LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕ ಗುಂಡಪ್ಪ ಭಂಕೂರ ಅವರಿಗೆ PMK ಫ್ಯಾನ್ಸ್ ಕ್ಲಬ್‌ನಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.....

ಕೊಂಚೂರ -

PMK ಫ್ಯಾನ್ಸ್ ಕ್ಲಬ್‌ನಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಗುಂಡಪ್ಪ ಭಂಕೂರ ಅವರಿಗೆ ಶಾಲೆಯಲ್ಲಿಅಭಿನಂದನೆ
ಕೊಂಚೂರು PMK ಫ್ಯಾನ್ಸ್ ಕ್ಲಬ್ ವತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಗುಂಡಪ್ಪ ಬಸವರಾಜ ಭಂಕೂರ ಅವರನ್ನು ಕೊಂಚೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಯ ಮುಖ್ಯಗುರುಗಳು ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಸನ್ಮಾನಿಸಿ ಅಭಿನಂದಿ ಸಲಾಯಿತು.

ಗಾಂಧೀಜಿ ಜಯಂತಿ ಅಂಗವಾಗಿ ಶಾಲಾ ಆವರಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಗುಂಡಪ್ಪ ಭಂಕೂರ ಅವರಿಗೆ ದೊರೆತ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸ್ಮರಿಸಿ, ಅವರ ಶೈಕ್ಷಣಿಕ ಸೇವೆ, ವಿದ್ಯಾರ್ಥಿಗಳ ಮೇಲಿನ ಕಾಳಜಿ ಹಾಗೂ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಲಾಯಿತು.

ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಶಕುಂತಲಾ ಬಿಲಗುಂದಿ ಹಾಗೂ ಸರಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀ ಮಣಿಸಿಂಗ್ ಚವ್ಹಾಣ ಅವರು ಗುಂಡಪ್ಪ ಭಂಕೂರ ಅವರನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸುವಂತೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಪರಮೇಶ್ವರ, ರೇವಣಸಿದ್ಧಯ್ಯ, ನಾಗರಾಜ, ವಿಶ್ವನಾಥ, ಶ್ರೀಕಾಂತ, ಮರೆಪ್ಪ, ಶಿಕ್ಷಕಿಯರಾದ ಶ್ರೀಮತಿ ಶ್ರೀದೇವಿ, ಶ್ರೀಮತಿ ಶಿವಲಿಂಗಮ್ಮ, ಶ್ರೀಮತಿ ಮೀನಾಕ್ಷಿ, ಕು. ಸೋನಾ, ಕು. ಪೋನಮ್, ಕು. ಶರಣಮ್ಮ, ಶ್ರೀಮತಿ ನಾಗರತ್ನ, ಶ್ರೀಮತಿ ಮಹಾದೇವಿ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯಗುರುಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದಿಂದ ದೊರೆತ ಗೌರವಕ್ಕೆ ಶ್ರೀ ಗುಂಡಪ್ಪ ಬಸವರಾಜ ಭಂಕೂರ ಅವರು ಕೃತಜ್ಞತೆ ಸಲ್ಲಿಸಿದರು.

ಸುದ್ದಿ ಸಂತೆ ನ್ಯೂಸ್ ಕೊಂಚೂರ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ DDPI ವರ್ಗಾವಣೆ.....ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ.....ಬೆಂಗಳೂರಿನಲ್ಲೂ ಬಿಗ್ ಮಿಶ್ರಾ ಹವಾ..... ಜಯನಗರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಬಿಗ್ ಮಿಶ್ರಾ.....ಕೇಂದ್ರ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ......ಅನುಮೋದನೆ ನೀಡಿದ ಸಚಿವ ಸಂಪುಟಶಿಕ್ಷಕ‌ನ ಕಿರುಕುಳ ಪತ್ನಿ ಆತ್ಮಹತ್ಯೆ..... ಕಳೆದ ಮೂರು ವರ್ಷಗಳಿಂದ ಮದುವೆಯಾಗಿದ್ದ ದಂಪತಿಗಳು.....3 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಅರ್ನಬ್ ಅಬ್ಬರಕ್ಕೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ.....ಶಿಕ್ಷಕರ ಕ್ಷೇತ್ರದಲ್ಲಿ ರಂಗನಾಥ್‌ ಗೆಲುವು.....ಪುಟ್ಟಣ್ಣ ಗೆ ಸೋಲಿನ‌ ರುಚಿ ತೋರಿಸಿದ ಮತದಾರರು.....ಸಂಕಷ್ಟದಲ್ಲಿ ಸರ್ಕಾರಿ ಅಧಿಕಾರಿ.....ವಿಡಿಯೋ ಹಾಕಿ ಎಡವಟ್ಟು ಮಾಡಿಕೊಂಡ ಅಧಿಕಾರಿ.....ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ..... ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ ಶಿಕ್ಷಕ ಮುಹಮ್ಮದ್ ರಫಿ ಕಾರ್ಯಕ್ಕೆ ಮೆಚ್ಚುಗೆ.....ಸರ್ಕಾರಿ ನೌಕರ ಆತ್ಮಹತ್ಯೆ....ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೌಕರ.....ಮಾಜಿ ಶಿಕ್ಷಣ ಸಚಿವ ಬಂಧನ..... ಶಾಲೆಗಳ ಅನುಮತಿ ನೀಡುವ 100 ಕೋಟಿ ವಂಚನೆ ಕೇಸ್​ನಲ್ಲಿ ಲಾಕ್.....