LIVE TV LocalCrimeNationalInternationalPoliticsEducationTechnologyEntertainmentSportsFeature
State News

ಎಣ್ಣೇ ಮೇಸ್ಟ್ರು ನಿಂದ ಬೇಸತ್ತ ಶಾಲಾ ಶಿಕ್ಷಕರು,ಮಕ್ಕಳು,ಗ್ರಾಮಸ್ಥರು - ಶಾಲೆಗೆ ಚಕ್ಕರ್ ಬಾರ್ ಗೆ ಹಾಜರ್ ಕೃಷ್ಣೇಗೌಡ ಮೇಸ್ಟ್ರು

ಕೊಪ್ಪಳ -

ಸಾಮಾನ್ವವಾಗಿ ಶಿಕ್ಷಕರು ಎಂದರೆ ಸಮಾಜದಲ್ಲಿ ದೊಡ್ಡ ಸ್ಥಾನ ಮಾನ ಗೌರವ ಇದೆ.ಇವರನ್ನು ಗುರುಗಳ ರೂಪದಲ್ಲಿ ಇಡೀ ಸಮಾಜವೇ ಕಾಣುತ್ತದೆ ಹೀಗಿರುವಾಗ ಇಲ್ಲೊರ್ವ ಎಣ್ಣೇ ಮೇಸ್ಟ್ರು ನಿಂದಾಗಿ ಶಿಕ್ಷಕ ಸಮುದಾಯವೇ ತಲೆ ತಗ್ಗಿಸುವಂತಾಗುತ್ತಿದೆ.ಹೌದು  ಶಿಕ್ಷಕನೋರ್ವ ಶಾಲೆಗೆ ಗೈರಾಗಿ ಕಂಠ ಪೂರ್ತಿ ಕುಡಿದು ಎಣ್ಣೆ ಮತ್ತಿನಲ್ಲಿ ತೂರಾಡಿಕೊಂಡು ಹೋಗುತ್ತಾರೆ.ಹೀಗೆ ಹೋಗುವಾಗ ಬಿದ್ದು ತಲೆಗೆ ಗಾಯ ಮಾಡಿ ಕೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ

ಜಿಲ್ಲೆಯ ಕುಷ್ಟಗಿ ತಾಲೂಕಿನ ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣೇಗೌಡ ಎಂಬುವರೆ ಈ ಒಂದು ಎಡವಟ್ಟು ಮಾಡಿಕೊಂಡವರಾಗಿದ್ದಾರೆ.ಮೂಲತಃ ಹಾಸನ ಜಿಲ್ಲೆಯವರಾಗಿರುವ ಇವರು ಪರಸ್ಪರ ವರ್ಗವಣೆ ಮೇರೆಗೆ ಚಿಕ್ಕನಂದಿಹಾಳ ಶಾಲೆಗೆ ಈಗಷ್ಟೇ ಬಂದಿ ದ್ದಾರೆ. ಕುಷ್ಟಗಿ ಬಸ್ ನಿಲ್ದಾಣದ ಬಳಿ ಸದರಿ ಶಿಕ್ಷಕ ಕೃಷ್ಣೆಗೌಡ ಕಂಠ ಪೂರ್ತಿ ಕುಡಿದು ತೂರಾಡಿ ಕೊಂಡು ಬಸ್ ನಿಲ್ದಾಣದ ಬಳಿ ಎಡವಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾರೆ.

ಸ್ಥಳೀಯರು ಕೂಡಲೇ 108 ಆಯಂಬ್ಯುಲೆನ್ಸ್ ಗೆ ಕರೆ ಮಾಡಿ ತಿಳಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿಕೊಂಡಿರಬೇಕಾದ ಶಿಕ್ಷಕ ಕೃಷ್ಣೆಗೌಡ ಗೈರಾಗಿ ಕುಷ್ಟಗಿ ಪಟ್ಟಣದಲ್ಲಿ ಕುಡುಕನಂತೆ ತೂರಾಡಿಕೊಂ ಡಿರುವ ನಡವಳಿಕೆಗೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು ಚಿಕ್ಕನಂದಿಹಾಳ ಶಾಲೆಗೆ ಪರಸ್ಪರ ವರ್ಗಾವಣೆ ಮೇರೆಗೆ ಶಿಕ್ಷಕ ಸೇವೆಯಲ್ಲಿದ್ದು ಪದೇ ಪದೇ ಗೈರು ಹಿನ್ನೆಲೆಯಲ್ಲಿ ನೋಟೀಸ್ ನೀಡಿ ವೇತನ ತಡೆಹಿಡಿಯಲಾಗಿತ್ತು ಈ ಪ್ರಕರಣದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಬೇಕಿದೆ ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಸಿಆರ್ ಪಿ ಶಾಲೆಗೆ ಸ್ಥಾನಿಕ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....