟಪ್ಪ ಹಳೆಇಟಕಲೋಟಿ ಗ್ರಾಮದ ಸರ್ವೆ ನಂಬರ್ 48 ರಲ್ಲಿ 3.33 ಗುಂಟೆ ಜಮೀನು ‌ಮಂಜೂರಾತಿ ಸಂಬಂಧದಲ್ಲಿ ದಾಖಲಾತಿಗಳನ್ನು ತಿದ್ದಿ ಸಾಗುವಳಿ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಸೂಚನೆ‌ ಮೇರೆಗೆ ಕ್ರಮ ವಹಿಸಲಾಗಿದೆ.

'ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೆಣ್ಣು ಮಕ್ಕಳನ್ನು ಶೌಚಾಲಯಕ್ಕೆ ಬಿಡದಿರು ವುದು, ಮಕ್ಕಳಿಗೆ ಯಾವಾಗಲೂ ನೃತ್ಯ ಮಾಡಿ ಸುತ್ತಾ ಸರಿಯಾಗಿ ಬೋಧನೆ ಮಾಡದೆ ಕರ್ತವ್ಯ ಲೋಪ ಎಸಗಿದ' ಆರೋಪ ಎದುರಿಸುತ್ತಿದ್ದ ಎ.ಆರ್.ಶ್ರೀನಿವಾಸಮೂರ್ತಿ ಸೇರಿ ಮೂವರನ್ನು ಅಮಾನತುಗೊಳಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಮಧುಗಿರಿ ‌.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ DDPI ವರ್ಗಾವಣೆ.....ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ.....ಬೆಂಗಳೂರಿನಲ್ಲೂ ಬಿಗ್ ಮಿಶ್ರಾ ಹವಾ..... ಜಯನಗರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಬಿಗ್ ಮಿಶ್ರಾ.....ಕೇಂದ್ರ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ......ಅನುಮೋದನೆ ನೀಡಿದ ಸಚಿವ ಸಂಪುಟಶಿಕ್ಷಕ‌ನ ಕಿರುಕುಳ ಪತ್ನಿ ಆತ್ಮಹತ್ಯೆ..... ಕಳೆದ ಮೂರು ವರ್ಷಗಳಿಂದ ಮದುವೆಯಾಗಿದ್ದ ದಂಪತಿಗಳು.....3 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಅರ್ನಬ್ ಅಬ್ಬರಕ್ಕೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ.....ಶಿಕ್ಷಕರ ಕ್ಷೇತ್ರದಲ್ಲಿ ರಂಗನಾಥ್‌ ಗೆಲುವು.....ಪುಟ್ಟಣ್ಣ ಗೆ ಸೋಲಿನ‌ ರುಚಿ ತೋರಿಸಿದ ಮತದಾರರು.....ಸಂಕಷ್ಟದಲ್ಲಿ ಸರ್ಕಾರಿ ಅಧಿಕಾರಿ.....ವಿಡಿಯೋ ಹಾಕಿ ಎಡವಟ್ಟು ಮಾಡಿಕೊಂಡ ಅಧಿಕಾರಿ.....ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ..... ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ ಶಿಕ್ಷಕ ಮುಹಮ್ಮದ್ ರಫಿ ಕಾರ್ಯಕ್ಕೆ ಮೆಚ್ಚುಗೆ.....ಸರ್ಕಾರಿ ನೌಕರ ಆತ್ಮಹತ್ಯೆ....ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೌಕರ.....ಮಾಜಿ ಶಿಕ್ಷಣ ಸಚಿವ ಬಂಧನ..... ಶಾಲೆಗಳ ಅನುಮತಿ ನೀಡುವ 100 ಕೋಟಿ ವಂಚನೆ ಕೇಸ್​ನಲ್ಲಿ ಲಾಕ್.....