LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಭೂಗತ ಪಾತಕಿ ಬಚ್ಚಾಖಾನ್ ವಿಚಾರಣೆ – ಧಾರವಾಡದ ಉಪನಗರ ಪೊಲೀಸರಿಂದ ಬಿಡುವಿಲ್ಲದ ತನಿಖೆ

ಧಾರವಾಡ -

ಭೂಗತ ಪಾತಕಿ ಬಚ್ಚಾಖಾನ್ ನನ್ನು ವಶಕ್ಕೆ ತಗೆದುಕೊಂಡಿರುವ ಧಾರವಾಡ ಉಪನಗರ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಈಗಾಗಲೇ ಬಚ್ಚಾಖಾನ್ ನನ್ನು ಧಾರವಾಡ ಉಪನಗರ ಪೊಲೀಸ್ ವಶಕ್ಕೆ ತಗೆದಕೊಂಡು ನಿನ್ನೇಯಷ್ಚೇ ನ್ಯಾಯಾಲಯಕ್ಕೆ ಹಾಜರು ಮಾಡಿ ನಾಲ್ಕು ದಿನಗಳ ಕಾಲ ವಶಕ್ಕೆ ತಗೆದುಕೊಂಡಿದ್ದಾರೆ.

ಮೈಸೂರು ಜೈಲಿನಲ್ಲಿದ್ದುಕೊಂಡೇ ಧಾರವಾಡದ ಅನೇಕರಿಗೆ ತನ್ನ ಬಂಟರ ಮೂಲಕ ಧಮ್ಕಿ ಹಾಕಿಸಿ ಹಫ್ತಾ ವಸೂಲಿಗಿಳಿದಿದ್ದನಂತೆ. ಈ ಕುರಿತಂತೆ ಧಾರವಾಡದ ರೆಹಮಾನ್ ಎಂಬುವರು ಉಪನಗರ ಪೊಲೀಸರಿಗೆ ದೂರನ್ನು ನೀಡಿದ್ದರು. ದೂರು ದಾಖಲು ಮಾಡಿಕೊಂಡಿದ್ದ ಉಪನಗರ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ಮತ್ತು ಇತರೆ ಸಿಬ್ಬಂದಿಗಳು ಅನುಮತಿ ತಗೆದುಕೊಂಡು ಮೈಸೂರು ಕಾರಾಗೃಹದಿಂದ ವಶಕ್ಕೆ ತಗೆದುಕೊಂಡು ಬಂದಿದ್ದಾರೆ.

ಬಚ್ಚಖಾನ್ ಫ್ರೂಟ್ ಇರ್ಫಾನ್ ಸಾವಿನ ಬಳಿಕ ಹುಬ್ಬಳ್ಳಿ-ಧಾರವಾಡ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದರಂತೆ.ಅಲ್ಲದೇ ಉಪನಗರ ಠಾಣೆ ವ್ಯಾಪ್ತಿಯಲ್ಲಿನ ಅನೇಕ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದಂತೆ. ಪೆಟ್ರೋಲ್ ಬಂಕ್ ಮಾಲೀಕರು ಸೇರಿ ಅನೇಕರಿಗೆ ಬಚ್ಚಾಖಾನ್ ಬಂಟರಿಂದ ಧಮ್ಕಿ ಹಾಕಿದ್ದು ಈ ಒಂದು ಹಿನ್ನೆಲೆಯಲ್ಲಿ ಬಚ್ಚಾಖಾನ್ ನನ್ನು ಉಪನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೇ ನ್ಯಾಯಾಲಯಕ್ಕೇ ಹಾಜರು ಮಾಡಿದ್ದು ಸಧ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶದಲ್ಲಿದ್ದು ತನಿಖೆ ಮಾಡಲಾಗುತ್ತಿದೆ. ಜೈಲಿನಲ್ಲಿದ್ದುಕೊಂಡು ಹೇಗೆ ಬೆದರಿಕೆ ಹಾಕಲಾಗಿದೆ ಯಾರಿಂದ ಯಾರು ಹಾಕಿದ್ದಾರೆ ಇವೆಲ್ಲ ವಿಚಾರ ಕುರಿತಂತೆ ಇನಸ್ಪೇಕ್ಟರ್ ಪ್ರಮೋದ ಯಲಿಗಾರ,ಪಿಎಸೈ ಶ್ರೀಮಂತ ಹುಣಸಿಕಟ್ಟಿ ಸೇರಿದಂತೆ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ತನಿಖೆಯನ್ನು ಮಾಡ್ತಾ ಇದ್ದಾರೆ.ಬಿಡುವಲ್ಲದೇ ತನಿಖೆಯನ್ನು ಮಾಡುತ್ತಿದ್ದು ವಿಚಾರಣೆ ಸಮಯದಲ್ಲಿ ಕೆಲ ಮಹತ್ವದ ಮಾಹಿತಿಗಳು ದಾಖಲೆಗಳು ಪೊಲೀಸರಿಗೆ ಸಿಕ್ಕಿದ್ದು ಇನ್ನೂ ಕೂಡಾ ತನಿಖೆ ಮಾಡಲಾಗುತ್ತಿದೆ.

ಇದರೊಂದಿಗೆ ಇವನ ಇನ್ನೂ ಮೂವರು ಬಂಟರನ್ನು ಕೂಡಾ ಬಂಧಿಸಲಾಗಿದ್ದು ಅವರನ್ನು ಉಪನಗರ ಠಾಣೆ ಪೊಲೀಸರು ಬಚ್ಚಾಖಾನ್‌ ನೊಂದಿಗೆ ವಿಚಾರಣೆಯನ್ನು ಮಾಡುತ್ತಿದ್ದಾರೆ.ಕೆಲವು ಮಹತ್ವದ ವಿಚಾರಗಳು ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ಸಿಕ್ಕಿದ್ದು ಬಿಡುವಿಲ್ಲದೇ ತನಿಖೆ ನಡೆಯುತ್ತಿದೆ.

ಇನ್ನೂ ಉಪನಗರ ಪೊಲೀಸರಿಗೆ ಧಾರವಾಡ ಶಹರ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಶ್ರೀಧರ ಸತಾರೆ,ವಿದ್ಯಾಗಿರಿ ಪೊಲೀಸ್ ಠಾಣೆ ಇನಸ್ಪೇಕ್ಟರ್ ಮಹಾಂತೇಶ ಬಸಾಪೂರ, ಸಂಚಾರಿ ಪೊಲೀಸ್ ಠಾಣೆ ಇನಸ್ಪೇಕ್ಟರ್ ಮಲಗೌಡ ನಾಯ್ಕರ್, ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....